ಈ ಕಾರಣಕ್ಕೆ ವಾಹನ ಖರೀದಿ ನಿರ್ಧಾರ ಮುಂದೂಡಿದ್ದಾರೆ ಜನ;‌ ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಕೋವಿಡ್ ಯಾವ ರೀತಿಯಲ್ಲಿ ಅನಿಶ್ಚಿತತೆ ತಂದೊಡ್ಡಬಹುದೆಂದು ಅರಿತಿರುವ ಜನರು ವಾಹನದ ಮೇಲೆ ಹಣ ಹಾಕಲು ಹಿಂದೇಟು ಹಾಕಿರುವ ಬೆಳವಣಿಗೆ ಸರ್ವೆಯಿಂದ ಖಚಿತವಾಗಿದೆ.ಮೊಬಿಲಿಟಿ ಔಟ್‌ಲುಕ್‌ನ ಸಮೀಕ್ಷೆಯು 80 ಪ್ರತಿಶತದಷ್ಟು ಗ್ರಾಹಕರು ನಾಲ್ಕು-ಚಕ್ರ ವಾಹನವನ್ನು ಖರೀದಿಸುವ ನಿರ್ಧಾರವನ್ನು ಮುಂದೂಡುವಂತೆ ಕೋವಿಡ್ ಮಾಡಿದೆ ಎಂಬ ಅಂಶ ದಾಖಲಿಸಿದೆ.ಪ್ರತಿಕ್ರಿಯಿಸಿದವರಲ್ಲಿ 82 ಪ್ರತಿಶತದಷ್ಟು ಜನರು ದ್ವಿಚಕ್ರ ವಾಹನವನ್ನು ಖರೀದಿಸುವ ಯೋಜನೆಗೆ ತಡೆಹಾಕಿದ್ದಾರೆ.ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಜನರ ಗಮನಹರಿದಿದೆ. ದ್ವಿಚಕ್ರ ವಾಹನ ಖರೀದಿಸಲು ಬಯಸಿದ ಗ್ರಾಹಕರ ಪೈಕಿ 40 ಪ್ರತಿಶತ ಗ್ರಾಹಕರು ಈ ವರ್ಷ ಇವಿ ಖರೀದಿಸಲು ಸಿದ್ಧರಿದ್ದು, 2021 ರಿಂದ ಖರೀದಿ ‌ಪ್ರಮಾಣ ಸ್ವಲ್ಪ ಹೆಚ್ಚಳವಾಗಿದೆ.ಹಾಗೆಯೇ ಪ್ರತಿಕ್ರಿಯಿಸಿದವರಲ್ಲಿ 80 ಪ್ರತಿಶತದಷ್ಟು ಜನರು 4 ಚಕ್ರದ ವಾಹನವನ್ನು ಖರೀದಿಸುವ ನಿರ್ಧಾರವನ್ನು ಮುಂದೂಡಿದ್ದಾರೆ ಮತ್ತು 82 ಪ್ರತಿಶತದಷ್ಟು ಜನರು ಕೋವಿಡ್ -19 ನಂತರದ ಪರಿಣಾಮಗಳ ಕಾರಣದಿಂದಾಗಿ ದ್ವಿಚಕ್ರ ವಾಹನ ಖರೀದಿಸುವ ನಿರ್ಧಾರವನ್ನು ಮುಂದೂಡಿದ್ದಾರೆ. ಈ ವರ್ಷ ಮುಂದೂಡುವ ಜನರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ವಾಹನ ಖರೀದಿ ಮತ್ತು ಕೋವಿಡ್ -19 ರ ಪರಿಣಾಮಗಳಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು ಎಂದು ಕಾರ್ಟ್ರೇಡ್ ಟೆಕ್ನ ಬ್ರ್ಯಾಂಡ್ ಮೊಬಿಲಿಟಿ ಔಟ್ ಲುಕ್ ಹೇಳಿದೆ.ಸಮೀಕ್ಷೆಯು ಭಾರತೀಯ ಆಟೋಮೋಟಿವ್ ಕನ್ಸ್ಯೂಮರ್ ಕ್ಯಾನ್ವಾಸ್ 2022ರ ಮಾರ್ಚ್ 3-12 ರವರೆಗೆ ನಡೆಸಲ್ಪಟ್ಟಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ 40 ಪ್ರತಿಶತ ದ್ವಿಚಕ್ರ ವಾಹನ ಗ್ರಾಹಕರು ಈ ವರ್ಷ ಇವಿ ಖರೀದಿಸಲು ಸಿದ್ಧರಿದ್ದಾರೆಂದು ಕಂಡುಹಿಡಿದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏಪ್ರಿಲ್‌ ತಿಂಗಳ ಈ ದಿನಾಂಕಗಳಲ್ಲಿ ಬ್ಯಾಂಕ್‌ಗಳಿಗೆ ರಜೆ, ಇಂದೇ ನಿಮ್ಮ ಕೆಲಸ ಮುಗಿಸಿಕೊಳ್ಳಿ

Tue Mar 29 , 2022
ನವದೆಹಲಿ: ಹೊಸ ಹಣಕಾಸು ವರ್ಷವು ಏಪ್ರಿಲ್ 1, 2022 ರಿಂದ ಪ್ರಾರಂಭವಾಗಲಿದೆ. ಹೊಸ ಆರ್ಥಿಕ ವರ್ಷದ ಮೊದಲ ದಿನದಂದು ಬ್ಯಾಂಕ್‌ಗಳಲ್ಲಿ ಯಾವುದೇ ಸಾರ್ವಜನಿಕ ವ್ಯವಹಾರವಿಲ್ಲ. ಇದರೊಂದಿಗೆ ಈ ತಿಂಗಳಲ್ಲಿ ವಿವಿಧ ವಲಯಗಳಲ್ಲಿ ಒಟ್ಟು 30 ದಿನಗಳಲ್ಲಿ 15 ದಿನ ಬ್ಯಾಂಕ್‌ಗಳಲ್ಲಿ ಕೆಲಸ ಇರುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ವೆಬ್‌ಸೈಟ್‌ನಲ್ಲಿ ಬ್ಯಾಂಕ್‌ಗಳಿಗೆ ಸಂಬಂಧಿಸಿದ ರಜಾದಿನಗಳ ಸಂಪೂರ್ಣ ಪಟ್ಟಿ ಇದೆ. ಈ ವರ್ಷದ ಏಪ್ರಿಲ್‌ನಲ್ಲಿ ಗುಡಿ ಪಾಡ್ವಾ, ಅಂಬೇಡ್ಕರ್ ಜಯಂತಿ ಮತ್ತು […]

Advertisement

Wordpress Social Share Plugin powered by Ultimatelysocial