ಪೊಲೀಸ್ ಸೋಗಿನಲ್ಲಿ ಕಿಡ್ನಾಪ್

ಪೊಲೀಸರು ಎಂದು ಹೇಳಿಕೊಂಡು ದುಷ್ಕರ್ಮಿಗಳು ಜೂನ್ 9 ರಂದು ಮೂವರನ್ನು ಕಿಡ್ನಾಪ್ ಮಾಡಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಜಹೀರುಲ್ಲಾ ಹುಸೇನ್​ನ್ನು ಕಿಡ್ನಾಪ್ ಮಾಡಿದರೆ,  ಮೈಕೋ ಲೇ ಔಟ್‌ನಲ್ಲಿ ಖಾಬುಲ್ ಅಹ್ಮದ್ ಹಾಗೂ ಮೆಹಬೂಬ್​​ನನ್ನು ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್ ಮಾಡಿದ ನಂತರ ಮೈಕೋ ಲೇ ಔಟ್ ಕಟ್ಟಡದಲ್ಲಿ ಇರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಹುಸೇನ್ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ಹಾಗೂ ಎಸಿಪಿಗಳಾದ ಕರಿಬಸವನಗೌಡ ಹಾಗೂ ಸುಧೀರ್ ಹೆಗ್ಡೆ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ.‌ ಮೈಕೋ ಲೇ ಔಟ್ ಇನ್ಸ್ಪೆಕ್ಟರ್ ಘೋರ್ಪಡೆ ಯಲ್ಲಪ್ಪ ಹಾಗೂ ರವಿ ಪ್ರಕಾಶ್ ಹಾಗೂ ಸಿಬ್ಬಂದಿಯವರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. 50 ಸಾವಿರ ಹಣವನ್ನು ರೆಡಿ ಮಾಡಿಕೊಂಡು ಪೊಲೀಸರು ಹಣ ಕೊಡುವ ನೆಪದಲ್ಲಿ ಬೊಮ್ಮನಹಳ್ಳಿಗೆ ಹೋಗಿದ್ದಾರೆ. ಆದರೆ ಆರೋಪಿಗಳು ಪದೇ ಪದೇ ಸ್ಥಳವನ್ನು ಬದಲಿಸಿಲು ಶುರು ಮಾಡಿದ್ದಾರೆ. ಇದರಿಂದ ಪೊಲೀಸರು ಟವರ್ ಲೊಕೇಷನ್ ಆಧರಿಸಿ ಖಲೀಲ್, ಮುಬಾರಕ್ ಮತ್ತು ಸಾಧಿಕ್ ಎಂಬುವವರನ್ನು ಬಂಧಿಸಿದ್ದಾರೆ.ಇನ್ನು ಬಂಧಿತರನ್ನು ವಿಚಾರಣೆ ಮಾಡಿದಾಗ ಮೂಲತಃ ಅಸ್ಸಾಂನವರು ಎಂದು ತಿಳಿದು ಬಂದಿದೆ.

Please follow and like us:

Leave a Reply

Your email address will not be published. Required fields are marked *

Next Post

ಪ್ರಜಾಪ್ರಭುತ್ವದಲ್ಲಿ ವಿಪಕ್ಷಗಳು ಇರಬೇಕು

Thu Jun 11 , 2020
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ರಾಜ್ಯಸರ್ಕಾರ ಒಪ್ಪಿಗೆ ನೀಡಿದೆ. ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪದಗ್ರಹಣದ ದಿನಾಂಕವನ್ನು ಪಕ್ಷದ ಹಿರಿಯರಲ್ಲಿ ಚರ್ಚಿಸಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಪದಗ್ರಹಣ ಕಾರ್ಯಕ್ರಮದ ಕುರಿತಂತೆ ಮುಖ್ಯಮಂತ್ರಿಗಳು ಮಾತನಾಡಿರೋದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಮುಖ್ಯಮಂತ್ರಿಗಳ ಹೇಳಿಕೆಯನ್ನು ನಾನು ಸ್ವಾಗತ ಮಾಡಿದ್ದೇನೆ. ನಿನ್ನೆ ಮುಖ್ಯಮಂತ್ರಿ ಬಿಎಸ್ ವೈ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ದೇಶದಲ್ಲಿ ವಿರೋಧ ಪಕ್ಷಗಳು ಕೂಡ ಇರಬೇಕು. ಕಾರ್ಯಕ್ರಮ ಮಾಡೇ […]

Advertisement

Wordpress Social Share Plugin powered by Ultimatelysocial