ಪ್ರಾರಂಭದಲ್ಲಿ ನಿರಾಕರಿಸಿದ ಆಸ್ಪತ್ರೆಯಲ್ಲಿ ಕೊನೆಗೂ ಹೆರಿಗೆ

ಹೆರಿಗೆಗೆಂದು ದಾಖಲಾಗಿದ್ದ ಗರ್ಭಿಣಿಗೆ ಕೋವಿಡ್ ತಪಾಸಣೆ ಮಾಡಿದಾಗ ಪಾಸಿಟಿವ್ ಬಂದ ಕಾರಣ ಹೆರಿಗೆ ಮಾಡಿಸಲು ನಿರಾಕರಿಸಿದ ಖಾಸಗಿ ಆಸ್ಪತ್ರೆ ಬಳಿಕ ಶಾಸಕ ಯು.ಟಿ. ಖಾದರ್ ಅವರ ಪ್ರಯತ್ನದ ಫಲವಾಗಿ ಹೆರಿಗೆ ಮಾಡಿಸಲು ಸಮ್ಮತಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಗರ್ಭಿಣಿ ಹೆರಿಗೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ರವಿವಾರ ಕೋವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿತ್ತು. ಆಗ ಆಸ್ಪತ್ರೆಯವರು ಹೆರಿಗೆ ಮಾಡಿಸಲು ನಿರಾಕರಿಸಿದರು. ಗರ್ಭಿಣಿಯ ಕುಟುಂಬದವರು ವಿಷಯವನ್ನು ಖಾದರ್ ಅವರ ಗಮನಕ್ಕೆ ತಂದರು. ಶಾಸಕರು ಖಾಸಗಿ ಆಸ್ಪತ್ರೆಗಳಲ್ಲಿ ವಿಚಾರಿಸಿದಾಗ ನಿರಾಕರಿಸಿದ್ದರಿಂದ ಈ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಅಷ್ಟರಲ್ಲಿ ಪ್ರಾರಂಭದಲ್ಲಿ ನಿರಾಕರಿಸಿದ ಆಸ್ಪತ್ರೆಯ ಆಡಳಿತ ಮಂಡಳಿಯೇ ಗರ್ಭಿಣಿಯ ಹೆರಿಗೆಗೆ ಸಮ್ಮತಿಸಿದ್ದು, ಹೆರಿಗೆ ನಡೆಯಿತು ಎಂದು ಖಾದರ್ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಲಾಕ್‌ಡೌನ್ ಉಡುಪಿ ಜಿಲ್ಲೆ ಬಹುತೇಕ ಸ್ತಬ್ಧ

Mon Jul 6 , 2020
ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ಮಟ್ಟ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರ ರವಿವಾರ ಲಾಕ್‌ಡೌನ್ ಘೋಷಣೆ ಮಾಡಿರುವುದಕ್ಕೆ ಉಡುಪಿ ಜಿಲ್ಲೆಯಾ ದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಜನರು ಸ್ವಯಂ ಪ್ರೇರಿತರಾಗಿ ಬಂದ್ ಆಚರಿಸಿ ಸರಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ನಗರದ ಪ್ರಮುಖ ಭಾಗಗಳಾದ ಕಲ್ಸಂಕ, ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಕೆ.ಎಂ. ಮಾರ್ಗ, ಕರಾವಳಿ ಬೈಪಾಸ್, ಬ್ರಹ್ಮಗಿರಿ ವೃತ್ತಗಳಲ್ಲಿ ಜನರ ಓಡಾಟ ಬಹುತೇಕ […]

Advertisement

Wordpress Social Share Plugin powered by Ultimatelysocial