ನಟ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ದಿ ಬೆಸ್ಟ್ !

ಕನ್ನಡ ಚಿತ್ರರಂಗದಲ್ಲಿ ನಟ ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ದಿ ಬೆಸ್ಟ್ ಎನಿಸಿಕೊಂಡಿದೆ. ಈ ಜೋಡಿ ಸಿನಿಮಾ ತೆರೆಯ ಮೇಲೆ ಎಷ್ಟು ಅದ್ಭುತವಾಗಿ ಮಿಂಚಿತ್ತೋ, ಅಷ್ಟೇ ಅದ್ಭುತವಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಕೂಡ ಸದಾ ಕಂಗೊಳಿಸುತ್ತಿರುತ್ತದೆ. ನಟ ಯಶ್ ಸೂಪರ್ ಸ್ಟಾರ್ ಎನಿಸಿಕೊಂಡರು ಕೂಡ ಪಕ್ಕಾ ಫ್ಯಾಮಿಲಿ ಮ್ಯಾನ್.

ನೀವು ಯಶ್ ಮತ್ತು ರಾಧಿಕಾ ಪಂಡಿತ್ ಅವರ ಕುಟುಂಬ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ, ಹೆಚ್ಚಿನ ಮಾಹಿತಿ ಸಿಗುವುದು ರಾಧಿಕಾ ಪಂಡಿತ್ ಅವರಿಂದಲೇ. ಯಾಕೆಂದರೆ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುತ್ತಾರೆ. ತಮ್ಮ ಕುಟುಂಬದ ಆಗು-ಹೋಗುಗಳು, ಸಂತಸದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ.

ಸದ್ಯ ಯಶ್ ಮತ್ತು ರಾಧಿಕಾ ಪಂಡಿತ್ ಕುಟುಂಬದ ಬಗ್ಗೆ ಮಾತನಾಡು ಕಾರಣ, ಯಶ್ ಬಗ್ಗೆ ಬಂದಿರುವ ಹೊಸ ಕಮೆಂಟ್. ಹೌದು ನಟ ಯಶ್‌ಗೆ ಬ್ಯಾಡ್ ಬಾಯ್ ಅಂತೆ, ಹೀಗಂತೆ ಹೇಳಿರೋದು ಪುಟ್ಟ ಮಗು. ಎಷ್ಟು ಬಾರಿ ಯಶ್ ಬಗ್ಗೆ ಕೇಳಿದರೂ, ಬ್ಯಾಡ್ ಬಾಯ್ ಅಂದಿದ್ದು ಯಾರು ಎನ್ನುವುದನ್ನು ಮುಂದೆ ಓದಿ…

ಯಶ್ ‘ಬ್ಯಾಡ್ ಬಾಯ್’!
ನಟ ಯಶ್ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ಹುಟ್ಟುಕೊಂಡಿದೆ. ಇದೇ ಬೆನ್ನಲ್ಲೇ ಈಗ ಯಶ್ ಅವ್ರನ್ನ ಬ್ಯಾಡ್ ಬಾಯ್ ಎಂದು ಕರೆಯಲಾಗಿದೆ! ಹೌದು ನಟ ಯಶ್ ಅವರನ್ನು ಪುಟ್ಟ ಬಾಲಕ ಬ್ಯಾಡ್ ಬಾಯ್ ಎಂದು ಕರೆದಿದ್ದಾನೆ. ಅದು ಮತ್ಯಾರು ಅಲ್ಲ. ನಟ ಯಶ್ ಮಗ ಯಥರ್ವ್. ರಾಧಿಕಾ ಪಂಡಿತ್ ಹಂಚಿಕೊಂಡಿರುವ ವಿಡಿಯೋದಲ್ಲಿ ಯಥರ್ವ್, ಅಪ್ಪ ಯಶ್ ಮೇಲೆ ಮುನಿಸಿಕೊಂಡಿದ್ದಾನೆ. ಹಾಗಾಗಿ ಅಪ್ಪನನ್ನ ಬ್ಯಾಡ್ ಬಾಯ್ ಎನ್ನುತ್ತಿದ್ದಾರೆ.

ಅಪ್ಪನ ಮೇಲೆ ಯಥರ್ವ್ ಮುನಿಸು!

ಈ ವಿಡಿಯೋದಲ್ಲಿ ಯಶ್ ಮಗ ಮುದ್ದಾಗಿ ಮಾತನಾಡಿದ್ದಾನೆ. ಹಠ ಮಾಡುತ್ತಿರುವ ಯಥರ್ವ್ ಅಪ್ಪನನ್ನು ಬ್ಯಾಡ್ ಬಾಯ್ ಎಂದಿದ್ದಾನೆ. ಅಮ್ಮನನ್ನು ಗುಡ್ ಗರ್ಲ್ ಎಂದಿದ್ದಾನೆ. ಹೌದು ಈ ವಿಡಿಯೋದಲ್ಲಿ ಯಶ್ ಮಗನ ಬಳಿ ಅಪ್ಪ ಗುಡ್ ಬಾಯ್, ಅಪ್ಪ ತುಂಬಾ ಗುಡ್ ಬಾಯ್ ಎನ್ನುತ್ತಾರೆ. ಆದರೆ ಯಥರ್ವ್ ಮಾತ್ರ ಹೇಳೋದು ಒಂದೇ ಮಾತು. ಅಪ್ಪ ಬ್ಯಾಡ್ ಬಾಯ್ ಮತ್ತು ಅಮ್ಮ ಗುಡ್ ಗರ್ಲ್ ಎನ್ನುತ್ತಾನೆ. ಈ ಮುದ್ದು ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಆಂಧ್ರದ ಐಟಿ ಮಂತ್ರಿ ಆಗುತ್ತಾರಾ ಸೂಪರ್‌ಸ್ಟಾರ್ ಮಹೇಶ್ ಬಾಬು?

Sun Jul 17 , 2022
ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬು ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತ್ರಿವಿಕ್ರಮ್ ಹಾಗೂ ರಾಜಮೌಳಿ ಇಬ್ಬರು ದಿಗ್ಗಜರೊಂದಿಗೆ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎರಡೂ ಸಿನಿಮಾಗಳ ಪ್ರೀ ಪ್ರೊಡಕ್ಷನ್ ಕೆಲಸ ಈಗಾಗಲೇ ಶುರುವಾಗಿದೆ. ಇತ್ತ ಅಭಿಮಾನಿಗಳು ಕೂಡ ಈ ಎರಡೂ ಸಿನಿಮಾಗಳನ್ನು ನೋಡಲು ಪ್ರಿನ್ಸ್ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ರಾಜಮೌಳಿ ಸಿನಿಮಾಗಿಂತ ಮುನ್ನ ನಿರ್ದೇಶಕ ತ್ರಿವಿಕ್ರಮ್ ಸಿನಿಮಾದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಮಹೇಶ್ ಬಾಬು ಕುಟುಂಬದೊಂದಿಗೆ […]

Advertisement

Wordpress Social Share Plugin powered by Ultimatelysocial