ಪ್ರೇಮಿಗಳ ದಿನ ಆಚರಿಸಲು ಗೋವಾಗೆ ತೆರಳಿದ್ದ ಪ್ರೇಮಿಗಳಿಬ್ಬರು ಸಮುದ್ರ ಪಾಲು

 

 

ಣಜಿ: ಮನೆಯವರಿಗೆ ತಿಳಿಸದೆ ಪ್ರೇಮಿಗಳ ದಿನ ಆಚರಿಸಲು ಗೋವಾಗೆ ತೆರಳಿದ್ದ ಪ್ರೇಮಿಗಳಿಬ್ಬರು ಸಮುದ್ರದಲ್ಲಿ ಮುಳುಗಿ ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆ ಸೋಮವಾರ ಸಂಜೆ ಪಾಲೊಲೇಮ್​ ಬೀಚ್​ನಲ್ಲಿ ನಡೆದಿದೆ.

ಮೃತ ಪ್ರೇಮಿಗಳನ್ನು ಸುಪ್ರಿಯಾ ದುಬೇ (26) ಮತ್ತು ವಿಭು ಶರ್ಮಾ (27) ಎಂದು ಗುರುತಿಸಲಾಗಿದೆ.

ಇಬ್ಬರು ಕೂಡ ಉತ್ತರ ಪ್ರದೇಶ ಮೂಲದವರು. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಗೋವಾ ಪೊಲೀಸರು ಜೀವ ರಕ್ಷಕರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆಸಿದರು. ಬಳಿಕ ಅವರನ್ನು ಸಮೀಪದ ಕೊಂಕಣ ಸಾಮಾಜಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಸ್ಥಳಾಂತರಿಸಲಾಗಿದೆ.

ಮೃತ ಸುಪ್ರಿಯಾ ಬೆಂಗಳೂರಿನಲ್ಲಿ ನೆಲೆಸಿದ್ದಳು. ವಿಭು ದೆಹಲಿಯಲ್ಲಿ ವಾಸವಿದ್ದನು. ಇಬ್ಬರು ಕೂಡ ಸಂಬಂಧಿಕರು ಎಂದು ತಿಳಿದುಬಂದಿದೆ. ಇವರಿಬ್ಬರು ಗೋವಾಗೆ ಬಂದಿರುವುದು ಎರಡು ಕುಟುಂಬಗಳಿಗೆ ತಿಳಿಯದಿರುವ ಕಾರಣ ಸಾವಿನ ಬಗ್ಗೆ ಮಾಹಿತಿ ಆ ಕ್ಷಣಕ್ಕೆ ತಿಳಿಯಲಿಲ್ಲ. ಬಳಿಕ ಪೊಲೀಸರು ಇಬ್ಬರ ಮಾಹಿತಿ ಕಲೆಹಾಕಿ ಸಾವಿನ ಸುದ್ದಿಯನ್ನು ಮುಟ್ಟಿಸಿದ್ದಾರೆ.

ಸುಪ್ರಿಯಾ ಮತ್ತು ವಿಭು ಕಳೆದ ಎರಡು ದಿನಗಳಿಂದ ಗೋವಾದಲ್ಲಿದ್ದರು ಮತ್ತು ಸೋಮವಾರ ಪಲೋಲೆಮ್ ಬೀಚ್ ಬಳಿ ಸ್ಥಳೀಯರು ಕಾಣಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಶಿಫ್ಟ್ ಮುಗಿದಿದೆ - ದಯವಿಟ್ಟು ಮನೆಗೆ ಹೋಗಿ'; ಉದ್ಯೋಗಿಯ ಕಂಪ್ಯೂಟರ್ ಗೆ ಸಂದೇಶ ಕಳುಹಿಸಿದ ಕಂಪನಿ

Thu Feb 16 , 2023
ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳು ನಿಗದಿತ ಅವಧಿಯನ್ನೂ ಮೀರಿ ಕೆಲಸ ಮಾಡಬೇಕೆಂದು ಬಯಸುತ್ತವೆ. ಹೀಗಾಗಿ ಇಂತಹ ಕಂಪನಿಗಳ ಉದ್ಯೋಗಿಗಳು ಸದಾಕಾಲ ಒತ್ತಡದಲ್ಲಿ ಇರುತ್ತಾರೆ. ಇಂಥದರ ನಡುವೆ ಕಂಪನಿಯೊಂದರ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇಂದೋರ್ ಮೂಲದ ಸಾಫ್ಟ್ ಗ್ರಿಡ್ ಕಂಪ್ಯೂಟರ್ಸ್ ತನ್ನ ಉದ್ಯೋಗಿಗಳು ನಿಗದಿತ ಅವಧಿಯವರೆಗೆ ಮಾತ್ರ ಕೆಲಸ ಮಾಡಬೇಕೆಂದು ಬಯಸುತ್ತದೆ. ಅಷ್ಟೇ ಅಲ್ಲ, ಇದನ್ನು ಮೀರಿ ಉದ್ಯೋಗಿಗಳು ಕೆಲಸದಲ್ಲಿ ತೊಡಗಿಕೊಂಡಿದ್ದರೆ ಅವರ ಕಂಪ್ಯೂಟರ್ಗೆ ನಿಮ್ಮ ಶಿಫ್ಟ್ ಮುಗಿದಿದೆ. […]

Advertisement

Wordpress Social Share Plugin powered by Ultimatelysocial