ಚೆನ್ನೈ ರೈನೋಸ್‌ಗೆ ಮಣ್ಣು ಮುಕ್ಕಿಸಿದ ಕರ್ನಾಟಕ ಸೆಮಿಫೈನಲ್ ಪ್ರವೇಶಿಸಲು ಇನ್ನೆಷ್ಟು ಪಂದ್ಯ ಗೆಲ್ಲಬೇಕು.

 

 

 

ದ್ಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಹತ್ತನೇ ಆವೃತ್ತಿ ಜರುಗುತ್ತಿದೆ. ಈ ಬಾರಿಯ ಟೂರ್ನಿಯಲ್ಲಿ ಎಂಟು ಇಂಡಸ್ಟ್ರಿಗಳ ತಂಡಗಳು ಟ್ರೋಫಿಗಾಗಿ ಪೈಪೋಟಿಗೆ ಇಳಿದಿವೆ. ಕರ್ನಾಟಕ ಬುಲ್ಡೋಜರ್ಸ್, ತೆಲುಗು ಟೈಟಾನ್ಸ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ಚೆನ್ನೈ ರೈನೋಸ್, ಕೇರಳ ಸ್ಟ್ರೈಕರ್ಸ್, ಮುಂಬೈ ಹೀರೊಸ್ ಹಾಗೂ ಪಂಜಾಬ್ ದೆ ಶೇರ್ ತಮ್ಮ ತಮ್ಮ ಇಂಡಸ್ಟ್ರಿಗಳನ್ನು ಪ್ರತಿನಿಧಿಸುತ್ತಿವೆ.ಇನ್ನು ಈ ಬಾರಿಯ ಟೂರ್ನಿಯಲ್ಲಿ ಲೀಗ್ ಹಂತ, ಸೆಮಿ ಫೈನಲ್ ಹಂತ ಹಾಗೂ ಅಂತಿಮವಾಗಿ ಫೈನಲ್ ಪಂದ್ಯವನ್ನು ಆಯೋಜಿಸಲಾಗಿದೆ. ಲೀಗ್ ಹಂತದಲ್ಲಿ ಒಟ್ಟು 16 ಪಂದ್ಯಗಳು ಜರುಗಲಿದ್ದು, ಎಲ್ಲಾ ತಂಡಗಳೂ ತಲಾ ನಾಲ್ಕು ಪಂದ್ಯಗಳಲ್ಲಿ ಕಣಕ್ಕೆ ಇಳಿಯಲಿವೆ. ಈ ಪೈಕಿ ಹೆಚ್ಚು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳನ್ನು ಪಡೆದುಕೊಳ್ಳಲಿರುವ ತಂಡಗಳು ಸೆಮಿಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ.ಈ ಬಾರಿ ಪಂದ್ಯಗಳನ್ನು ವಿಶೇಷ ಮಾದರಿಯಲ್ಲಿ ಆಯೋಜಿಸಲಾಗಿದೆ. ಟೆಸ್ಟ್ ಕ್ರಿಕೆಟ್ ರೀತಿ ನಾಲ್ಕು ಇನ್ನಿಂಗ್ಸ್‌ ನಡೆಸಿ ಪಂದ್ಯಗಳನ್ನು ನಡೆಸಲಾಗುತ್ತಿದೆ. ಪಂದ್ಯದಲ್ಲಿ ತಂಡವೊಂದು ಮೊದಲು ಹತ್ತು ಓವರ್‌ಗಳ ಬ್ಯಾಟಿಂಗ್ ಮಾಡಲಿದೆ, ಬಳಿಕ ಎದುರಾಳಿ ತಂಡ ಹತ್ತು ಓವರ್ ಬ್ಯಾಟಿಂಗ್ ಮಾಡಲಿದೆ. ಹೀಗೆ ಈ ಎರಡು ಇನ್ನಿಂಗ್ಸ್ ಮುಗಿದ ಬಳಿಕ ಹೆಚ್ಚು ರನ್ ಬಾರಿಸಿದ ತಂಡ ಲೀಡ್ ತೆಗೆದುಕೊಳ್ಳಲಿದೆ. ಬಳಿಕ ಎರಡೂ ತಂಡಗಳು ಮತ್ತೆ ಹತ್ತು ಓವರ್‌ಗಳ ಬ್ಯಾಟಿಂಗ್ ಮಾಡಲಿವೆ.ಹೀಗೆ ಎರಡು ಇನ್ನಿಂಗ್ಸ್ ಬಳಿಕ ಪಂದ್ಯದ ವಿನ್ನರ್ ಯಾರು ಎಂಬು ಫಲಿತಾಂಶ ಸಿಗಲಿದೆ. ಈ ವಿಭಿನ್ನ ಮಾದರಿಯ ಟಿ ಟ್ವೆಂಟಿ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಕಳೆದ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ರನ್ನರ್ ಅಪ್ ತಂಡವಾದ ಕರ್ನಾಟಕ ಬುಲ್ಡೋಜರ್ಸ್ ಆರಂಭದಿಂದಲೂ ಅಬ್ಬರಿಸುತ್ತಾ ಸೋಲಿಲ್ಲದ ಸರದಾರನಂತೆ ಮಿಂಚುತ್ತಿದೆ. ನಿನ್ನೆ ( ಮಾರ್ಚ್ 4 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ರೈನೋಸ್ ವಿರುದ್ಧದ ಪಂದ್ಯದಲ್ಲಿ ಗೆಲ್ಲುವ ಮೂಲಕ ಕರ್ನಾಟಕ ಬುಲ್ಡೋಜರ್ಸ್ ಹ್ಯಾಟ್ರಿಕ್ ಗೆಲುವನ್ನು ಕಂಡಿದೆ.ಮೊದಲಿಗೆ ಬೆಂಗಾಲ್ ಟೈಗರ್ಸ್ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದ ಕರ್ನಾಟಕ ಬುಲ್ಡೋಜರ್ಸ್ ನಂತರ ತನ್ನ ಎರಡನೇ ಪಂದ್ಯದಲ್ಲಿ ಕೇರಳ ಸ್ಟ್ರೈಕರ್ಸ್ ವಿರುದ್ಧ ಗೆಲುವು ಸಾಧಿಸಿತು ಹಾಗೂ ಇದೀಗ ಚೆನ್ನೈ ರೈನೋಸ್ ವಿರುದ್ಧವೂ ಗೆದ್ದು ಟೂರ್ನಿಯಲ್ಲಿ ಇಲ್ಲಿಯವರೆಗೂ ಆಡಿರುವ ಎಲ್ಲಾ ಮೂರೂ ಪಂದ್ಯಗಳಲ್ಲಿಯೂ ವಿಜಯ ಪತಾಕೆ ಹಾರಿಸಿದೆ.ನಿನ್ನೆ ( ಮಾರ್ಚ್ 4 ) ನಡೆದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಚೆನ್ನೈ ರೈನೋಸ್ ನಡುವೆ ನಡೆದ ಪಂದ್ಯ ಟೂರ್ನಿಯ ಲೀಗ್ ಹಂತದ 10ನೇ ಪಂದ್ಯವಾಗಿದ್ದು, ಈ ಪಂದ್ಯ ಮುಕ್ತಾಯವಾದ ಬಳಿಕ ಬುಲ್ಡೋಜರ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಹೀಗೆ ಟಾಪ್‌ನಲ್ಲಿರುವ ಕರ್ನಾಟಕ ಬುಲ್ಡೋಜರ್ಸ್ ಲೀಗ್ ಹಂತದ ತನ್ನ ಅಂತಿಮ ಪಂದ್ಯದಲ್ಲಿ ಮಾರ್ಚ್ 11ರಂದು ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ದೆ ಶೇರ್ ತಂಡವನ್ನು ಎದುರಿಸಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತನ್ನ ಆರಂಭದ ದಿನಗಳೆಡೆಗೆ ಮತ್ತೆ ಕೊಂಡೊಯ್ಯುವ 'ದೂರದರ್ಶನ'.

Sun Mar 5 , 2023
    ದೂರದರ್ಶನ. 70-80ರ ದಶಕದ ಅದ್ಭುತ. ದೂರದರ್ಶನ ಎನ್ನುವುದೇ ಆಗ ಒಂದು ವಿಸ್ಮಯ, ವಿಪರೀತ ಆಶ್ವರ್ಯಕರ ಮಾತು. ಹಳ್ಳಿ ಹಳ್ಳಿಗೂ ದೂರದರ್ಶನ ಎಂಟ್ರಿ ಕೊಟ್ಟಾಗಲಂತೂ ಜನ ಕುತೂಹಲದಿಂದ ಕಣ್ಣರಳಿಸಿ ನೋಡಿದರು. ಇದು ಹೇಗೆ ಸಾಧ್ಯ ಎಂದು ತಮಗೆ ತಾವೇ ಪ್ರಶ್ನೆ ಮಾಡಿಕೊಂಡರು.ದೂರದರ್ಶನ ಎನ್ನುವ ಮಾಂತ್ರಿಕ ಪೆಟ್ಟಿಗೆ ಕೋಟಿ ಕೋಟಿ ಜನರ ಕನಸಾಗಿತ್ತು. ಈಗಂತೂ ಎಲ್ಲರ ಮನೆಯಲ್ಲೂ ಟಿವಿಗಳಿವೆ. ಆದರೆ ಆಗ ಹಾಗಿರಲಿಲ್ಲ. ಟಿವಿ ಇದ್ದವರ ಠೀವಿಯೇ ಬೇರೆ ಇರುತ್ತಿತ್ತು. […]

Advertisement

Wordpress Social Share Plugin powered by Ultimatelysocial