ಶಿಫ್ಟ್ ಮುಗಿದಿದೆ – ದಯವಿಟ್ಟು ಮನೆಗೆ ಹೋಗಿ’; ಉದ್ಯೋಗಿಯ ಕಂಪ್ಯೂಟರ್ ಗೆ ಸಂದೇಶ ಕಳುಹಿಸಿದ ಕಂಪನಿ

ಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳು ನಿಗದಿತ ಅವಧಿಯನ್ನೂ ಮೀರಿ ಕೆಲಸ ಮಾಡಬೇಕೆಂದು ಬಯಸುತ್ತವೆ. ಹೀಗಾಗಿ ಇಂತಹ ಕಂಪನಿಗಳ ಉದ್ಯೋಗಿಗಳು ಸದಾಕಾಲ ಒತ್ತಡದಲ್ಲಿ ಇರುತ್ತಾರೆ. ಇಂಥದರ ನಡುವೆ ಕಂಪನಿಯೊಂದರ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇಂದೋರ್ ಮೂಲದ ಸಾಫ್ಟ್ ಗ್ರಿಡ್ ಕಂಪ್ಯೂಟರ್ಸ್ ತನ್ನ ಉದ್ಯೋಗಿಗಳು ನಿಗದಿತ ಅವಧಿಯವರೆಗೆ ಮಾತ್ರ ಕೆಲಸ ಮಾಡಬೇಕೆಂದು ಬಯಸುತ್ತದೆ.

ಅಷ್ಟೇ ಅಲ್ಲ, ಇದನ್ನು ಮೀರಿ ಉದ್ಯೋಗಿಗಳು ಕೆಲಸದಲ್ಲಿ ತೊಡಗಿಕೊಂಡಿದ್ದರೆ ಅವರ ಕಂಪ್ಯೂಟರ್ಗೆ ನಿಮ್ಮ ಶಿಫ್ಟ್ ಮುಗಿದಿದೆ. ದಯವಿಟ್ಟು ಮನೆಗೆ ಹೋಗಿ ಎಂಬ ಸಂದೇಶ ಕಳುಹಿಸುತ್ತಿದೆ.

ಇದೇ ಕಂಪನಿಯ ಮಾನವ ಸಂಪನ್ಮೂಲ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ತನ್ವಿ ಖಂಡೆಲ್ ವಾಲಾ ಲಿಂಕ್ಡ್ ಇನ್ ನಲ್ಲಿ ಪೋಸ್ಟ್ ಹಾಕಿದ್ದು, ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂತಹ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಅದೃಷ್ಟ ಎಂದು ಅವರು ಹೇಳಿಕೊಂಡಿದ್ದಾರೆ.

ಸಾಫ್ಟ್ ಗ್ರಿಡ್ ಕಂಪ್ಯೂಟರ್ಸ್ ಆಡಳಿತ ಮಂಡಳಿ, ತನ್ನ ಉದ್ಯೋಗಿಗಳಿಗೂ ಖಾಸಗಿ ಬದುಕಿದೆ ಎಂಬುದನ್ನು ಪರಿಗಣಿಸುತ್ತಿದೆ ಎಂದು ಬಹುತೇಕರು ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ. ತನ್ವಿ ಖಂಡೆಲ್ ವಾಲಾ ಕೆಲಸದ ಅವಧಿ ಮುಗಿದ ಬಳಿಕ ತಮ್ಮ ಕಂಪ್ಯೂಟರ್ ಗೆ ಬಂದ ಸಂದೇಶದ ಫೋಟೋ ಕೂಡ ಹಾಕಿದ್ದು, ಈ ಸಂದೇಶಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಶಾಸಕರ ಬಲ ಹೆಚ್ಚಿಸಿಕೊಂಡು ಸಿಎಂ ಹುದ್ದೆ ಕ್ಲೈಮ್‌

Thu Feb 16 , 2023
  ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ವೀರಶೈವ ಲಿಂಗಾಯಿತ ಸಮುದಾಯದ ಬೆಂಬಲ ಕಾಂಗ್ರೆಸ್‌ಗೆ ದೊರಕುವಂತೆ ಮಾಡಿ ಹೆಚ್ಚು ಶಾಸಕರು ಆಯ್ಕೆಯಾದರೆ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಮಂಡಿಸಲು ಕಾರ್ಯತಂತ್ರ ರೂಪಿಸಲಾಗಿದೆ.   ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಬ್ರಾಹ್ಮಣ ಮುಖ್ಯಮಂತ್ರಿ ಮಾಡುತ್ತಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಯಿಂದ ಬಿಜೆಪಿಯಲ್ಲಿ ಲಿಂಗಾಯಿತರಿಗೆ ಮತ್ತೆ ಮುಖ್ಯಮಂತ್ರಿ ಮಾಡುವುದಿಲ್ಲ ಎಂಬ ಸಂದೇಶ ರವಾನೆಯಾಗಿದೆ. ಇದರ ಲಾಭ ಪಡೆಯಲು ಇದೀಗ ಕಾಂಗ್ರೆಸ್‌ನಲ್ಲಿರುವ ವೀರಶೈವ ಲಿಂಗಾಯಿತ […]

Advertisement

Wordpress Social Share Plugin powered by Ultimatelysocial