ಪ್ಲೆಆಪ್ ಗೆ ಎಂಟ್ರಿ ಕೊಟ್ಟ ಆರ್‌ಸಿಬಿ ಚಹಲ್ ಸ್ಪೀನ್‌ ದಾಳಿಗೆ ಶರಣಾದ ಪಂಜಾಬ್

ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ 48ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೆ. ಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದೆ. ಟಾಸ್ ಗೆದ್ದ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಆರ್​ಸಿಬಿ ನಿಗದಿತ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್​ ಕಲೆಹಾಕಿತು. ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್​ ತಂಡ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 158 ರನ್​ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ 6 ರನ್​ಗಳ ರೋಚಕ ಜಯ ಸಾಧಿಸಿದ ಆರ್​ಸಿಬಿ ಪ್ಲೇಆಫ್ ಪ್ರವೇಶಿಸಿತು

ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದ ಆರ್‌ಸಿಬಿ ಶಾರ್ಜಾದ ಸವಾಲಿನ ಪಿಚ್‌ನಲ್ಲಿ ಉತ್ತಮ ಆರಂಭವನ್ನು ಪಡೆಯಿತು. ನಂತರ ಮದ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೊಮ್ಮೆ ಆರ್‌ಸಿಬಿ ಆಸರೆಯಾಗುವ ಮೂಲಕ ಸವಾಲಿನ ಮೊತ್ತ ಪೇರಿಸಲು ಕಾರಣರಾದರು. ಮತ್ತೊಂದು ನಿರ್ಣಾಯಕ ಅರ್ಧಶತಕದ ಕೊಡುಗೆ ನೀಡಿದ ಮ್ಯಾಕ್ಸ್‌ವೆಲ್ ಆರ್‌ಸಿಬಿ 164 ರನ್‌ಗಳಿಸಲು ಕಾರಣರಾದರು. ಯುವ ಆರಂಭಿಕ ಆಟಗಾರ ಪಡಿಕ್ಕಲ್ ಈ ಪಂದ್ಯದಲ್ಲಿಯೂ ಮಿಂಚಿದರು.

ಯುಎಇ ಚರಣದಲ್ಲಿ ಫಾರ್ಮ್ ಕಳೆದುಕೊಂಡಂತಿದ್ದ ಎಬಿ ಡಿವಿಲಿಯರ್ಸ್ ಕೂಡ ಈ ಪಂದ್ಯದಲ್ಲಿ ಲಯಕ್ಕೆ ಮರಳಿದರೂ ಕೂಡಾ ರನೌಟ್ ಆಗಿ ಫೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 164 ರನ್‌ಗಳಿಸಿತು. ಮತ್ತೊಂದು ಉತ್ತಮ ಆರಂಭ ಪಡೆದ  ಪಂಜಾಬ್ ಕಿಂಗ್ಸ್ ತಂಡ ಆರ್‌ಸಿಬಿ ವಿರುದ್ಧದ ಪಂದ್ಯದ್ಲಲಿಯೂ ಉತ್ತಮ ಆರಂಭವನ್ನು ಪಡೆಯಿತು. ಆರಂಭಿಕ ಆಟಗಾರರಾದ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಮೊದಲ ವಿಕೆಟ್‌ಗೆ 91 ರನ್‌ಗಳ ಜೊತೆಯಾಟವನ್ನು ನೀಡಿದರು. ಆರ್‌ಸಿಬಿ ಸ್ಪಿನ್ನರ್ ಶಹ್ಬಾಜ್ ಅಹ್ಮದ್ ಕೆಎಲ್ ರಾಹುಲ್ ವಿಕೆಟ್ ಪಡೆಯುವ ಮೂಲಕ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ರಾಹುಲ್ 35 ಎಸೆತಗಳನ್ನು ಎದುರಿಸಿ 39 ರನ್‌ಗಳಿಗೆ ಔಟಾದರು.

ಚಹಲ್ ದಾಳಿಗೆ ಶರಣಾದ ಪಂಜಾಬ್: ಇದಾದ ನಂತರ ಆರ್‌ಸಿಬಿ ತಂಡದ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ರಾಹುಲ್ ಪಡೆಗೆ ಆಘಾತ ನೀಡಿದರು. ರಾಹುಲ್ ವಿಕೆಟ್ ಪಡೆದ ನಂತರ ಚಾಹಲ್ ನಿಕೋಲಸ್ ಪೂರನ್ ವಿಕೆಟ್ ಪಡೆದರು. ಟೂರ್ನಿಯುದ್ದಕ್ಕೂ ಕಳಪೆ ಪ್ರದರ್ಶನ ನೀಡಿರುವ ಪೂರನ್ ಈ ಪಂದ್ಯದಲ್ಲಿಯೂ 3 ರನ್‌ಗಳಿಗೆ ಔಟಾದರು. ಅದಾದ ಬಳಿಕ ಮಯಾಂಕ್ ಅಗರ್ವಾಲ್ ಕೂಡ ಚಾಹಲ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. ಮಯಾಂಕ್ ಅಗರ್ವಾಲ್ 57 ರನ್‌ಗಳಿಸಿ ಪಂಜಾಬ್‌ಗೆ ಮಹತ್ವದ ಕೊಡುಗೆ ನೀಡಿದರು. ಬಳಿಕ ಸರ್ಫರಾಜ್ ಖಾನ್ ಕೂಡ ಚಾಹಲ್‌ಗೆ ಬೌಲ್ಡ್ ಆಗುವ ಮೂಲಕ ಪೆವಿಲಿಯನ್‌ಗೆ ಸೇರಿಕೊಂಡರು

ಬಳಿಕ ಆರ್‌ಸಿಬಿ ಬೌಲರ್‌ಗಳು ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾ ಸಾಗಿದರು. ಶಾರೂಖ್ ಖಾನ್ ಹಾಗೂ ಮೋಯ್ಸಿಸ್ ಹೆನ್ರಿಕ್ಯೂಸ್ ಅಂತಿಮ ಪ್ರಯತ್ನ ನಡೆಸಿದರಾದರೂ ಆರ್‌ಸಿಬಿ ಬೌಲರ್‌ಗಳ ಶಿಸ್ತಿನ ದಾಲಿಯ ಮುಂದೆ ಅದು ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಆರ್‌ಸಿಬಿ ನೀಡಿದ 165 ರನ್‌ಗಳ ಗುರಿಯ ಬದಲಾಗಿ 158 ರನ್‌ಗಳಿಸಲಷ್ಟೇ ರಾಹುಲ್ ಪಡೆ ಯಶಸ್ವಿಯಾಯಿತು. ಈ ಮೂಲಕ ಈ ಪಂದ್ಯವನ್ನು 6 ರನ್‌ಗಳ ಅಂತರದಿಂದ ಪಂಜಾಬ್ ಕಿಂಗ್ಸ್ ಸೋಲು ಕಂಡಿದೆ.ಈ ಗೆಲುವಿನ ಮೂಲಕ ಆರ್‌ಸಿಬಿ ಪ್ಲೆಆಪ್‌ ಹಂತಕ್ಕೆ ತಲುಪಿದೆ.

 

 

 

Please follow and like us:

Leave a Reply

Your email address will not be published. Required fields are marked *

Next Post

ಮುಂದುವರೆದ ಡ್ರಗ್ಸ್ ಪೆಡ್ಲರ್ಗಳ ವಿಚಾರಣೆ ಅ,5ರವರೆಗೆ ಎನ್ಸಿಬಿ ವಶ ಆರೋಪಿಗಳು

Mon Oct 4 , 2021
ಆರ್ಯನ್ ಖಾನ್ ಹಾಗೂ ಇತರ ಬಂಧಿತರನ್ನು ಅಡಿಷನಲ್ ಚೀಫ್ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ಆರ್‌.ಕೆ.ರಾಜೇಭೋಸ್ಲೆ ಎದುರು ಹಾಜರುಪಡಿಸಲಾಗಿದ್ದು. ಬಂಧಿತರು ಹಾಗೂ ಡ್ರಗ್ಸ್ ಪೆಡ್ಲರ್‌ಗಳು, ಸಪ್ಲೈಯರ್ಸ್‌ಗಳ ನಡುವೆ ನಿಯಮಿತ ಸಂಭಾಷಣೆ ನಡೆದಿರುವುದು ವಾಟ್ಸ್‌ಆಪ್‌ ಚಾಟ್‌ನಿಂದ ಬಹಿರಂಗವಾಗಿದೆಯಾದ್ದರಿಂದ ಹೆಚ್ಚಿನ ತನಿಖೆ ಅವಶ್ಯಕತೆ ಇದೆ ಎಂದು ಎನ್‌ಸಿಬಿ ನ್ಯಾಯಾಲಯದಲ್ಲಿ ಹೇಳಿ ಅಕ್ಟೋಬರ್ 05ರವರೆಗೆ ಬಂಧಿತರನ್ನು ಎನ್‌ಸಿಬಿ ವಶಕ್ಕೆ ನೀಡಬೇಕೆಂದು ಮನವಿ ಮಾಡಿದೆ ಎನ್‌ಸಿಬಿ ತಂಡ. ಎನ್ಸಿಬಿ ಅಧಿಕಾರಿಗಳು ಮುಂಬೈ ಮತ್ತು ನವಿ ಮುಂಬೈನಲ್ಲಿ ಮತ್ತಷ್ಟು ದಾಳಿಗಳನ್ನು […]

Advertisement

Wordpress Social Share Plugin powered by Ultimatelysocial