ಮುಂದುವರೆದ ಡ್ರಗ್ಸ್ ಪೆಡ್ಲರ್ಗಳ ವಿಚಾರಣೆ ಅ,5ರವರೆಗೆ ಎನ್ಸಿಬಿ ವಶ ಆರೋಪಿಗಳು

ಆರ್ಯನ್ ಖಾನ್ ಹಾಗೂ ಇತರ ಬಂಧಿತರನ್ನು ಅಡಿಷನಲ್ ಚೀಫ್ ಮೆಟ್ರೊಪಾಲಿಟಿನ್ ಮ್ಯಾಜಿಸ್ಟ್ರೇಟ್ ಆರ್‌.ಕೆ.ರಾಜೇಭೋಸ್ಲೆ ಎದುರು ಹಾಜರುಪಡಿಸಲಾಗಿದ್ದು. ಬಂಧಿತರು ಹಾಗೂ ಡ್ರಗ್ಸ್ ಪೆಡ್ಲರ್‌ಗಳು, ಸಪ್ಲೈಯರ್ಸ್‌ಗಳ ನಡುವೆ ನಿಯಮಿತ ಸಂಭಾಷಣೆ ನಡೆದಿರುವುದು ವಾಟ್ಸ್‌ಆಪ್‌ ಚಾಟ್‌ನಿಂದ ಬಹಿರಂಗವಾಗಿದೆಯಾದ್ದರಿಂದ ಹೆಚ್ಚಿನ ತನಿಖೆ ಅವಶ್ಯಕತೆ ಇದೆ ಎಂದು ಎನ್‌ಸಿಬಿ ನ್ಯಾಯಾಲಯದಲ್ಲಿ ಹೇಳಿ ಅಕ್ಟೋಬರ್ 05ರವರೆಗೆ ಬಂಧಿತರನ್ನು ಎನ್‌ಸಿಬಿ ವಶಕ್ಕೆ ನೀಡಬೇಕೆಂದು ಮನವಿ ಮಾಡಿದೆ ಎನ್‌ಸಿಬಿ ತಂಡ.

ಎನ್ಸಿಬಿ ಅಧಿಕಾರಿಗಳು ಮುಂಬೈ ಮತ್ತು ನವಿ ಮುಂಬೈನಲ್ಲಿ ಮತ್ತಷ್ಟು ದಾಳಿಗಳನ್ನು ನಡೆಸುತ್ತಿದ್ದಾರೆ ಇದೆ ವೇಳೆ ಗ್ರಾಂ ಕೊಕೇನ್, 21 ಗ್ರಾಂ ಚರಸ್, 22 ಮಾತ್ರೆಗಳು ಎಂಡಿಎಂಎ ಮತ್ತು 5 ಗ್ರಾಂ ಮೆಫೆಡ್ರೋನ್ ಮತ್ತು 1.3 ಲಕ್ಷ ರೂ.ಗಿಂತ ಹೆಚ್ಚಿನ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಸಿಬಿ ಹೇಳಿಕೊಂಡಿದೆ. ಖಾನ್, ಮರ್ಚೆಂಟ್ ಮತ್ತು ಧಮೇಚಾ ಅವರ ಕಸ್ಟಡಿ ಕೋರಿ ಸಲ್ಲಿಸಿರುವ ರಿಮಾಂಡ್ ಅರ್ಜಿಯಲ್ಲಿ, ಮೂವರನ್ನು ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (NDPS) ಕಾಯ್ದೆ, 1985 ರ ಅಡಿಯಲ್ಲಿ ನಿಷೇಧ, ಬಳಕೆ ಮತ್ತು ಮಾರಾಟಕ್ಕಾಗಿ ಮೂವರನ್ನು ಬಂಧಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು: ಮುಖ್ಯಮಂತ್ರಿ ವಿಶ್ವಾಸ..!

Mon Oct 4 , 2021
  ಮುಂಬರುವ ವಿಧಾನಸಭಾ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಹಾನಗಲ್ ಹಾಗೂ ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಅವರು  ಬಳ್ಳಾರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ, ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಇಂದು ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಈ ಕ್ಷೇತ್ರದಿಂದ ತರಿಸಿಕೊಂಡ ವರದಿಯ ಕುರಿತು ಚರ್ಚಿಸಿ, ಪಕ್ಷದ ಸಂಸದೀಯ ಮಂಡಳಿಗೆ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಾಗುವುದು. ಶೀಘ್ರವೇ ಅಭ್ಯರ್ಥಿಯ ಹೆಸರು ಪ್ರಕಟವಾಗಲಿದೆ. ಪಕ್ಷವು […]

Advertisement

Wordpress Social Share Plugin powered by Ultimatelysocial