ನೇಮಕಾತಿ-10th, PU ಪಾಸಾದವರು ಅಪ್ಲೈ ಮಾಡಿ!

India Post Office Recruitment 2023: ಪೋಸ್ಟ್​ ಆಫೀಸ್ ಕೆಲಸ(Post Office Job) ಹುಡುಕುತ್ತಿರುವವರಿಗೆ ಸರ್ಕಾರ ಇಲ್ಲೊಂದು ಗುಡ್​ ನ್ಯೂಸ್(Good News)​ ನೀಡಿದೆ. 2023ರಲ್ಲಿ ಅನೇಕ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಲಿದೆ. ಕೇಂದ್ರ ಸರ್ಕಾರದ ಉದ್ಯೋಗ(Central Government Job) ಬೇಕು ಎನ್ನುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಭಾರತೀಯ ಅಂಚೆ ಇಲಾಖೆಯಲ್ಲಿ ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್ ಮತ್ತು ಇತರ ಹಲವು ಪೋಸ್ಟ್‌ಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಂಡಿಯಾ ಪೋಸ್ಟ್ ವೆಬ್‌ಸೈಟ್ indiapost.gov.in ಗೆ ಭೇಟಿ ನೀಡಬಹುದು.
ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು. ಈ ನೇಮಕಾತಿಯ ಅಡಿಯಲ್ಲಿ ಬರೋಬ್ಬರಿ 98,083 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ದೇಶಾದ್ಯಂತ 23 ಪೋಸ್ಟಲ್ ಸರ್ಕಲ್​ಗಳಲ್ಲಿ ನೇಮಕಾತಿ ನಡೆಯುತ್ತದೆ. ಭಾರತೀಯ ಅಂಚೆ ನೇಮಕಾತಿ ಅಧಿಸೂಚನೆ ಪ್ರಕಾರ, ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್, ಎಂಟಿಎಸ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸನ್ನು 18 ವರ್ಷಗಳು ಮತ್ತು ಗರಿಷ್ಠ 32 ವರ್ಷಗಳು ಎಂದು ನಿಗದಿಪಡಿಸಿದೆ. 10ನೇ ತರಗತಿ ಮತ್ತು ಪಿಯುಸಿ ಪಾಸಾಗಿರುವ ಯಾವುದೇ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಪ್ಲೈ ಮಾಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಹಸ್ಯ ಬಹಿರಂಗಪಡಿಸಿದ ಗಗನಸಖಿ!

Wed Jan 4 , 2023
ವಿಮಾನದಲ್ಲಿ ಹಲವಾರು ರೀತಿಯ ವಸ್ತುಗಳಿದ್ದು ಅದರ ಬಗ್ಗೆ ಪ್ರಯಾಣಿಕರಿಗೆ ಹೆಚ್ಚು ತಿಳಿದಿರುವುದಿಲ್ಲ. ಕೆಲ ಮಾರ್ಗಸೂಚಿಗಳನ್ನು ಪ್ರಯಾಣಿಕರಿಗೆ ತಿಳಿಸಲಾಗುತ್ತದೆ ವಿನ: ಪ್ರಯಾಣಿಕರಿಗೆ ತಿಳಿದಿರದ ಅಥವಾ ಸಿಬ್ಬಂದಿ ಸದಸ್ಯರಿಂದ ಹೇಳಲಾಗದ ಹಲವು ವಿಷಯಗಳಿವೆ. ಬಾರ್ಬಿ ಎಂಬ ಗಗನಸಖಿ ವಿಮಾನಕ್ಕೆ ಸಂಬಂಧಿಸಿದ ಇಂತಹ ವಿಷಯಗಳ ಬಗ್ಗೆ ಹೇಳಿದ್ದಾರೆ.ಇದು ಸಾಕಷ್ಟು ಆಘಾತಕಾರಿಯಾಗಿದ್ದು. ಈ ವಿಷಯಗಳ ಬಗ್ಗೆ ಯಾರಿಗೂ ತಿಳಿದಿಲ್ಲ.35000 ಅಡಿ ಎತ್ತರದಲ್ಲಿ ಕೆಲಸ ಮಾಡುವ ಫ್ಲೈಟ್ ಅಟೆಂಡೆಂಟ್ ತನ್ನ ಕೆಲಸದ ಬಗ್ಗೆ ಕೆಲವು ತಮಾಷೆಯ ವಿಷಯಗಳನ್ನು […]

Advertisement

Wordpress Social Share Plugin powered by Ultimatelysocial