ಮುಸ್ಲಿಂ ಯುವಕನ ಜತೆ 4 ಮಕ್ಕಳ ತಾಯಿ ಎಸ್ಕೇಪ್​ ಪ್ರಕರಣ.

ದಗ: ನಾಲ್ಕು ಮಕ್ಕಳ ತಾಯಿಯೊಬ್ಬಳು ಮುಸ್ಲಿಂ ಯುವಕನೊಂದಿಗೆ ನಾಪತ್ತೆಯಾಗಿ, ಮತಾಂತರಗೊಳ್ಳುವ ಮೂಲಕ ಆತನನ್ನು ಮದುವೆಯಾಗುವ ಆಗಿದ್ದಾಳೆ ಎನ್ನಲಾದ ಪ್ರಕರಣವೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಓಡಿಹೋಗಿದ್ದ ಆ ತಾಯಿಯನ್ನು ಪತ್ತೆ ಮಾಡಿ ಪೊಲೀಸರು ವಿಚಾರಣೆ ನಡೆಸಿದ್ದು, ನಾನು ಮತಾಂತರವೇ ಆಗಿಲ್ಲ ಎನ್ನುತ್ತಿದ್ದಾಳೆ.

ಹೇಮಾವತಿ ಎಂಬಾಕೆ ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಿ ಮತಾಂತರಗೊಂಡು ಮದುವೆಯಾಗಿದ್ದಾಳೆ ಎಂದು ಆಕೆಯ ಗಂಡ ಪ್ರಕಾಶ ಗುಜರಾತಿ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗೋವಾದಿಂದ ಹೇಮಾವತಿಯನ್ನು ಕರೆದುಕೊಂಡು ಬಂದು ಗದಗಿನ ಶಹರ ಪೊಲೀಸರು ವಿಚಾರಣೆ ಮಾಡಿದ್ದಾರೆ.

ಇದೀಗ ಹೇಮಾವತಿ ತಾನು ಮತಾಂತರ ಆಗಿಲ್ಲ ಎನ್ನುತ್ತಿದ್ದಾಳೆ. ಆಕೆ ಹೇಳಿಕೆಯಲ್ಲಿ ಸಾಕಷ್ಟು ಅನುಮಾನ ಮೂಡಿದೆ. ಮುಸ್ಲಿಂ ಯುವಕ ಮುಕ್ಬೂಲ್ ಬಾಯಬಡಕಿ ಜೊತೆಗೆ ಅಜ್ಮೀರಕ್ಕೆ ಹೋಗಿದ್ದೆ ಮತ್ತು ನಾಲ್ಕೈದು ದಿನ ಅಜ್ಮೀರದಲ್ಲೆ ಇದ್ದೆವು. ನಮ್ಮ ನಡುವೆ ಯಾವುದೇ ಸಂಬಂಧ ಇಲ್ಲ, ನಾವು ಸ್ನೇಹಿತರಾಗಿಯೇ ಇದ್ದೇವೆ ಎಂದು ಹೇಮಾವತಿ ಹೇಳುತ್ತಿದ್ದಾಳೆ.

ಕಾಲುಂಗರ, ಹಾಗೂ ಮಾಂಗಲ್ಯ ಸರವನ್ನು ತೆಗೆದಿರುವ ಹೇಮಾವತಿ, ಮುಸ್ಲಿಂ ಸಂಪ್ರದಾಯದಂತೆ ಮೂಗುತಿ ಹಾಕಿಕೊಂಡಿದ್ದಾಳೆ. ಮುಸ್ಲಿಂ ವೇಷ ಹಾಕಿದ ಪೋಟೋ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನನ್ನ ಗಂಡ ಪ್ರಕಾಶನ ಕಿರುಕುಳದಿಂದ ಗೋವಾದಲ್ಲಿ ಒಬ್ಬಳೇ ವಾಸವಾಗಿದ್ದೇನೆ. ನಾನು ಪ್ರಕಾಶನ ಜೊತೆಗೆ ಹೋಗುವುದಿಲ್ಲ, ಒಬ್ಬಳೇ ವಾಸ ಮಾಡುತ್ತೇನೆ ಎನ್ನುವ ಹೇಮಾವತಿ, ಮಕ್ಕಳು ಬಂದರೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಿದ್ದಾಳೆ.

ದಿಗ್ವಿಜಯ ನ್ಯೂಸ್ ಮುಂದೆ ಹೇಮಾವತಿ ಗಂಡ ಪ್ರಕಾಶ ಗುಜರಾತಿ ಹೇಳಿಕೆ ನೀಡಿದ್ದು, ಮುಕ್ಬೂಲ್ ಬಾಯಬಡಕಿ, ಹೇಮಾವತಿಯ ಮೈಂಡ್ ವಾಶ್ ಮಾಡಿದ್ದಾನೆ. ಇದು ಲವ್ ಜಿಹಾದ್, ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ. ಹೇಮಾವತಿ ಮಾಂಗಲ್ಯ ಸರ, ಕಾಲುಂಗುರ ತೆಗೆದಿದ್ದಾಳೆ. ಈಗ ಕುಂಕುಮ ಹಚ್ಚಿಕೊಂಡು ಬಂದಿದ್ದಾಳೆ. ಅಜ್ಮೀರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮತಾಂತರ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

20 ವರ್ಷ ಕಾಲ ಅನ್ಯೋನ್ಯತೆಯಿಂದ ಇಬ್ಬರು ಜೀವನ ಮಾಡಿದ್ದೇವೆ. ಎರಡನೇ ಲಾಕ್​ಡೌನ್ ಸಮಯದಿಂದ ಮುಕ್ಬೂಲ್ ಜೊತೆ ಆಕೆ ಸಂಬಂಧ ಬೆಳೆಸಿದ್ದಾಳೆ. 20 ವರ್ಷದಿಂದ ಕಿರುಕುಳ ನೀಡಿಲ್ಲ, ನಾನೇಕೆ ಈಗ ಕಿರುಕುಳ ನೀಡಲಿ. ನಾನು ಕಿರುಕುಳ ನೀಡಿದ್ರೆ, ಪೊಲೀಸ ಠಾಣೆಗೆ ದೂರು ನೀಡಲಿ, ಅದನ್ನು ಬಿಟ್ಟು ಮುಕ್ಬೂಲ್ ಜೊತೆಗೆ ಏಕೆ ಗೋವಾದಲ್ಲಿ ವಾಸ ಮಾಡುತ್ತಿದ್ದಾಳೆ. ನಮ್ಮ ನಾಲ್ಕು ಜನ ಮಕ್ಕಳನ್ನು ನೋಡಿಕೊಂಡು ನನ್ನೊಂದಿಗೆ ವಾಸ ಮಾಡಲಿ ಬೇಕಾದರೆ, ನಾನೇ ಮನೆ ಬಿಟ್ಟು ಹೋಗುತ್ತೇನೆ. ಕೈ ಮುಗಿಯುತ್ತೇನೆ ನಾನು ಮತ್ತು ನನ್ನ ಹೆಂಡತಿ ಮತ್ತೆ ಒಂದಾಗುವ ಹಾಗೇ ಮಾಡಿ ಎಂದು ಪ್ರಕಾಶ್​ ಗುಜರಾತಿ ಅಳಲು ತೋಡಿಕೊಂಡಿದ್ದಾರೆ.

ಏನಿದು ಪ್ರಕರಣ?: ಗದಗಿನ ಸಂಜಯ್ ಗಾಂಧಿ ಕಾಲನಿ ನಿವಾಸಿ ಪ್ರಕಾಶ ಗುಜರಾತಿ ಮತ್ತು ಕುಟುಂಬ ಕೋವಿಡ್ ಎರಡನೇ ಅಲೆಯ ನಂತರ ಉದ್ಯೋಗ ಅರಸಿ ಗೋವಾಕ್ಕೆ ತೆರಳಿತ್ತು. ಗೋವಾದಲ್ಲಿ ಮನೆ ಹುಡುಕಾಟ ನಡೆಸುತ್ತಿದ್ದ ಈ ಕುಟುಂಬಕ್ಕೆ ಮುಕ್ಬೂಲ್ ಬಾಯಬಡಕಿ ಎಂಬುವವನ ಪರಿಚಯವಾಗಿತ್ತು. ಈತ ಮನೆ ಬಾಡಿಗೆ ಪಡೆಯಲು ನೆರವಾಗಿದ್ದ. ಒಂದಷ್ಟು ದಿನ ಅಲ್ಲಿಯೇ ವಾಸವಿದ್ದ ಕುಟುಂಬ ನಂತರ ಗದಗಿಗೆ ಆಗಮಿಸಿತ್ತು. ಈ ವೇಳೆ ಮನೆ ಒಡತಿ ಹೇಮಾವತಿ ಪುನಃ ಗೋವಾಕ್ಕೆ ಹೋಗೋಣ ಎಂದು ಪತಿ ಪ್ರಕಾಶ ಗುಜರಾತಿಗೆ ಆಗಾಗ ಒತ್ತಾಯಿಸುತ್ತಿದ್ದಳು. ಮನೆಯಲ್ಲೇ ನಮಾಜ್, ಮತ್ತಿತರ ಇಸ್ಲಾಂ ಧರ್ಮದ ಆಚರಣೆ ಮಾಡುತ್ತಿದ್ದಳು ಎಂದು ಪ್ರಕಾಶ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪತ್ನಿಯ ಒತ್ತಾಯಕ್ಕೆ ಮಣಿದ ಪ್ರಕಾಶ ಮತ್ತೆ ಗೋವಾಕ್ಕೆ ಕುಟುಂಬ ಸಮೇತ ತೆರಳಿದ್ದಾನೆ. ಈ ವೇಳೆ ಹೇಮಾವತಿ ಮನೆಯಲ್ಲಿದ್ದ 3 ಲಕ್ಷ ರೂ. ಮತ್ತು 15 ಗ್ರಾಂ ಚಿನ್ನದೊಂದಿಗೆ ಮಕ್ಬೂಲ್ ಜತೆ ಹೋಗಿದ್ದಾಳೆ ಎನ್ನಲಾಗಿದೆ. ಮನೆಯ ಹಿರಿಯ ಮಗಳೂ ನಾಪತ್ತೆ ಆಗಿದ್ದು, ಇಬ್ಬರೂ ಮತಾಂತರ ಆಗಿದ್ದಾರೆ ಎಂದು ತಂದೆ ಪ್ರಕಾಶ ಗುಜರಾತಿ ಅನುಮಾನ ವ್ಯಕ್ತಪಡಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನರಸಿಂಹಲು ವಡವಾಟಿ ಅಂತಾರಾಷ್ಟ್ರೀಯ ಖ್ಯಾತಿಯ ಕ್ಲಾರಿನೆಟ್ ವಾದಕರು.

Sun Jan 22 , 2023
ಪಂಡಿತ್ ನರಸಿಂಹಲು ವಡವಾಟಿ ಅಂತಾರಾಷ್ಟ್ರೀಯ ಖ್ಯಾತಿಯ ಕ್ಲಾರಿನೆಟ್ ವಾದಕರು. ಜೈಪುರ್ ಹಾಗೂ ಗ್ವಾಲಿಯರ್ ಘರಾನೆಗೆ ಸೇರಿದ ಇವರು, ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿ, ಪಂ.ಮಲ್ಲಿಕಾರ್ಜುನ ಮನ್ಸೂರ್ ಇವರ ಪರಂಪರೆಗೆ ಸೇರಿದವರು. ನರಸಿಂಹಲು ವಡವಾಟಿಯವರು 1942ರ ಜನವರಿ 21ರಂದು ರಾಯಚೂರು ಜಿಲ್ಲೆಯ ವಡವಾಟಿ ಎಂಬಲ್ಲಿ ಜನಿಸಿದರು. ತಂದೆ ಬುಡ್ಡಪ್ಪ ಅವರು ತಬಲ ವಾದಕರು. ತಾಯಿ ರಂಗಮ್ಮ ಭಕ್ತಿಗೀತೆಗಳ ಹಾಡುಗಾರ್ತಿ. ಅಜ್ಜ ಹೊಬಳಪ್ಪ ಶಹನಾಯ್ ವಾದಕರು. ಹೀಗೆ ಇವರಿಗೆ ಸಂಗೀತ ತಲೆಮಾರುಗಳಿಂದ ಬಂದ ಬಳುವಳಿ. […]

Advertisement

Wordpress Social Share Plugin powered by Ultimatelysocial