ಚಲನಚಿತ್ರಗಳ ವಿರುದ್ಧ ಅನಗತ್ಯ ಹೇಳಿಕೆ ನೀಡುವುದರಿಂದ ದೂರ ಉಳಿಯಿರಿ.

ಹೊಸದಿಲ್ಲಿ: ಚಲನಚಿತ್ರಗಳಂಥ ಅಪ್ರಸ್ತುತ ವಿಚಾರಗಳ ಕುರಿತು ಹೇಳಿಕೆ ನೀಡುವುದರಿಂದ ದೂರ ಉಳಿದು, ಪಕ್ಷದ ಅಭಿವೃದ್ಧಿ ಕಾರ್ಯಸೂಚಿಯನ್ನು ಮುನ್ನೆಲೆಗೆ ತರಬೇಕು ಎಂದು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ  ಬಿಜೆಪಿ  ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಬೊಹ್ರಾ, ಪಸ್ಮಂದ ಮತ್ತು ಸಿಖ್ ಥರದ ಅಲ್ಪಸಂಖ್ಯಾತ ಸಮುದಾಯಗಳನ್ನು ಒಳಗೊಂಡಂತೆ ಸಮಾಜದ ಎಲ್ಲ ವರ್ಗದ ಜನರನ್ನು ತಲುಪಿ, ಯಾವುದೇ ರಾಜಕೀಯ ಲಾಭದ ಅಪೇಕ್ಷೆ ಇಲ್ಲದೆ ಅವರಿಗಾಗಿ ದುಡಿಯಬೇಕು ಎಂದು ಬಿಜೆಪಿ ಸದಸ್ಯರಿಗೆ ಕರೆ ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸಮಾರೋಪ ಭಾಷಣ ಮಾಡಿದ ಅವರು, 2024ರ ಲೋಕಸಭಾ ಚುನಾವಣೆಗೆ ಸುಮಾರು 400 ದಿನ ಮಾತ್ರ ಬಾಕಿ ಉಳಿದಿದ್ದು, ಪಕ್ಷದ ಕಾರ್ಯಕರ್ತರು ಸಮಾಜದ ಎಲ್ಲ ವರ್ಗಗಳಿಗಾಗಿ ಪೂರ್ಣ ನಿಷ್ಠೆಯಿಂದ ದುಡಿಯಬೇಕು ಎಂದು ಸೂಚಿಸಿದ್ದಾರೆ. ಈ ಭಾಷಣದ ಕುರಿತು ಪ್ರತಿಕ್ರಿಯಿಸಿರುವ ಹಲವಾರು ಸಭಿಕರು, ಅವರ ಭಾಷಣವು ಕೇಸರಿ ಸಂಘಟನೆಯನ್ನು ವಿಸ್ತರಿಸುವ ಮತ್ತು ದೇಶವನ್ನು ಎಲ್ಲ ವಿಧದಲ್ಲೂ ಮುನ್ನಡೆಸುವ ಬಹು ದೊಡ್ಡ ದೂರದೃಷ್ಟಿ ಹೊಂದಿತ್ತು ಎಂದು ಶ್ಲಾಘಿಸಿದ್ದಾರೆ.

ಸಭೆಯಲ್ಲಿ ಪ್ರೇಕ್ಷಕರಾಗಿ ಭಾಗವಹಿಸಿದ್ದ ವಿವಿಧ ಪಕ್ಷಗಳ ಸದಸ್ಯರು, ಪ್ರಧಾನಿ ನರೇಂದ್ರ ಮೋದಿ ಅತಿ ಹೆಚ್ಚು ತುಷ್ಟೀಕರಣದ ಬಗ್ಗೆ ಮಾತನಾಡಿದರು ಮತ್ತು ಪಕ್ಷದ ಕಾರ್ಯಕರ್ತರು ವಿವಿಧ ಕ್ಷೇತ್ರಗಳ ವೃತ್ತಿಪರರನ್ನು ಭೇಟಿ ಮಾಡಿ, ಅವರೊಂದಿಗೆ ಸಂಪರ್ಕವಿಟ್ಟುಕೊಳ್ಳಲು ನಿಯಮಿತವಾಗಿ ವಿಶ್ವವಿದ್ಯಾಲಯಗಳು ಹಾಗೂ ಚರ್ಚ್‌ಗಳಿಗೆ ತೆರಳಬೇಕು ಎಂದು ಸೂಚಿಸಿದರು ಎಂದು ಹೇಳಿದ್ದಾರೆ.

ಭಾರತದ ಅತ್ಯುತ್ತಮ ಯುಗ ಬರುತ್ತಲಿದ್ದು, ಪಕ್ಷವು ದೇಶದ ಅಭಿವೃದ್ಧಿಗಾಗಿ ಅರ್ಪಿಸಿಕೊಳ್ಳಬೇಕು ಮತ್ತು 2047ರವರೆಗಿನ 25 ವರ್ಷದ ಅವಧಿಯ “ಅಮೃತ ಕಾಲ” ಯೋಜನೆಯನ್ನು “ಕರ್ತವ್ಯ ಕಾಲ” ಯೋಜನೆಯಾಗಿ ಬದಲಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಯಾವುದೇ ಬಗೆಯ ಅತಿಯಾದ ಆತ್ಮವಿಶ್ವಾಸದ ಕುರಿತು ಪಕ್ಷಕ್ಕೆ ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, 1998ರ ಚುನಾವಣೆಯ ಸಂದರ್ಭದಲ್ಲಿ ದಿಗ್ವಿಜಯ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜನಪ್ರಿಯತೆಯನ್ನು ಕಳೆದುಕೊಂಡಿದ್ದರೂ ಮರಳಿ ಅಧಿಕಾರಕ್ಕೆ ಬಂದಿದ್ದ ನಿದರ್ಶನವನ್ನು ನೀಡಿದರು. ಆ ಸಂದರ್ಭದಲ್ಲಿ ಅವರು ಮಧ್ಯಪ್ರದೇಶ ರಾಜ್ಯದ ಬಿಜೆಪಿ ಸಂಘಟನಾ ವ್ಯವಹಾರಗಳ ಸೂತ್ರದಾರರಾಗಿದ್ದರು ಎಂದು ಮೂಲಗಳು ತಿಳಿಸಿವೆ.

“ಯಾರು ಪಣ ತೊಡುತ್ತಾರೊ, ಅವರು ಇತಿಹಾಸ ನಿರ್ಮಿಸುತ್ತಾರೆ. ಬಿಜೆಪಿ ಕೂಡಾ ಪಣ ತೊಟ್ಟು, ಇತಿಹಾಸ ಸೃಷ್ಟಿಸಬೇಕು” ಎಂದೂ ನರೇಂದ್ರ ಮೋದಿ ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದುಬೈನಲ್ಲಿ ರಿಷಬ್ ಶೆಟ್ಟಿ ಫ್ಯಾಮಿಲಿ ಸಾಹಸ, ಸಂಭ್ರಮ.

Wed Jan 18 , 2023
ಕೊನೆಗೂ ನಿರ್ದೇಶಕ, ನಟ ರಿಷಬ್ ಶೆಟ್ಟಿ ‘ಕಾಂತಾರ’ ಗುಂಗಿನಿಂದ ಹೊರಬಂದಿದ್ದಾರೆ. ನಾಲ್ಕೈದು ತಿಂಗಳಿನಿಂದ ಸಿನಿಮಾ ಪ್ರಚಾರ, ರಿಲೀಸ್, ವಿಜಯಯಾತ್ರೆ ಅಂತೆಲ್ಲಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಶೆಟ್ರು ಬಿಡುವಯ ಮಾಡಿಕೊಂಡು ಫ್ಯಾಮಿಲಿ ಸಮೇತ ದುಬೈಗೆ ಹಾರಿದ್ದಾರೆ.’ಕಾಂತಾರ’ ಸಕ್ಸಸ್ ನಂತರ ಹೋದಲ್ಲಿ ಬಂದಲ್ಲಿ ವಾಟ್ ನೆಕ್ಸ್ಟ್? ಯಾವಾಗ ಹೊಸ ಸಿನಿಮಾ ಶುರು? ಏನ್ ಕಥೆ? ಅನ್ನುವ ಪ್ರಶ್ನೆಗಳು ಎದುರಾಗುತ್ತಲೇ ಇತ್ತು. ಆಗ ರಿಷಬ್ ಶೆಟ್ಟಿ ಕೊಡುತ್ತಿದ್ದ ಉತ್ತರ ಒಂದೇ, ಕೊಂಚ ಬಿಡುವು ಬೇಕು. ಫ್ಯಾಮಿಲಿ […]

Advertisement

Wordpress Social Share Plugin powered by Ultimatelysocial