ಊಹೆಗೂ ಮೀರಿದ ವಸಿಷ್ಠನ ‘Love…ಲಿ’ ಇಂಟ್ರೂಡಕ್ಷನ್ ಫೈಟ್ ಸೀನ್ಸ್…

ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್ ಹೀರೋ, ಚಿಟ್ಟೆ ಖ್ಯಾತಿಯ ವಸಿಷ್ಠ ಸಿಂಹ ನಾಯಕನಾಗಿ ಅಭಿನಯಿಸ್ತಿರುವ Love…ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗ್ತಿದೆ. ಇದೇ ತಿಂಗಳ 4 ರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಇಂಟ್ರೂಡಕ್ಷನ್ ಫೈಟ್ಸ್ ಸೀನ್ಸ್ ಚಿತ್ರೀಕರಣ ಕಂಪ್ಲೀಟ್ ಆಗಿದೆ.ಹೇಗಿದೆ ಇಂಟ್ರೂಡಕ್ಷನ್ ಫೈಟ್ ಸೀನ್ಸ್?Love..ಲಿ ಸಿನಿಮಾದ ಇಂಟ್ರೂಡಕ್ಷನ್ ಫೈಟ್ ಸೀನ್ಸ್, ಸಖತ್ ಅದ್ಧೂರಿಯಾಗಿ ಮೂಡಿ ಬಂದಿದೆ. ವಸಿಷ್ಠ, ಸುಧಿ, ಶೋಭರಾಜ್ ಹಾಗೂ ವರದ ಫೈಟ್ ದೃಶ್ಯದಲ್ಲಿ ಅಬ್ಬರಿಸಿದ್ದಾರೆ. ವಿಶೇಷ ಅಂದ್ರೆ ವಸಿಷ್ಠ ಹಿಂದೆಂದೂ ಕಾಣದ ರೀತಿ ಸಖತ್ ಸ್ಟೈಲೀಶ್ ಲುಕ್ ನಲ್ಲಿ ಮಿಂಚಿದ್ದಾರೆ. ಇದರ ಜೊತೆಗೆ ರೋಪ್ಸ್ ಆದಷ್ಟು ಅವೈಡ್ ಮಾಡಿ ಚಿಟ್ಟೆ ರಿಸ್ಕ್ ಶಾರ್ಟ್ ಮಾಡಿದ್ದಾರೆ.Love..ಲಿ ಸಿನಿಮಾದಲ್ಲಿ ಟ್ರಿನಿಟಿ ಎಂಬ ಹೊಸ ಉಪಕರಣ ಬಳಸಿ 360 ಡಿಗ್ರಿ ಆಂಗಲ್ ನಲ್ಲಿಯೂ ಶೂಟಿಂಗ್ ಮಾಡಲಾಗಿದೆ‌. ಸಖತ್ ರಿಚ್ ಆಗಿ ಮೂಡಿ ಬಂದಿರುವ ಇಂಟ್ರೂಡಕ್ಷನ್ ಫೈಟ್ ಸೀನ್ಸ್ ಗೆ ಡ್ಯಾನಿ ಮಾಸ್ಟರ್ 40-50 ಫೈಟರ್ ಇಟ್ಕೊಂಡು ಫೈಟ್ ಸೀನ್ಸ್ ಮಾಡಿದ್ದಾರೆ.

21ಕ್ಕೆ ವಸಿಷ್ಠ ಫಸ್ಟ್ ಲುಕ್ ರಿಲೀಸ್Love..ಲಿ‌ ಅಂಗಳದಿಂದ ಮತ್ತೊಂದು ನಯಾ ಖಬರ್ ಹೊರ ಬಂದಿದೆ. ಇದೇ ತಿಂಗಳ 21ರಂದು ವಸಿಷ್ಠ ಸಿಂಹ ಫಸ್ಟ್ ಲುಕ್ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.Love..ಲಿ ಒಂದು ಕಮರ್ಷಿಯಲ್‌ ರೊಮ್ಯಾಂಟಿಕ್‌ ಲವ್‌ ಸ್ಟೋರಿ ಸಿನಿಮಾವಾಗಿದ್ದು, ರೊಮ್ಯಾಂಟಿಕ್ ಲವ್‌ ಸ್ಟೋರಿ ಜೊತೆಗೆ ರೌಡಿಸಂ ಕಥಾಹಂದರವನ್ನು ಸಿನಿಮಾ ಒಳಗೊಂಡಿದ್ದು, ಕಳೆದ ಎಂಟು ವರ್ಷಗಳಿಂದ ವಸಿಷ್ ಸಿಂಹ ಜೊತೆಯಲ್ಲಿರುವ, ಮಫ್ತಿ ನಿರ್ದೇಶಕ ನರ್ತನ್‌ ಜೊತೆ ಕೆಲಸ ಮಾಡಿ ಚೇತನ್‌ ಕೇಶವ್‌ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಎಂ ಆರ್‌ ರವೀಂದ್ರ ಕುಮಾರ್‌ ಚಿತ್ರಕ್ಕೆ ನಿರ್ಮಾಣ ಮಾಡಿದ್ದು, ಅಶ್ವಿನ್ ಕೆನಡಿ ಕ್ಯಾಮೆರಾ ಹರೀಶ್‌ ಕೊಮ್ಮೆ ಸಂಕಲನ, ಅನೂಪ್‌ ಸಿಳೀನ್‌ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಓರಿಯೋ'" ಚಿತ್ರೀಕರಣ ಮುಕ್ತಾಯ ಹಂತದಲ್ಲಿ.ವಿಭಿನ್ನ ಕಥಾವಸ್ತು ಹೊಂದಿರುವ ಈ ಚಿತ್ರಕ್ಕೆ ನಂದನ್ ಪ್ರಭು ನಿರ್ದೇಶನ.

Sat May 14 , 2022
ಬಿಎಂಟಿಸಿ ನಿರ್ವಾಹಕರಾಗಿದ್ದ ನಂದನ್‌ಪ್ರಭು ಈ ಹಿಂದೆ ‘ಪ್ರೀತಿಯ ಲೋಕ’ ಹಾಗೂ ‘ಲವ್ ಈಸ್ ಪಾಯಸನ್’ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದರು. ಆರೇಳು ವರ್ಷಗಳ ನಂತರ ನಂದನ್ ಪ್ರಭು ಮತ್ತೊಂದು ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಆ ಚಿತ್ರದ ಹೆಸರು “ಓರಿಯೋ”. ಈಗಾಗಲೇ ಚಿತ್ರದ ಮಾತಿನ ಭಾಗವನ್ನು ಪೂರ್ಣಗೊಳಿಸಿರುವ ನಂದನಪ್ರಭು ಒಂದು ಹಾಡಿನ ಚಿತ್ರೀಕರಣ ಮಾತ್ರವೇ ಬಾಕಿ ಉಳಿಸಿಕೊಂಡಿದ್ದಾರೆ. ಚಿತ್ರದ ಕುರಿತು ಒಂದಷ್ಟು ಮಾಹಿತಿ ಹಂಚಿಕೊಳ್ಳಲು ಈಚೆಗೆ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಂದನಪ್ರಭು, […]

Advertisement

Wordpress Social Share Plugin powered by Ultimatelysocial