ಅನಂತರಾಮ್ ಜೆರ್ರಿ ಸಂಗೀತಗಾರ

 

ಕನ್ನಡ ರಂಗಭೂಮಿಯೊಳಗೆ ಹರಿಯುತ್ತಿರುವ ಸಂಗೀತ ಪ್ರವಹಿನಿಯ ಪ್ರಮುಖ ಇಂಪಿನ ಝರಿ ಅನಂತರಾಮ್ ಜೆರ್ರಿ.
ಅನಂತರಾಮ್ ಜೆರ್ರಿ ಅವರು 1950ರ ಫೆಬ್ರವರಿ 3ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಆರ್.ಜಿ. ಕೃಷ್ಣನ್. ತಾಯಿ ಸೀತಾಲಕ್ಷ್ಮಮ್ಮನವರು. ಅನಂತರಾಮ್ ಜೆರ್ರಿ ಅವರ ಓದು ಸಾಗಿದ್ದು ಮರಿಮಲ್ಲಪ್ಪ ಶಾಲೆಯಲ್ಲಿ. ಪದವಿ ಪಡೆದ ನಂತರ ಬೆಂಗಳೂರಿನ ಕಂಪ್ಯೂಟರ್ ಸೆಂಟರ್‌ನಲ್ಲಿ ಮೂವತ್ತು ವರ್ಷಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು.
ಸಂಗೀತ ಮತ್ತ ರಂಗ ಚಟುವಟಿಕೆಗಳಲ್ಲಿ ಆಸಕ್ತಯಿಂದ ತೊಡಗಿಕೊಂಡ ಅನಂತರಾಮ್, ಶೇಷಾದ್ರಿ ಗವಾಯಿಗಳಲ್ಲಿ ತಬಲ ಕಲಿತರಲ್ಲದೆ ಹಲವಾರು ವಾದ್ಯಗಳನ್ನು ನುಡಿಸುವುದರಲ್ಲಿ ನೈಪುಣ್ಯತೆ ಸಾಧಿಸಿದರು. ಸ್ನೇಹಪರರಾದ ಅವರಿಗೆ ಬೆಂಗಳೂರಿನ ಎಲ್ಲ ಪ್ರಮುಖ ರಂಗ ಸಂಸ್ಥೆಗಳೊಡನೆಯೂ ನಂಟಿತ್ತು.1971ರಲ್ಲಿ ಬಾಲಭವನದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ ನಾಟಕೋತ್ಸವದಲ್ಲಿ ಬಿ.ವಿ. ಕಾರಂತರು ನಿರ್ದೇಶಿಸಿದ ಅಪಾಯಕಾರಿ ಕಥೆ ನಾಟಕದಲ್ಲಿ ಅವಕಾಶ ಪಡೆದ ಅನಂತರಾಮ್ ಜೆರ್ರಿ ಅವರು ಕಾರಂತರೊಡನೆ ಮುಂದೆ ನಿರಂತರ ಒಡನಾಟ ಹೊಂದಿದ್ದರು. 1972 ವರ್ಷ ರಂಗ ಚಳವಳಿಯ ಸುಗ್ಗಿಯ ಕಾಲ. ಜಸ್ಮಾ ಓಡನ್, ಹಯವದನ, ಋಷ್ಯಶೃಂಗ ಮುಂತಾದ ಬಿ.ವಿ. ಕಾರಂತರ ನಾಟಕಗಳಿಗೆ ಅನಂತರಾಮ್ ಸಂಗೀತ ಸಂಯೋಜನೆಗೆ ಜೊತೆಯಾದರು. ನಂತರ ಟಿ.ಎಸ್. ನಾಗಾಭರಣರ ಬಿಲ್ಲಿಕ್ಲಬ್ ಕಸೆಟ್ಸ್ ನಾಟಕಕ್ಕೆ ಸ್ವತಂತ್ರ ಸಂಗೀತ ನಿರ್ದೇಶನ ಮಾಡಿದರು. 1976-1992 ಅವಧಿಯಲ್ಲಿ ಬಿ.ವಿ. ಕಾರಂತರು ನಿರ್ದೇಶಿಸಿದ ಸತ್ತವನ ನೆರಳು, ಕಾಗೆಕುಣಿತ, ಕಾಡು ಮುಂತಾದ ನಾಟಕಗಳಲ್ಲಿ ಅಭಿನಯದ ಜೊತೆಗೆ ಸಂಗೀತದ ಸಹಾಯ ಮಾಡಿದರಲ್ಲದೆ ಮುಂದೆ ಹಯವದನ, ಅವಸ್ಥೆ, ಕತ್ತಲೆ ಬೆಳಕು, ಚೋರ ಚರಣದಾಸ, ಹೆಡ್ಡಾಯಣ, ಅಪರಾಧಿ ಕತೆ ಮುಂತಾದ ನಾಟಕಗಳಿಗೆ; ಪ್ರಸನ್ನರವರ ಹುತ್ತವ ಬಡಿದರೆ, ತದ್ರೂಪಿ; ಸುರೇಶ್ ಅನಗಳ್ಳಿಯವರ ಮಂಟೇಸ್ವಾಮಿ ಕಥಾ ಪ್ರಸಂಗ, ಮಧುರೈ ಕಾಂಡ; ಬಸವಲಿಂಗಯ್ಯನವರ ಮಾದಾರಿ ಮಾದಯ್ಯ; ಬಿ. ಜಯಶ್ರೀಯವರ ಕರಿಮಾಯಿ, ಲಕ್ಷಾಪತಿ ರಾಜನ ಕಥೆ, ಘಾಸಿರಾಮ ಕೊತ್ವಾಲ ಮುಂತಾದ ಬಹು ಪ್ರಸಿದ್ಧ ನಾಟಕಗಳಿಗೆ ಅನಂತರಾಮ್ ಜೆರ್ರಿ ಸಂಗೀತ ಸಹಕಾರ ನೀಡಿದರು. ಹೀಗೆ ಅವರು ಎಲ್ಲಾ ರಂಗಸಂಸ್ಥೆಗಳಿಗೂ ಆಪ್ತ ಅನಿವಾರ್ಯವೆನಿಸಿದ ಅಪರೂಪದ ಸಂಗೀತ ಸಹಾಯಕ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರ ಸರ್ಕಾರ ಎಲ್ಲರ ಜೊತೆ ಜಗಳವಾಡುತ್ತಲೇ ಇದೆ:

Sat Feb 4 , 2023
ನವದೆಹಲಿ, ಫೆ.4 – ಕೇಂದ್ರ ಸರ್ಕಾರ ಎಲ್ಲರ ಜೊತೆ ಜಗಳವಾಡುತ್ತಲೇ ಇದೆ. ಮತ್ತೊಬ್ಬರ ಕೆಲಸದಲ್ಲಿ ಹಸ್ತಕ್ಷೇಪ ಮಾಡದೇ ತಮ್ಮ ಕೆಲಸವನ್ನು ತಾವು ಮಾಡಬೇಕು ಮತ್ತು ಇತರರಿಗೂ ಕೆಲಸ ಮಾಡಲು ಬಿಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲಹೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಎಲ್ಲರ ಜೊತೆ ಜಗಳವಾಡುತ್ತಿದೆ. ನ್ಯಾಯೀಧಿಶರು, ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರ, ರೈತರು, ವರ್ತಕರು ಸೇರಿದಂತೆ ಎಲ್ಲರೊಂದಿಗೂ ಗಲಾಟೆ ಮಾಡಿಕೊಳ್ಳುತ್ತಲಿದೆ. ಜಗಳವಾಡದೇ […]

Advertisement

Wordpress Social Share Plugin powered by Ultimatelysocial