ಬಾಲಿವುಡ್ ನವಾಜುದ್ದೀನ್ ಸಿದ್ದಿಕಿ ಕ್ಷಮೆ ಕೇಳಿದ ಮನೆಕೆಲಸದಾಕೆ, ನಟನ ವಿರುದ್ಧ ಆರೋಪಗಳು ಸುಳ್ಳು ಎಂದು ಸ್ಪಷ್ಟನೆ

ಬಾಲಿವುಡ್ ನವಾಜುದ್ದೀನ್ ಸಿದ್ದಿಕಿ ಅವರ ಮನೆಕೆಲಸದಾಕೆ ಸಪ್ನಾ ರಾಬಿನ್ ತಾವು ನವಾಜುದ್ದೀನ್ ಸಿದ್ದಿಕಿ ಕಾರಣದಿಂದಾಗಿ ದುಬೈ ನಲ್ಲಿ ಸಿಲುಕಿಕೊಂಡಿದ್ದಾಗಿ ಆರೋಪ ಮಾಡಿದ್ದರು. ಮುಂಬೈ: ಬಾಲಿವುಡ್ ನವಾಜುದ್ದೀನ್ ಸಿದ್ದಿಕಿ ಅವರ ಮನೆಕೆಲಸದಾಕೆ ಸಪ್ನಾ ರಾಬಿನ್ ತಾವು ನವಾಜುದ್ದೀನ್ ಸಿದ್ದಿಕಿ ಕಾರಣದಿಂದಾಗಿ ದುಬೈ ನಲ್ಲಿ ಸಿಲುಕಿಕೊಂಡಿದ್ದಾಗಿ ಆರೋಪ ಮಾಡಿದ್ದರು.
ಈಗ ಸಪ್ನಾ ಸ್ಪಷ್ಟನೆ ನೀಡಿದ್ದು, ತಾವು ಬಾಲಿವುಡ್ ನಟನ ವಿರುದ್ಧ ಮಾಡಿದ್ದ ಆರೋಪಗಳು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ವೀಸಾ ಪಡೆಯುವ ವೆಚ್ಚದಿಂದಾಗಿ ವೇತನವನ್ನು ನೀಡಲಾಗಲಿಲ್ಲ ಎಂದೂ ಸಪ್ನಾ ಆರೋಪಿಸಿದ್ದರು. ಹೊಸ ವೀಡಿಯೋ ಒಂದರಲ್ಲಿ ಸಪ್ನಾ ತನ್ನ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದು, ನವಾಜ್ ವಿರುದ್ಧ ತಾವು ಮಾಡಿದ್ದ ಆರೋಪ ಹಾಗೂ ನವಾಜುದ್ದೀನ್ ಪತ್ನಿ ಆಲಿಯಾ ಸಿದ್ದಿಕಿ ದಾಖಲಿಸಿರುವ ಪ್ರಕರಣ ಎಲ್ಲವೂ ಸುಳ್ಳು ಎಂದು ಹೇಳಿದ್ದಾರೆ. ಟೈಮ್ಸ್ ನೌ ಡಿಜಿಟಲ್ ಈ ವಿಡಿಯೋವನ್ನು ಪ್ರಸಾರ ಮಾಡಿದ್ದು, ವಿಡಿಯೋದಲ್ಲಿ ಆಕೆ ಈ ಮಾಹಿತಿ ಬಹಿರಂಗಪಡಿಸಿದ್ದಾಳೆ.
ಸಪ್ನಾ ರಾಬಿನ್ ಹೆಸರು ಸ್ಪಷ್ಟವಾಗಿರದ ಸಂಸ್ಥೆಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ನಿಯುಕ್ತಿಗೊಂಡಿದ್ದರು ಎಂದು ವಕೀಲರೊಬ್ಬರು ಹೇಳಿದ್ದರು. ಆದರೆ ಆಕೆ ದುಬೈ ನಲ್ಲಿ ಕಲಿಯುತ್ತಿರುವ ನವಾಜುದ್ದೀನ್ ಅವರ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. 2021 ರಲ್ಲಿ ಆಲಿಯಾ ಸಿದ್ದಿಕಿ ತಮ್ಮ ಇಬ್ಬರು ಮಕ್ಕಳೊಂದಿಗೆ ದುಬೈ ಗೆ ತೆರಳಿದ್ದರು ಹಾಗೂ ಕಳೆದ ವರ್ಷ ಭಾರತಕ್ಕೆ ವಾಪಸ್ಸಾಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾಂತ್ರಿಕ ದೋಷ : ಏರ್ ಇಂಡಿಯಾ ವಿಮಾನ ತುರ್ತು ಭೂ ಸ್ಪರ್ಶ

Wed Feb 22 , 2023
ನವದೆಹಲಿ ,ಫೆ.22 – ನ್ಯೂಯಾರ್ಕ್‍ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಮಾರ್ಗಮಧ್ಯೆ ಇಂಜಿನ್ ಒಂದರಲ್ಲಿ ತೈಲ ಸೋರಿಕೆಯಾದ ಕಾರಣ ಸ್ವೀಡನ್‍ನ ಸ್ಟಾಕ್‍ಹೋಮ್ ವಿಮಾನನಿಲ್ದಾಣದಲ್ಲಿ ಇಳಿಸಲಾಗಿದೆ. ನಿಗದಿಯಂತೆ ನವದೆಹಲಿಯಿಂದ ಮೇಲೆ ಹಾರಿದ ಏರ್ ಇಂಡಿಯಾ ಬೋಯಿಂಗ್ 777-300 ಇಆರ್ ವಿಮಾನ ಪೈಲಟ್ ಇಂಜಿನ್ ಒಂದರಲ್ಲಿ ತೈಲ ಸೋರಿಕೆ ಯಾಗಿದೆ ತಿಳಿಸಿದ್ದು ಕೂಡಲೆ ಹಿಂತಿರುಗುವಂತೆ ಸೂಚಿಸಲಾಯಿತು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ತೈಲ ಸೋರಿಕೆಯ ಆಗಿ ಎಂಜಿನ್ ಸ್ಥಗಿತಗೊಳಿಸ ನಂತರ ವಿಮಾನವನ್ನು ಪೈಲಟ್‍ […]

Advertisement

Wordpress Social Share Plugin powered by Ultimatelysocial