ಬಿಗ್‌ ಬಜೆಟ್‌ ಮೂವಿ ಮುಂಚೆ ಸೌಂಡ್ ಮಾಡಲು ಬರುತ್ತಿದೆ ನಿನ್ನ ಸನಿಹಕೆ..!

 

ಮುಂಬರುವ ಕನ್ನಡ ಚಿತ್ರ ನಿನ್ನ ಸನಿಹಕೆ ಅಕ್ಟೋಬರ್ 8 ರಂದು ಬಿಡುಗಡೆಯಾಗುತ್ತಿದೆ. ಚಿತ್ರವು ನಟ ಸೂರಜ್ ಗೌಡರ ಚೊಚ್ಚಲ ನಿರ್ದೇಶನ ಜೊತೆಗೆ ನಾಯಕ ನಟನಾಗಿ ಕಾಣಿಸಿಕೊಂಡ ಚಿತ್ರವಾಗಿದೆ. ಮತ್ತು ಸಿನಿಮಾದಲ್ಲಿ ರಾಜಕುಮಾರ ಪ್ಯಾಮಿಲಿಯ ಸುಂದರ ಹುಡುಗಿ ನಾಯಕಿಯಾಗಿ ನಟನೆ ಮಾಡಿದ್ದಾರೆ.

ಅಕ್ಟೋಬರ್ 7 ರಂದು ಬೆಂಗಳೂರಿನ ಖ್ಯಾತ ಮಾಲ್ವೊಂದರಲ್ಲಿನಿನ್ನ ಸನಿಹಕೆಚಿತ್ರದ ಪ್ರೀಮಿಯರ್ ಶೋ ನಡೆಯಲಿದೆ. ವಿಶೇಷ ಪ್ರದರ್ಶನದಲ್ಲಿ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯ್, ಯುವರಾಜ್ ಕುಮಾರ್, ಶ್ರೀಮುರಳಿ, ವಿಜಯ್ ರಾಘವೇಂದ್ರ ರಾಮ್ ಕುಮಾರ್, ಧಿರೇನ್ ರಾಮ್ ಕುಮಾರ್ ಸೇರಿದಂತೆ ಇಡೀ ಕುಟುಂಬ ಭಾಗಿಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚಲನಚಿತ್ರ ಏಪ್ರಿಲ್ನಲ್ಲಿ ಬಿಡುಗಡೆ ಮಾಡಲು ಸಾಕಷ್ಟು ತಯಾರಿ ನಡೆದಿದ್ದವು, ಆದರೆ ಹಲವು ಕಾರಣದಿಂದ ವಿಳಂಬವಾಯಿತು.  ಆದರೆ ಆಗಿನ ಸಂದರ್ಭದಲ್ಲಿ 100% ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ, ಕೊನೆ ಘಳಿಗೆಯಲ್ಲಿ ರಿಲೀಸ್ ದಿನಾಂಕ ಪೋಸ್ಟ್ ಪೋನ್ ಮಾಡಿತ್ತು. ಈಗ 100 ಪರ್ಸೆಂಟ್ ಅವಕಾಶವಿದ್ದು, ಅಕ್ಟೋಬರ್ 8ಕ್ಕೆ ಸಿನಿಮಾ ಬರ್ತಿದೆ. ಧನ್ಯಾ ನಾಯಕಿಯಾಗಿ ನಟಿಸಿರುವನಿನ್ನ ಸನಿಹಕೆಚಿತ್ರದಲ್ಲಿ ಸೂರಜ್ ಗೌಡ ನಾಯಕನಾಗಿ ನಟಿಸಿ ಸ್ವತಃ ಅವರೇ ನಿರ್ದೇಶಿಸಿದ್ದಾರೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ. ರಘು ದೀಕ್ಷಿತ್ ಸಂಗೀತ ಒದಗಿಸಿದ್ದಾರೆ.

.

Please follow and like us:

Leave a Reply

Your email address will not be published. Required fields are marked *

Next Post

Ways to Date Successfully

Tue Oct 5 , 2021
If you’re uncertain how to mail order bride uk date successfully, you’re not by themselves. Thousands of people struggle with finding a suitable partner, nonetheless there are straightforward, yet successful tips to help you meet and attract potential dates. With the aid of “How at this point Successfully, inch you […]

Advertisement

Wordpress Social Share Plugin powered by Ultimatelysocial