ಬಿರು ಬೇಸಿಗೆಗೆ ತಂಪೆರೆಯಲು ಬರುತ್ತಿದೆ ಸುಂದರ “ಮೊಲೋಡಿ ಡ್ರಾಮ” .

 

 

 

 

ಮಾರ್ಚ್ ಆರಂಭವಾಯಿತೆಂದರೆ ಬೇಸಿಗೆಯೂ ಆರಂಭವಾಯಿತು ಅಂತ..ಅದರಲ್ಲೂ ಏಪ್ರಿಲ್ ನಲ್ಲಿ ಬಿಸಿಲಿನದೇ ಆರ್ಭಟ.‌ ಈ ಬಾರಿ ಬಿರು ಬೇಸಿಗೆಗೆ ತಂಪೆರೆಯಲು ಸುಂದರ ” ಮೊಲೋಡಿ ಡ್ರಾಮಾ” ಬರಲಿದೆ. ಅಂದರೆ “ನಿನ್ನ ಕಥೆ ನನ್ನ ಜೊತೆ” ಎಂಬ ಅಡಿಬರಹ ಹೊಂದಿರುವ “ಮೊಲೋಡಿ ಡ್ರಾಮಾ” ಚಿತ್ರ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲಿದೆ.

ಪ್ರೈಮ್ ಸ್ಟಾರ್ ಸ್ಟುಡಿಯೊ ನಿರ್ಮಿಸಿರುವ “ಮೆಲೋಡಿ ಡ್ರಾಮಾ” ಚಿತ್ರ, ಪ್ರೀತಿ ಒಂದು ಸುಂದರ ಅನುಭವ, ನಂಬಿಕೆ. ಅದರ ಆಧಾರ ಇವೆರಡರ ನಡುವಿನ ಪಯಣದಲ್ಲಿ ಭಾವ ಭಾವನೆಗಳ ತೊಡಲಾಟವನ್ನು ವ್ಯಕ್ತ ಪಡಿಸುವ ಒಂದು ಸುಂದರಮಯ ಚಿತ್ರವಾಗಿದೆ.

ಕನ್ನಡದ ಹಲವು ಯಶಸ್ವಿ ಚಿತ್ರಗಳಿಗೆ ಸಂಗೀತ ನೀಡಿರುವ ಕಿರಣ್ ರವೀಂದ್ರನಾಥ್ ಅವರ ಸಂಗೀತ ನಿರ್ದೇಶನದಲ್ಲಿ ಎಂಟು ಸುಮಧುರ ಹಾಡುಗಳು ಈ ಚಿತ್ರದಲ್ಲಿದೆ. ತಮ್ಮ ಗಾಯನದ ಮೂಲಕ ಜನಪ್ರಿಯರಾಗಿರುವ ಸೋನು ನಿಗಮ್, ಕೈಲಾಶ್ ಖೇರ್ ಹಾಗೂ ಪಲಾಕ್ ಮುಚ್ಚಲ್ ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.ಜಯಂತ್ ಕಾಯ್ಕಿಣಿ , V ನಾಗೇಂದ್ರ ಪ್ರಸಾದ್, ಹೃದಯ ಶಿವ, ಧನಂಜಯ್ ರಂಜನ್ ಗೀತರಚನೆ ಮಾಡಿದ್ದಾರೆ.

 

“ದ್ಪಿಪಾತ್ರ” ಚಿತ್ರದ ಮೂಲಕ ನಾಯಕನ ಪಾತ್ರ ಆರಂಭಿಸಿದ ಸತ್ಯ ಈ ಚಿತ್ರದ ನಾಯಕ. ಜನಪ್ರಿಯ ಧಾರಾವಾಹಿಗಳಲ್ಲಿ, “ಲಾಂಗ್ ಡ್ರೈವ್” ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ಸುಪ್ರಿತಾ ಸತ್ಯನಾರಾಯಣ “ಮೊಲೋಡಿ ಡ್ರಾಮಾ” ಚಿತ್ರದ ನಾಯಕಿ. ಖ್ಯಾತ ನಟ ಚೇತನ್ ಚಂದ್ರ ಸಹ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು, ಇನ್ನು ರಂಗಾಯಣ ರಘು, ಅನುಪ್ರಭಾಕರ್, ರಾಜೇಶ್ ನಂಟರಂಗ, ಬಲ ರಾಜವಾಡಿ, ಲಕ್ಷ್ಮಿ ಸಿದ್ದಯ್ಯ, ಅಶ್ವಿನ್ ರಾವ್ ಪಲ್ಲಕ್ಕಿ, ಅಶ್ವಿನ್ ಹಾಸನ್, ರಂಜನ್ ಸನತ್, ಬಿಗ್ ಬಾಸ್ ವಿನೋದ್ ಗೊಬ್ಬರ, ಮುಂತಾದವರು ತಾರಾಬಳಗದಲ್ಲಿದ್ದಾರೆ.

 

 

ಹದಿನೈದು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟಿರುವ, ಪಿ.ಎನ್ ಸತ್ಯ ಸೇರಿದಂತೆ ಕೆಲವು ನಿರ್ದೇಶಕರ ಜೊತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಮಂಜುಕಾರ್ತಿಕ್ ಜಿ ಈ ಚಿತ್ರದ ನಿರ್ದೇಶಕರು. ಇದು ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ.

ಬೆಂಗಳೂರು, ಮಂಡ್ಯ, ಮೈಸೂರು, ಕುಶಾಲನಗರ, ಮಡಿಕೇರಿ, ಶಿವಮೊಗ್ಗ, ಮಂಗಳೂರು, ಕುಂದಾಪುರ ಹಾಗೂ ವಿಜಯಪುರದ ರಮಣೀಯ ಸ್ಥಳಗಳಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆದಿದೆ.

ಮನು DB ಹಳ್ಳಿ ಛಾಯಾಗ್ರಹಣ ಹಾಗೂ ಮುನಿರಾಜ್ ಅವರ ಸಂಕಲನವಿರುವ ಈ ಚಿತ್ರದ ಪ್ರಥಮಪ್ರತಿ ಸಿದ್ದವಿದ್ದು, ಸದ್ಯದಲೇ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಲಿದೆ.

ನಿರ್ಮಾಪಕರಾದ M ನಂಜುಂಡ ರೆಡ್ಡಿ (ನಡುವಲಮನೆ) ಚಿತ್ರಕ್ಕೆ ಯಾವುದೇ ರೀತಿಯ ಕೊರತೆ ಬಾರದಂತೆ ಅದ್ದೂರಿಯಾಗಿ ಚಿತ್ರವನ್ನು ನಿರ್ಮಿಸಿದ್ದಾರೆ, ಚಿತ್ರಕ್ಕೆ ಮೇಲ್ವಿಚಾರಣೆ ಜೈಪ್ರಸಾದ್ ಕಲ್ಯಾಣಿ (ಜಗಳೂರು) ನಿರ್ವಹಿಸಿದ್ದಾರೆ.

ಏಪ್ರಿಲ್ ಮೊದಲ ವಾರದಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವ ಈ ಚಿತ್ರ ಪ್ರೇಕ್ಷಕನಿಗೆ ಹೊಸ ಅನುಭವಗಳನ್ನು ನೀಡುವುದಲ್ಲದೆ ಹಳೆಯ ನೆನಪುಗಳನ್ನು ನೆನಪು ಹಾಕುವ ಹೊಸ ಭಾವವನ್ನು ನೀಡುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಾಮೇನಹಳ್ಳಿ ಜಗನ್ನಾಥ್ ಮೊದಲ ಚಿತ್ರಕ್ಕೆ ಪ್ರೇಕ್ಷಕರ ಪ್ರಶಂಸೆ- ಬದುಕಿಗೆ ಆಪ್ತವೆನಿಸುವ ‘ಹೊಂದಿಸಿ ಬರೆಯಿರಿ’ ಎಲ್ಲೆಡೆ ಹೌಸ್ ಫುಲ್

Thu Feb 16 , 2023
  ಬದುಕಿನ ವಾಸ್ತವತೆ, ಬದುಕನ್ನು ಸ್ವೀಕರಿಸುವ ರೀತಿ, ಸಂಬಂಧಗಳ ಬೆಲೆ, ಗುರಿ, ಉದ್ದೇಶ, ಬದುಕಿನ ಹೊಂದಾಣಿಕೆಯ ಸುತ್ತ ಕಾಡುವ ಕಥೆಗಳ ಪೋಣಿಸಿ ‘ಹೊಂದಿಸಿ ಬರೆಯಿರಿ’ ಸಿನಿಮಾ ಪ್ರೇಕ್ಷಕರೆದುರು ಬಂದಿದೆ. ಸಿನಿಮಾ ತಂಡ ಚಿತ್ರದ ತುಣುಕು, ಮೂಲಕ ಹಾಡುಗಳ ಮೂಲಕ ಭರವಸೆ ಹುಟ್ಟಿಸಿದಂತೆ ಚಿತ್ರಮಂದಿರದಲ್ಲೂ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ‘ಹೊಂದಿಸಿ ಬರೆಯಿರಿ’ ಮೂಲಕ ರಾಮೇನಹಳ್ಳಿ ಜಗನ್ನಾಥ್ ತಮ್ಮ ಚೊಚ್ಚಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಕಾಲೇಜು ಹಂತದ ಸ್ನೇಹಿತರ ಬದುಕಿನಲ್ಲಿ ನಡೆಯುವ ಘಟನೆಗಳನ್ನಿಟ್ಟುಕೊಂಡು […]

Advertisement

Wordpress Social Share Plugin powered by Ultimatelysocial