ಕೇಜ್ರಿವಾಲರಿಂದ ಹಸಿರು ನಿಶಾನೆ ಪಡೆದ ಅರ್ಧಗಂಟೆಗೇ ಕೆಟ್ಟು ನಿಂತ ಇಲೆಕ್ಟ್ರಿಕ್‌ ಬಸ್‌..!

 

ನವದೆಹಲಿ: ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಇಲೆಕ್ಟ್ರಿಕ್‌ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿದ ಅರ್ಧ ಗಂಟೆಗೇ ಒಂದು ಇಲೆಕ್ಟ್ರಿಕ್‌ ಬಸ್‌ ಕೆಟ್ಟು ನಿಂತು ದೇಶದ ಗಮನಸೆಳೆದಿದೆ.

ರೋಹಿಣಿ ಡಿಪೋ ಬಳಿ ಈ ಘಟನೆ ಆಗಿದೆ.

ಬಸ್‌ನ ಇಂಜಿನ್‌ ತಾಪ ಹೆಚ್ಚಾದ ಕಾರಣ ಹೀಗಾಗಿದೆ ಎಂದು ದೆಹಲಿ ಸಾರಿಗೆ ಸಂಸ್ಥೆ ಸಮಜಾಯಿಷಿ ನೀಡಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಇಂದ್ರಪ್ರಸ್ಥ ಡಿಪೋದಿಂದ 150 ಹೊಸ ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲನೆ ನೀಡಿದರು. ಸಿಎಂ ಕೇಜ್ರಿವಾಲ್ ಮತ್ತು ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ಇಂದ್ರಪ್ರಸ್ಥ ಡಿಪೋದಿಂದ ರಾಜ್‌ಘಾಟ್ ಡಿಪೋಗೆ ಇಲೆಕ್ಟ್ರಿಕ್ ಬಸ್‌ನಲ್ಲಿ ಸ್ವಲ್ಪ ಪ್ರಯಾಣಿಸಿದರು.

ಈ ಬಸ್‌ಗಳ ಪೈಕಿ ಒಂದು ರೋಹಿಣಿ ಡಿಪೋ ಬಳಿ ಕೆಟ್ಟು ಹೋಯಿತು. ವಾಹನದ ನಿಗದಿತ ತಾಪ ಮಿತಿ ಮೀರಿದ ತಾಪ ಇದ್ದ ಕಾರಣ ಹೀಗಾಗಿದೆ. ಮೆಕಾನಿಕ್‌ಗಳ ತಂಡ ಕೂಡಲೇ ಅದನ್ನು ಸರಿಪಡಿಸಿದ್ದು, ಎರಡು ಗಂಟೆ ಒಳಗೆ ಆ ಬಸ್‌ ಮತ್ತೆ ಸಂಚಾರ ಆರಂಭಿಸಿದೆ ಎಂದು ಡಿಟಿಸಿ ಹೇಳಿದೆ.

ನಿರ್ದಿಷ್ಟಪಡಿಸಿದ/ವಿನ್ಯಾಸಗೊಳಿಸಿದ ಮಿತಿಯನ್ನು ಮೀರಿ ಮತ್ತು ಆದ್ದರಿಂದ ವಾಹನವು ಅದರ ಅಂತರ್ಗತ ಸುರಕ್ಷತಾ ವೈಶಿಷ್ಟ್ಯದ ಕಾರಣ ಸ್ವಯಂಚಾಲಿತವಾಗಿ ನಿಲ್ಲಿಸಿತು. ರೆಸ್ಪಾನ್ಸ್‌ ಟೀಮ್‌ ತಕ್ಷಣವೇ ಸ್ಥಳಕ್ಕೆ ತಲುಪಿತು. ಬಸ್‌ ದುರಸ್ತಿ ಕಾರ್ಯ‌ ಕೈಗೊಂಡು ಎರಡು ಗಂಟೆಗಳ ಒಳಗೆ ಅದು ಮತ್ತೆ ಸಂಚಾರ ಮುಂದುವರಿಸುವಂತೆ ಮಾಡಿದೆ ಎಂದು ಡಿಟಿಸಿ ಟ್ವೀಟ್‌ನಲ್ಲಿ ತಿಳಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಗಲಿನಲ್ಲಿ ಮಳೆರಾಯನ ಆರ್ಭಟ-ರಾತ್ರಿವೇಳೆ ಕತ್ತಲೆಯ ಆಟ : ನವಿಲುಕುರಿಕೆ ರೈತರಿಗೆ ಪ್ರತಿನಿತ್ಯ ವಿದ್ಯುತ್ ಕಣ್ಣಾಮುಚ್ಚಾಲೆ : 7 ಗಂಟೆ ಮಾತ್ರ ವಿದ್ಯುತ್ ಸಂಪರ್ಕ-ರಾತ್ರಿಯಿಡಿ ಕತ್ತಲೆಯ ಜೀವನ

Thu May 26 , 2022
ಕೊರಟಗೆರೆ:-ಹಗಲಿನಲ್ಲಿ ಮಳೆರಾಯ-ಬಿರುಗಾಳಿಯ ಆರ್ಭಟ.. ರಾತ್ರಿವೇಳೆ ಕರಡಿ-ಚಿರತೆಯ ಕಾಟ.. ಮಕ್ಕಳ ವ್ಯಾಸಂಗಕ್ಕೆ ರಾತ್ರಿಯಿಡಿ ದ್ವೀಪದ ಬೆಳಕೇ ಆಧಾರ.. ಪ್ರತಿನಿತ್ಯ ಜೀವದ ಭಯದ ನೆರಳಿನಲ್ಲಿ ರೈತಾಪಿವರ್ಗ.. ಏಕೆ ಗೋತ್ತೇ ಬೆಸ್ಕಾಂ ಇಲಾಖೆಯಿಂದ ನವಿಲುಕುರಿಕೆ ಗ್ರಾಮದ ೧೨ರೈತ ಕುಟುಂಬಗಳಿಗೆ ಕತ್ತಲೆಯ ಸೌಲಭ್ಯವೇ ಇದಕ್ಕೇಲ್ಲ ಮುಖ್ಯ ಕಾರಣ. ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಪಂ ವ್ಯಾಪ್ತಿಯ ನವಿಲುಕುರಿಕೆ ಗ್ರಾಮದ ರೈತರ ಕತ್ತಲೆಯ ಜೀವನದ ನೋವಿನ ಕತೆಯಿದು. ನವಿಲುಕುರಿಕೆ ಗ್ರಾಮದ ಜಮೀನು ಮತ್ತು ತೋಟದ ಮನೆಯಲ್ಲಿ […]

Advertisement

Wordpress Social Share Plugin powered by Ultimatelysocial