ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಟೊಮೆಟೋ (Tomato) ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ.

ಮಳೆಯಿಂದಾಗಿ ತರಕಾರಿ ಬೆಲೆ ನಾಶವಾಗಿರುವುದರಿಂದ ಟೊಮೆಟೊ ಬೆಲೆ ಏರಿಕೆಗೆ ಕಾರಣವಾಗಿದ್ದು, ಮಳೆಯಿಂದಾಗಿ ತರಕಾರಿ ಬೆಳೆಗಳು ನಾಶವಾಗಿರುವುದರಿಂದ ಟೊಮೆಟೊ ಬೇಡಿಕೆಯಷ್ಟು ಪೂರೈಕೆಯಾಗುತ್ತಿಲ್ಲ.

ಅಗತ್ಯದಷ್ಟು ಟೊಮೆಟೊ ಪೂರೈಕೆಗೆ ಇನ್ನು ಕೆಲವು ದಿನ ಕಾಯಬೇಕಾಗಿದೆ. ಹೀಗಾಗಿ ತರಕಾರಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. 15 ಕೆಜಿ ಬಾಕ್ಸ್ ಗೆ 400 ರಿಂದ 800 ರೂ.ವರೆಗೂ ಮಾರಾಟವಾಗುತ್ತಿದೆ.

ಕಳೆದ ತಿಂಗಳು ಬೆಲೆ ಇಳಿಕೆಯಾಗಿದ್ದ ಟೊಮೇಟೊ ಬೆಲೆಯಲ್ಲಿ ಇದೀಗ ಭಾರೀ ಏರಿಕೆಯಾಗಿದ್ದು, ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿದೆ, ಹೊರರಾಜ್ಯದ ವ್ಯಾಪಾರಿಗಳು ಬಾರದ ಕಾರಣ ಬೆಲೆ ಕುಸಿತವಾಗಿತ್ತು. ಈಗ ಬೆಳೆ ಕಡಿಮೆ ಇರುವುದರಿಂದ ಟೊಮೆಟೊ ದರ ದಿಢೀರ್ ಏರಿಕೆ ಕಂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಿಎಸ್‌ಟಿ, ಜಾಹೀರಾತು ತೆರಿಗೆ ಬೇರೆಬೇರೆ- ಹೈಕೋರ್ಟ್

Mon May 2 , 2022
ಬೆಂಗಳೂರು ಮೇ 2. ಸರಕು ಮತ್ತು ಸೇವಾ ತೆರಿಗೆ ಬೇರೆ ಮತ್ತು ಮಹಾನಗರ ಪಾಲಿಕೆಗಳು ವಿಧಿಸುವ ಜಾಹೀರಾತು ತೆರಿಗೆ ಬೇರೆ ಬೇರೆ, ಒಂದಕ್ಕೊಂದು ಸಂಘರ್ಷವಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಹುಬ್ಬಳ್ಳಿ-ಧಾರವಾಡ ಜಾಹೀರಾತುದಾರರ ಸಂಘ ಮತ್ತು ಹಲವು ಜಾಹೀರಾತು ಸಂಸ್ಥೆಗಳು ಹುಬ್ಬಳ್ಳಿ ಮಹಾನಗರ ಪಾಲಿಕೆ ಹೊರಡಿಸಿದ್ದ ಜಾಹೀರಾತು ತೆರಿಗೆ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಮಹತ್ವದ ಆದೇಶ ನೀಡಿದೆ. “ಸರಕು ಮತ್ತು […]

Advertisement

Wordpress Social Share Plugin powered by Ultimatelysocial