ಆರ್‌ಎಸ್‌ಎಸ್‌ ಮತ್ತು ಅಲ್‌ ಖೈದಾ ಸಂಘಟನೆಯನ್ನು ಬುದ್ದಿ ಇದ್ದವರು ಹೋಲಿಕೆ ಮಾಡಲ್ಲ.

 

 ಕಾಂಗ್ರೆಸ್‌ನವರು ಪರೋಕ್ಷವಾಗಿ ಅಲ್‌ಖೈದಾ ಪರ ವಕಾಲತ್ತು ವಹಿಸುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.

ರವಿ ಛೇಡಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಅಲ್‌ಖೈದಾ ಸಂಘಟನೆ ಬಗ್ಗೆ ಸಹಾನುಭೂತಿ ತೋರುತ್ತಿದ್ದಾರೆ. ಹಿಜಾಬ್‌ ಪರ ವಕಾಲತ್ತು ವಹಿಸಿದವರೆಲ್ಲರು ಕಾಂಗ್ರೆಸ್‌ ಬೆಂಬಲಿಗರು. ಅಲ್‌ಖೈದಾ ಮತ್ತು ಕಾಂಗ್ರೆಸ್‌ ಒಂದೇ ಕಡೆ ಬ್ಯಾಟಿಂಗ್‌ ಮಾಡುತ್ತಿವೆ’ ಎಂದು ಕುಟುಕಿದರು.
‘ಹಿಜಾಬ್‌ ವಿಚಾರ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯುವುದು ಕಾಂಗ್ರೆಸ್‌ ಲೆಕ್ಕಾಚಾರವಾಗಿತ್ತು. ಪಂಚರಾಜ್ಯಗಳ ಚುನಾವಣೆಯಲ್ಲಿ ಅದು ಫಲ ನೀಡಲಿಲ್ಲ’ ಎಂದು ಕಟಕಿಯಾಡಿದರು.

‘ಧ್ವನಿವರ್ಧಕದ ಶಬ್ಧದ ಡೆಸಿಬಲ್‌ ಪ್ರಮಾಣ ಇಂತಿಷ್ಟು ಇರಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಮಸೀದಿ, ದೇಗುಲ ಯಾವುದಕ್ಕೂ ಕೋರ್ಟ್‌ ರಿಯಾಯಿತಿ ನೀಡಿಲ್ಲ. ಈ ಬಗ್ಗೆ ತಕಾರರು ಇದ್ದರೆ ಸಿದ್ದರಾಮಯ್ಯ ಕೋರ್ಟ್‌ನಲ್ಲಿ ವಕಾಲತ್ತು ಹಾಕಲಿ’ ಎಂದರು.

‘ಕೋವಿಡ್‌, ರಷ್ಯಾ ಮತ್ತು ಉಕ್ರೇನ್‌ ಯುದ್ಧ ಆರಂಭದ ನಂತರ ಬೆಲೆ ಏರಿಕೆ ಕಾಡುತ್ತಿದೆ. ಬೆಲೆ ಏರಿಕೆಗೆ ಪ್ರಧಾನಿ ಮೋದಿ ಅವರನ್ನು ಹೊಣೆ ಮಾಡುವುದು ತಪ್ಪು’ ಎಂದು ಪ್ರತಿಕ್ರಿಯಿಸಿದರು.

‘ಭಗವದ್ಗೀತೆಯಲ್ಲಿ ಮನುಕುಲಕ್ಕೆ ವಿರುದ್ಧವಾದ ಅಂಶಗಳು ಇದ್ದರೆ ತೆಗೆದುಹಾಕಲಿ. ಅದೇ ರೀತಿ ಇತರ ಮತ ಗ್ರಂಥಗಳಲ್ಲಿ ಅಂಥ ಅಂಶಗಳಿದ್ದರೆ ಅವುಗಳನ್ನು ತೆಗೆದು ಹಾಕಬೇಕು’ ಎಂದು ಉತ್ತರಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಬ್ಬ ಸ್ವಾಭಿಮಾನಿ‌ ಕನ್ನಡಿಗನಾಗಿ‌ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ!ಸಿದ್ದರಾಮಯ್ಯ

Fri Apr 8 , 2022
  ಬೆಂಗಳೂರು: ರಾಜ್ಯಗಳು ಪರಸ್ಪರ ಸಂಪರ್ಕ ಭಾಷೆಯಾಗಿ ಹಿಂದಿಯನ್ನು‌ ಬಳಸಬೇಕೆಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಫರ್ಮಾನು ಹೊರಡಿಸಿರುವುದು ಅತ್ಯಂತ‌ ಆಕ್ಷೇಪಾರ್ಹ ನಡವಳಿಕೆಯಾಗಿದೆ. ಒಬ್ಬ ಸ್ವಾಭಿಮಾನಿ‌ ಕನ್ನಡಿಗನಾಗಿ‌ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಹಿಂದಿ, ಇಂಗ್ಲೀಷ್, ತಮಿಳು,‌ ಮಲೆಯಾಳಿ, ಗುಜರಾತಿ ಸೇರಿದಂತೆ ಯಾವ ಭಾಷೆಗೂ ನಾವು ವಿರೋಧಿಗಳಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ. ಯಾವುದೇ ಒಂದು ಭಾಷೆಯನ್ನು ಹೇರಲು ಹೊರಟರೆ […]

Advertisement

Wordpress Social Share Plugin powered by Ultimatelysocial