ಹಾರರ್ ಥ್ರಿಲ್ಲರ್ ‘ಕೈಮರ’ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ

 

 

ಹಾರರ್ ಥ್ರಿಲ್ಲರ್ ಮಾದರಿಯ ಸಿನಿಮಾಗಳಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ, ಪ್ರಿಯಾಮಣಿ ನಟಿಸಿದ್ದಾರೆ. ಇದೀಗ ಇವರಿಬ್ಬರು ಸೇರಿ ಒಟ್ಟಿಗೆ ಒಂದು ಹಾರರ್‌ ಥ್ರಿಲ್ಲರ್ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಅವರೊಂದಿಗೆ ನಟಿ ಛಾಯಾ ಸಿಂಗ್ ಕೂಡ ಇರಲಿದ್ದಾರೆ. ಅಂದಹಾಗೆ, ಈ ಮೂವರ ಕಾಂಬಿನೇಷನ್‌ನ ಹೊಸ ಸಿನಿಮಾಗೆ ‘ಕೈಮರ’ ಎಂದು ಹೆಸರನ್ನು ಇಡಲಾಗಿದೆ. ಹಿರಿಯ ನಿರ್ದೇಶಕ ಪಿ. ವಾಸು ಅವರ ಸಹೋದರನ ಪುತ್ರ ಗೌತಮ್ ವಿಮಲ್ ‘ಕೈಮರ’ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಕನ್ನಡದಲ್ಲಿ ಇದು ಅವರಿಗೆ ಮೊದಲ ಸಿನಿಮಾ. ವಿಜಯ ದಶಮಿಯ ಶುಭದಿನದಂದು ಈ ಸಿನಿಮಾ ಸೆಟ್ಟೇರಿದೆ. ಕೈಮರದಲ್ಲಿ ಒಂದು ಮುಖ್ಯ ಪಾತ್ರ ಮಾಡುವುದರ ಜೊತೆಗೆ ನಿರ್ಮಾಣವನ್ನೂ ಮಾಡುತ್ತಿದ್ದಾರೆ ವಿ.ಮತ್ತಿಯಳಗನ್ ಈ ಸಿನಿಮಾದ ಬಗ್ಗೆ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, ‘ನಾನು ಈ ಹಿಂದೆ ಸಾಕಷ್ಟು ಹಾರರ್ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ‘ಕೈಮರ’ ಚಿತ್ರದಲ್ಲಿ‌ ನಾನು ಈ ತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪ್ರಿಯಾಮಣಿ, ಛಾಯಾಸಿಂಗ್ ಅವರೊಟ್ಟಿಗೆ ಅಭಿನಯಿಸುತ್ತಿರುವುದು ನನಗೆ ಖುಷಿ ನೀಡಿದೆ. ಕನ್ನಡದಲ್ಲಿ ‘ಕೆಜಿಎಫ್’, ‘ಕಾಂತಾರ’ದಂತಹ ಡಿಫರೆಂಟ್ ಜಾನರ್‌ನ ಚಿತ್ರಗಳು ಜನರ ಮೆಚ್ಚುಗೆಯನ್ನು ಪಡೆಯುತ್ತಿದೆ. ನಮ್ಮ ‘ಕೈಮರ’ ಚಿತ್ರದ ಕಥೆ ಸಹ ವಿಭಿನ್ನವಾಗಿದ್ದು, ನೋಡುಗರ ಮನ ಗೆಲ್ಲುವ ವಿಶ್ವಾಸವಿದೆ’ ಎಂದು ತಿಳಿಸಿದರು.ಕೈಮರ’ ಸಿನಿಮಾದ ಕುರಿತು ಮಾಹಿತಿ ನೀಡುವ ನಿರ್ದೇಶಕ ಗೌತಮ್ ವಿಮಲ್, ‘ಇದೊಂದು ಹಾರರ್ ಸೈಕಲಾಜಿಕಲ್ ಕಥಾಹಂದರ ಹೊಂದಿರುವ ಚಿತ್ರ. ನನ್ನ ನಿರ್ದೇಶನದ ಮೊದಲ ಚಿತ್ರ ಸಹ. ಕಳೆದ 3 ವರ್ಷಗಳಿಂದ ‘ಕೈಮರ’ ಕುರಿತಾದ ಕೆಲಸಗಳು ನಡೆಯುತ್ತಿದ್ದವು. ಕೊರೊನಾ ಕಾರಣದಿಂದ ಶೂಟಿಂಗ್ ಶುರುವಾಗುವುದು ಕೊಂಚ ತಡವಾಯಿತು. ಈಗ ದಸರಾದ ಶುಭದಿನದದಂದು ಮುಹೂರ್ತವನ್ನು ಮಾಡಿದ್ದೇವೆ. ಅಕ್ಟೋಬರ್ 10ರಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಹಲವು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

 

Please follow and like us:

Leave a Reply

Your email address will not be published. Required fields are marked *

Next Post

ಧಾರಾವಾಹಿ ಸೆಟ್‌ನಲ್ಲಿಯೇ ನೇಣು ಹಾಕಿಕೊಂಡ 20 ವರ್ಷದ ನಾಯಕ ನಟಿ ತುನಿಶಾ ಶರ್ಮಾ.

Sun Dec 25 , 2022
    ಟಿವಿ ಶೋನ ಸೆಟ್‌ನಲ್ಲಿಯೇ ಇಂದು 20 ವರ್ಷದ ನಟಿ ತುನಿಶಾ ಶರ್ಮಾ ಅವರು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ali baba dastaan-e-kabul ಧಾರಾವಾಹಿ ಸೆಟ್‌ನ ಮೇಕಪ್‌ ರೂಮ್‌ವೊಂದರಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ತುನಿಶಾ ಅವರು ನಿಧನರಾಗಿದ್ದಾರೆ. ಅಂದಹಾಗೆ ಮುಂಬೈನಲ್ಲಿ ಶೂಟಿಂಗ್ ನಡೆಯುತ್ತಿತ್ತು. ನೇಣು ಹಾಕಿಕೊಂಡಿದ್ದ ತುನಿಶಾ ಅವರನ್ನು ನೋಡಿದ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ, ಚಿಕಿತ್ಸೆ ಫಲಕಾರಿಯಾಗದೆ ತುನಿಶಾ ಕೊನೆಯುಸಿರೆಳೆದಿದ್ದಾರೆ. ತುನಿಶಾ ಅವರ ಕುಟುಂಬ ಈಗ ಆಸ್ಪತ್ರೆಯಲ್ಲಿದೆ.20 […]

Advertisement

Wordpress Social Share Plugin powered by Ultimatelysocial