ಧಾರಾವಾಹಿ ಸೆಟ್‌ನಲ್ಲಿಯೇ ನೇಣು ಹಾಕಿಕೊಂಡ 20 ವರ್ಷದ ನಾಯಕ ನಟಿ ತುನಿಶಾ ಶರ್ಮಾ.

 

 

ಟಿವಿ ಶೋನ ಸೆಟ್‌ನಲ್ಲಿಯೇ ಇಂದು 20 ವರ್ಷದ ನಟಿ ತುನಿಶಾ ಶರ್ಮಾ ಅವರು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ali baba dastaan-e-kabul ಧಾರಾವಾಹಿ ಸೆಟ್‌ನ ಮೇಕಪ್‌ ರೂಮ್‌ವೊಂದರಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ತುನಿಶಾ ಅವರು ನಿಧನರಾಗಿದ್ದಾರೆ. ಅಂದಹಾಗೆ ಮುಂಬೈನಲ್ಲಿ ಶೂಟಿಂಗ್ ನಡೆಯುತ್ತಿತ್ತು. ನೇಣು ಹಾಕಿಕೊಂಡಿದ್ದ ತುನಿಶಾ ಅವರನ್ನು ನೋಡಿದ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ, ಚಿಕಿತ್ಸೆ ಫಲಕಾರಿಯಾಗದೆ ತುನಿಶಾ ಕೊನೆಯುಸಿರೆಳೆದಿದ್ದಾರೆ. ತುನಿಶಾ ಅವರ ಕುಟುಂಬ ಈಗ ಆಸ್ಪತ್ರೆಯಲ್ಲಿದೆ.20 ವರ್ಷದ ಈ ನಟಿ ಐತಿಹಾಸಿಕ ಧಾರಾವಾಹಿ ‘ಭಾರತ್ ಕಾ ವೀರ್ ಪುತ್ರ-ಮಹಾರಾಣ ಪ್ರತಾಪ’ ಮೂಲಕ ನಟನೆ ಆರಂಭಿಸಿದ್ದರು. ‘ಚಕ್ರವರ್ತಿ ಅಶೋಕ್ ಸಾಮ್ರಾಟ್’, ‘ಗಬ್ಬರ್ ಪೂಂಚವಾಲಾ’, ‘ಶೀರ್ ಇ ಪಂಜಾಬ್; ಮಹಾರಾಜ ರಂಜಿತ್ ಸಿಂಗ್’, ‘ಇಂಟರ್‌ನೆಟ್ ವಾಲಾ ಲವ್’, ‘ಇಶ್ಕ್ ಸುಬಾನ್ ಅಲ್ಲಾ’ ಮುಂತಾದ ಧಾರಾವಾಹಿಗಳಲ್ಲಿ ತುನಿಶಾ ಕಾಣಿಸಿಕೊಂಡಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

 

 

Please follow and like us:

Leave a Reply

Your email address will not be published. Required fields are marked *

Next Post

ಇನ್ನು ಈತನಿಗೆ ಭಾರತ ಟೆಸ್ಟ್ ತಂಡದಲ್ಲಿ ಉಳಿಗಾಲವಿಲ್ಲ

Sun Dec 25 , 2022
  ಟೀಂ ಇಂಡಿಯಾ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ 3 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿಯನ್ನು ಸುಲಭವಾಗಿಸಿಕೊಂಡಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್ ರಾಹುಲ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದರು.ಆದರೆ, ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಹಲವು ಆಟಗಾರರು ಕಳಪೆ ಪ್ರದರ್ಶನ ನೀಡುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾದರು. ಅದರಲ್ಲೂ ತಂಡದ ನಾಯಕತ್ವ ವಹಿಸಿಕೊಂಡಿದ್ದ […]

Advertisement

Wordpress Social Share Plugin powered by Ultimatelysocial