ಬೀದರ್ ಜಿಲ್ಲೆಯಲ್ಲಿ  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ

ಬೀದರ್ ಜಿಲ್ಲೆಯಲ್ಲಿ  ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕರೋನಾ ಪ್ರಕರಣಗಳಿಂದ ಸರ್ಕಾರ ವಾರದ ಆರು ದಿನ ಹಾಫ್ ಲಾಕ್ ಡಾನ್ ಹಾಗೂ ರವಿವಾರದಂದು ಫುಲ್ ಲಾಕ್ ಡಾನ್ ಜಾರಿಗೊಳಿಸಿದೆ. ಕೊರೊನಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಇನ್ನು ಬಸವಕಲ್ಯಾಣ ತಾಲ್ಲೂಕಿನ ವಿಷಯವಾಗಿ ಹೇಳುವದಾದರೆ ಬೀದರ್ ಜಿಲ್ಲೆಯಲ್ಲಿಯೇ ಬಸವಕಲ್ಯಾಣ ತಾಲ್ಲೂಕಿನಲ್ಲಿ ಅತಿ ಹೆಚ್ಚು  ಕರೋನಾ ಪ್ರಕರಣಗಳು ದಾಖಲಾಗುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗುಂಡು ರೆಡ್ಡಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ  ಮಾತನಾಡಿದರು. ನಮ್ಮ ಬಸವಕಲ್ಯಾಣ ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗಿವೆ ಅದಕ್ಕಾಗಿ ನಗರಾದ್ಯಂತ ಸಾರ್ವಜನಿಕ ಸಂಚಾರದ ಮೇಲೆ ಪೊಲೀಸರು ಹದ್ದಿನಕಣ್ಣು ಇಡಬೇಕು ಹಾಗೂ ಈ ಕೊರೊನಾ ಮಹಾಮಾರಿ ನಿಯಂತ್ರಿಸಲು ಸರ್ಕಾರ ಜೊತೆ ಸಾರ್ವಜನಿಕರು ಕೈಜೋಡಿಸಬೇಕು ಹಾಗೂ ಅನವಶ್ಯಕವಾಗಿ ಯಾರು ಹೊರಗೆ ಬರಬಾರದು ಮತ್ತೆ ಗಂಟಲು ದ್ರವ ಟೆಸ್ಟಿಗೆ ಕೊಟ್ಟಿದ ನಂತರ ಫಲಿತಾಂಶ ಬರೋವರೆಗೂ ಹೋಂ ಕ್ವಾರ್ ಟೆನ್ ಆಗಿ ಮನೆಯಲ್ಲಿ ಇರಬೇಕು ಎಂದು ನಮ್ಮ ಸ್ಪೀಡ್ ನ್ಯೂಸ್  ಸುದ್ದಿವಾಹಿನಿಯೊಂದಿಗೆ ಮಾತನಾಡಿದರು.

Please follow and like us:

Leave a Reply

Your email address will not be published. Required fields are marked *

Next Post

ಶತಶೃಂಗ ಬೆಟ್ಟ, ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕೋಲಾರ

Mon Jul 20 , 2020
ಶತ ಶೃಂಗ ಬೆಟ್ಟ, ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕೋಲಾರ ನಗರವನ್ನು ತನ್ನ ಮಡಿಲಲ್ಲಿ ಇಟ್ಟಿಕೊಂಡಿರುವ ಅಂತರಗಂಗೆ ಇದೀಗ ನೋಡುಗರ ಮೈ ಮರೆಸುವಂತಿದೆ. ಬಿಸಿಲಿನ ಬೇಗೆಗೆ ಇಷ್ಟು ದಿನ ಬರುಡಾಗಿದ್ದ, ಶತ ಶೃಂಗ ಬೆಟ್ಟ ಇದೀಗ ಹಚ್ಚ ಹಸಿರಿನಿಂದ ಕೂಡಿ ಕಂಗೊಳಿಸುತ್ತಿದ್ದು, ನೋಡುಗರ ಕಣ್ಮನ ಸೆಳೆದಿದೆ. ಕಳೆದ ವಾರದಿಂದ ನಿರಂತರವಾಗಿ ಸುರಿದ ಬಾರಿ ಮಳೆಯಿಂದ ದಕ್ಷಿಣ ಕಾಶಿ ಅಂತರ ಗಂಗೆ ಈಗ ಜೋಗ ಜಲಪಾತದಂತೆ ನೀರು ಝಲುಪಿಸುತ್ತಿದ್ದು, ಅದನ್ನು […]

Advertisement

Wordpress Social Share Plugin powered by Ultimatelysocial