ಬೆಂಗಳೂರಿನಲ್ಲಿ ಶೀಘ್ರವೇ ಹೊಸ ಟೆಕ್ನಾಲಜಿ ಸೆಂಟರ್

ಬೆಂಗಳೂರಿನಲ್ಲಿ ಶೀಘ್ರವೇ ಹೊಸ ಟೆಕ್ನಾಲಜಿ ಸೆಂಟರ್ ಸ್ಥಾಪಿಸುವ ಉದ್ದೇಶವಿದ್ದು, ಸ್ಥಳೀಯ ಪ್ರತಿಭೆಗಳನ್ನೂ ಉದ್ಯೋಗಕ್ಕೆ ಸೇರ್ಪಡೆಗೊಳಿಸಲಾಗುವುದು. ಅಷ್ಟೇ ಅಲ್ಲ, ಮುಂದಿನ ಕೆಲವು ವರ್ಷಗಳ ಅವಧಿಯಲ್ಲಿ ಭಾರತದಾದ್ಯಂತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವುದಾಗಿ ಝೂಮ್ ವಿಡಿಯೋ ಕಮ್ಯೂನಿಕೇಷನ್ಸ್​ ಘೋಷಿಸಿದೆ. ಭಾರತದಲ್ಲಿ ಈ ವರ್ಷ ಜನವರಿಯಿಂದ ಏಪ್ರಿಲ್ ವರೆಗಿನ ಅವಧಿಯಲ್ಲಿ ಝೂಮ್ ಅಪ್ಲಿಕೇಶನ್ ಡೌನ್​ಲೋಡ್ ಮಾಡಿ ಯೂಸರ್ ಸೈನ್​ ಅಪ್ ಪ್ರಮಾಣ ಶೇಕಡ 6700ರ ಬೆಳವಣಿಗೆ ದರದಲ್ಲಿತ್ತು. ಕಂಪನಿಗೆ ಈಗಾಗಲೇ ಮುಂಬೈನಲ್ಲಿ ಒಂದು ಕಚೇರಿ ಮತ್ತು ಎರಡು ಡೇಟಾ ಸೆಂಟರ್ ಇದೆ. ಬೆಂಗಳೂರಿಗೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶ ಇದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್​ನಲ್ಲಿ ಕಂಪನಿಯ ಕೇಂದ್ರ ಕಚೇರಿ ಇದ್ದು, ಅಲ್ಲಿನ ತಾಂತ್ರಿಕ ಉದ್ದೇಶಗಳಿಗೆ ಬೆಂಗಳೂರಿನ ಕಚೇರಿ ನೆರವು ಒದಗಿಸಲಿದೆ. ಬೆಂಗಳೂರಿನಲ್ಲಿ ಲಭ್ಯವಿರುವ ಟೆಕ್ನಾಲಜಿ ಮೂಲಸೌಕರ್ಯವನ್ನು ಪರಿಗಣಿಸಿ ಇಲ್ಲಿ ಹೊಸ ಟೆಕ್ನಾಲಜಿ ಸೆಂಟರ್ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಕಂಪನಿಯ ಮಟ್ಟಿಗೆ ಭಾರತವು ಸ್ಟ್ರಾಟೆಜಿಕಲಿ ಪ್ರಾಮುಖ್ಯತೆ ಹೊಂದಿರುವ ದೇಶವಾಗಿದೆ. ಕೋವಿಡ್​-19 ಸಂದರ್ಭದಲ್ಲಿ ಭಾರತದ 2,300ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ನಾವು ನೆರವು ಒದಗಿಸುತ್ತಿದ್ದೇವೆ ಎಂದು ಕಂಪನಿಯ ಸಿಇಒ ಎರಿಕ್​ ಎಸ್​ ಯುವಾನ್​ ತಿಳಿಸಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ಸುಶಾಂತ್ ಸಾವಿನ ರಹಸ್ಯ ಇನ್ನೂ ನಿಗೂಢ

Tue Jul 21 , 2020
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ರಹಸ್ಯ ಇನ್ನೂ ನಿಗೂಢವಾಗಿದೆ. ಇದೀಗ ಪೊಲೀಸರು ಸುಶಾಂತ್ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ವೈದ್ಯರೊಬ್ಬರು ಸುಶಾಂತ್ ಎಲ್ಲರ ಮೇಲಿನ ನಂಬಿಕೆ ಕಳೆದುಕೊಂಡಿದ್ದರು ಎಂದು ಹೇಳಿದ್ದಾರೆ.೨೦೧೯ ನವೆಂಬರ್ ನಿಂದ ಸುಶಾಂತ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಈ ಸಂಬAಧ ಮೂವರು ಮನೋ ವೈದ್ಯರಿಂದ ಮುಂಬೈ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸುಶಾಂತ್ ಬಾಯಿಪೊಲಾರ್ ಡಿಸ್ ಆರ್ಡರ್ ನಿಂದ ಬಳಲುತ್ತಿದ್ದರು. ಸುಶಾಂತ್ ತುಂಬಾನೇ ಒತ್ತಡದಲ್ಲಿರೋದು ನಮ್ಮ […]

Advertisement

Wordpress Social Share Plugin powered by Ultimatelysocial