ಬೆಂಗಳೂರು ನಗರದಲ್ಲಿ ಆರ್‌ಟಿಓ ಅಧಿಕಾರಿಗಳು ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದ 300 ಬೈಕ್ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು ನಗರದಲ್ಲಿ ಆರ್‌ಟಿಓ ಅಧಿಕಾರಿಗಳು ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದ 300 ಬೈಕ್ ವಶಕ್ಕೆ ಪಡೆದಿದ್ದಾರೆ.ಅಧಿಕಾರಿಗಳ ದೌರ್ಜನ್ಯ ನಿಲ್ಲಿಸುವಂತೆ ಬೈಕ್‌ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದರು.ಆರ್‌ಟಿಓ ಅಧಿಕಾರಿಗಳು ಶುಕ್ರವಾರದಿಂದ ಬೆಂಗಳೂರು ನಗರದಲ್ಲಿ ಬೈಕ್‌ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಕೋರಮಂಗಲ ಆರ್‌ಟಿಓ ಕಚೇರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 130 ಬೈಕ್ ವಶಕ್ಕೆ ಪಡೆದರು.ನಗರದಲ್ಲಿ ಹಲವಾರು ವರ್ಷಗಳಿಂದ ಮೊಬೈಲ್ ಅಪ್ಲಿಕೇಶನ್ ಆಧಾರಿತ ಬೈಕ್ ಟ್ಯಾಕ್ಸಿ ಸೇವೆಯನ್ನು ರ‍್ಯಾಪಿಡೋ ನೀಡುತ್ತಿದೆ. ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.”ಮೋಟರ್ ವೆಹಿಕಲ್ ಕಾಯ್ದೆ ಉಲ್ಲಂಘನೆ ಮಾಡಿ ಬಿಳಿ ಬಣ್ಣದ ನಂಬರ್ ಪ್ಲೇಟ್ ಹಾಕಿಕೊಂಡು ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿದ್ದ 130 ಬೈಕ್ ವಶಕ್ಕೆ ಪಡೆದು ಕೇಸು ದಾಖಲು ಮಾಡಿದ್ದೇವೆ” ಎಂದು ಅಧಿಕಾರಿಗಳು ಹೇಳಿದ್ದಾರೆ.”ಬೈಕ್ ಟ್ಯಾಕ್ಸಿ ಸೇವೆ ಬಳಸಬಾರದು ಎಂದು ಜನರಿಗೆ ಸಹ ಅರಿವು ಮೂಡಬೇಕು. ಇದು ಸುರಕ್ಷಿತವಲ್ಲ. ಒಂದು ವೇಳೆ ಸಂಚಾರದ ವೇಳೆ ಅಪಘಾತವಾದರೆ ವಿಮೆ ಸೌಲಭ್ಯವೂ ಸಿಗುವುದಿಲ್ಲ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಬೈಕ್ ಟ್ಯಾಕ್ಸಿ ಸೇವೆಯನ್ನು ವಿರೋಧಿಸುತ್ತಿರುವ ಟ್ಯಾಕ್ಸಿ, ಆಟೋ ಡ್ರೈವರ್‌ಗಳು ಈ ಸೇವೆಯನ್ನು ರುದ್ದುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ಸಹ ತೀರ್ಮಾನಿಸಿದ್ದಾರೆ. ಎರಡು ದಿನದಲ್ಲಿ ನಗರದಲ್ಲಿ 300 ಬೈಕ್ ಟ್ಯಾಕ್ಸಿಗಳನ್ನು ವಶಕ್ಕೆ ಪಡೆಯಲಾಗಿದೆಪೀಸ್ ಆಟೋ ಮತ್ತು ಟ್ಯಾಕ್ಸಿ ಚಾಲಕರ ಒಕ್ಕೂಟದ ರಾಜ್ಯಾಧ್ಯಕ್ಷ ರಘು ನಾರಾಯಣ ಗೌಡ ಮಾತನಾಡಿ, “ನಗರದಲ್ಲಿ ಅಕ್ರಮವಾಗಿ ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿದ್ದ 300 ಬೈಕ್ ವಶಕ್ಕೆ ಪಡೆಯಲಾಗಿದೆ. ಈ ಸೇವೆ ನಿಲ್ಲಿಸುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅಕ್ರಮ ಟ್ಯಾಕ್ಸಿ ಸೇವೆ ನಿಲ್ಲಿಸುವಂತೆ ಸಹ ಒತ್ತಾಯಿಸಲಾಗಿದೆ” ಎಂದರು.ಬೈಕ್ ಟ್ಯಾಕ್ಸಿಗಳಿಂದ ನಮ್ಮ ಆದಾಯಕ್ಕೆ ಕುತ್ತು ಬರುತ್ತಿದೆ. ಅಕ್ರಮವಾಗಿ ಟ್ಯಾಕ್ಸಿ ಸೇವೆ ಒದಗಿಸಲು ಅಧಿಕಾರಿಗಳು ಹೇಗೆ ಅವಕಾಶ ನೀಡಿದ್ದಾರೆ?. ತಕ್ಷಣ ಈ ಸೇವೆಗಳನ್ನು ನಿಲ್ಲಿಸಬೇಕು ಎಂದು ಆಟೋ ಚಾಲಕರು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಸೂರು: ಶಾಸಕ ತನ್ವೀರ್ ಸೇಠ್ ಆಪ್ತ, ಕಾಂಗ್ರೆಸ್ ‌ಮುಖಂಡ ಅಬ್ದುಲ್‌ ಖಾದರ್ ಶಾಹಿದ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

Sun Feb 6 , 2022
  ಮೈಸೂರು: ಶಾಸಕ ತನ್ವೀರ್ ಸೇಠ್ ಆಪ್ತ, ಕಾಂಗ್ರೆಸ್ ‌ಮುಖಂಡ ಅಬ್ದುಲ್‌ ಖಾದರ್ ಶಾಹಿದ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.ಜೆಡಿಎಸ್‌ ಸೇರ್ಪಡೆಗೊಂಡಿರುವ ಸಿ.ಎಂ ಇಬ್ರಾಹಿಂ ಅವರನ್ನು ಸ್ವಾಗತಿಸಿದ್ದಕ್ಕೆ ಈ ಶಿಸ್ತು ಕ್ರಮ ಜರುಗಿಸಲಾಗಿದೆ.ಇವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದ್ದು, ಈ ಕುರಿತು ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಆದೇಶ ಹೊರಡಿಸಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚನೆ ಮೇರೆಗೆ ಉಚ್ಚಾಟನೆ ಮಾಡಲಾಗಿದೆ.ಈ ಹಿಂದೆ ಕೂಡ ಇಂಥದ್ದೇ ಘಟನೆ […]

Advertisement

Wordpress Social Share Plugin powered by Ultimatelysocial