ಬೆಂಗಳೂರು : ಮತದಾನದ ಹೊತ್ತಲ್ಲೇ ಜೆಡಿಎಸ್ ಗೆ ಬಿಗ್ ಶಾಕ್ ಎದುರಾಗಿದ್ದು, ವೋಟರ್ ಐಡಿ ಇಲ್ಲದ ಕಾರಣ ಶಿವಾಜಿನಗರ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಾಫರ್ ಅಲಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ.

 

ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಅಬ್ದುಲ್ ಜಾಫರ್ ಅಲಿಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡಲಾಗಿತ್ತು.

ಆದರೆ ವೋಟರ್ ಐಡಿ ಇಲ್ಲದ ಕಾರಣ ಶಿವಾಜಿನಗರ ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಜಾಫರ್ ಅಲಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಜಾಫರ್ ಅಲಿ ಮತದಾರರ ಚೀಟಿ ಹೊಂದಿಲ್ಲದ ಕಾರಣ ಚುನಾವಣಾ ಅಧಿಕಾರಿಗಳು ಅವರ ನಾಮಪತ್ರ ತಿರಸ್ಕರಿಸಿದ್ದಾರೆ.

ಇನ್ನು ಅಬ್ಧುಲ್ ಜಾಫರ್ ನಂತರ ಮಂಜುನಾಥ್ ಎಂಬುವರು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ನಾಮಪತ್ರದ ಜೊತೆಗೆ ಮಂಜುನಾಥ್ ಜೆಡಿಎಸ್ ಪಕ್ಷದ ಬಿ ಫಾರಂ ಸಲ್ಲಿಸಿರಲಿಲ್ಲ. ನಿಗದಿತ ಅವಧಿ ಮುಗಿದ ನಂತರ ಅವರು ನಾಮಪತ್ರ ಸಲ್ಲಿಸಿದ್ದರಿಂದ ಮಂಜುನಾಥ್ ಅವರ ನಾಮಪತ್ರವೂ ತಿರಸ್ಕರಿಸಲಾಗಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಜಿ ಸಚಿವ ಡಿಬಿ ಇನಾಮದಾರ್ ಇನ್ನಿಲ್ಲ..!

Tue Apr 25 , 2023
  ಚನ್ನಮ್ಮ ಕಿತ್ತೂರು ಮತಕ್ಷೇತ್ರದ ಮಾಜಿ ಶಾಸಕ ಮತ್ತು ಮಾಜಿ ಸಚಿವರಾಗಿದ್ದ ಡಿ.ಬಿ ಇನಾಮದಾರ್ ಧಣಿ ಇಂದು ಮೃತಪಟ್ಟಿದ್ದಾರೆ. ಬೆಳಗಾವಿ ಚನ್ನಮ್ಮ ಕಿತ್ತೂರು ಮತಕ್ಷೇತ್ರದ ಮಾಜಿ ಶಾಸಕರು, ಮಾಜಿ ಸಚಿವರು ಆದ ಡಿ.ಬಿ ಇನಾಮದಾರ್ ಅವರು ಇಂದು ನಿಧರಾಗಿದ್ದಾರೆ . ನ್ಯುಮೋನಿಯಾ, ಲಂಗ್ಸ್ ಇಂಫೆಕ್ಷನ್​ನಿಂದ ಬಳಲುತ್ತಿದ್ದ 74 ವರ್ಷದ ಇನಾಮದಾರ್​ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಹಲವು‌ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಡಿ.ಬಿ […]

Advertisement

Wordpress Social Share Plugin powered by Ultimatelysocial