ಬೆಚ್ಚಿ ಬಿದ್ದಳು ಮಗಳು ತಂದೆಯ ಲ್ಯಾಪ್‌ ಟಾಪ್‌ ನಲ್ಲಿ ತನ್ನ ಬೆತ್ತಲೆ ಫೋಟೋಗಳನ್ನು ನೋಡಿ

 

ಹೈದರಾಬಾದ್​ :ಇದಕ್ಕಿಂತ ಘೋರ ಕೃತ್ಯ ಇನ್ನೊಂದಿಲ್ಲ. ಮಲತಂದೆಯ ಲ್ಯಾಪ್ ಟಾಪ್ ತೆಗೆದು ನೋಡಿದಾಗ ಮಗಳು ಬೆಚ್ಚಿ ಬಿದ್ದಿದ್ದಾ ಳೆ. ಲ್ಯಾಪ್ ಟಾಪ್ ನಲ್ಲಿ ಆಕೆಯದ್ದೇ ಬೆತ್ತಲೆ ಚಿತ್ರಗಳು ಇದ್ದವು. ಆರೋಪಿ ತಂದೆ 40 ವರ್ಷದ ರೆಸ್ಟೋರೆಂಟ್​ ಮಾಲೀಕ ರಾಜೇ ಶ್​.

ಮಗಳು ಅಪ್ರಾಪ್ತೆಯಾಗಿದ್ದ ಸಮಯದಲ್ಲಿ ಆರೋಪಿ ನಗ್ನ ಚಿತ್ರಗಳನ್ನು ತೆಗೆದು ಲ್ಯಾಪ್​ಟಾಪ್​ನಲ್ಲಿ ಸೇವ್​ ಮಾಡಿಟ್ಟುಕೊಂಡಿದ್ದು ಈಗ ಬಹಿರಂಗವಾಗಿದೆ.

ಸಂತ್ರಸ್ತೆಗೆ ಈಗ 20 ವರ್ಷ ವಯಸ್ಸಾಗಿದ್ದು, ಕಾನೂನು ವಿದ್ಯಾರ್ಥಿನಿಯಾಗಿರುವ ಆಕೆ ಜುಲೈನಲ್ಲಿ ಮಲ ತಂದೆಯ ಲ್ಯಾಪ್​ಟಾಪ್​ ಬಳಸುವಾಗ ತನ್ನದೇ ನಗ್ನ ಚಿತ್ರಗಳನ್ನು ನೋಡಿ ಬೆಚ್ಚಿಬಿದ್ದಿದ್ದಾಳೆ. ಫೋಟೋಗಳನ್ನು ತೆಗೆದಾಗ ಸಂತ್ರಸ್ತೆಗೆ 14 ಅಥವಾ 15 ವರ್ಷ ವಯಸ್ಸಾಗಿತ್ತು ಎಂದು ನಾಚಾರಾಮ್​ ಠಾಣೆಯ ಪೊಲೀಸ್​ ಇನ್ಸ್​ಪೆಕ್ಟರ್​ ಕಿರಣ್​ ಕುಮಾರ್​ ಮಾಹಿತಿ ನೀಡಿದ್ದಾರೆ. ರಾಜೇಶ್​ಗೆ ಸಂತ್ರಸ್ತೆ ಯುವತಿಯ ತಾಯಿ ಎರಡನೇ ಪತ್ನಿ.

ಲ್ಯಾಪ್​ಟಾಪ್​ ಫೋಟೋಗಳಿರುವ ಬಗ್ಗೆ ಯುವತಿ ತನ್ನ ತಾಯಿಗೆ ತಿಳಿಸಿದ ನಂತ ಇಬ್ಬರು ಠಾಣೆಗೆ ತೆರಳಿ ದೂರು ನೀಡಿ ದ್ದಾರೆ. ಆರೋಪಿಯನ್ನು ಈ ಮೊದಲೇ ಬಂಧಿಸಿದ್ದೆವು. ಆದರೆ, ಆತನಿಗೆ ಕರೊನಾ ವೈರಸ್​ ಪಾಸಿಟಿವ್​ ಇದ್ದ ಕಾರಣ ಗುಣಮುಖವಾದ ಬಳಿಕ ಆತನ ನ್ನು ಸೋಮವಾರ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಕ್ಸೊಕಾಯ್ದೆಯಡಿ ಪ್ರಕರಣ ದಾಖಲಿ ಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ODIನಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದ ಕೊಹ್ಲಿ;

Thu Jan 27 , 2022
ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ಸರಣಿಯಲ್ಲಿನ ಉತ್ತಮ ಪ್ರದರ್ಶನದ ಹಿನ್ನಲೆಯಲ್ಲಿ ಭಾರತದ ದಿಗ್ಗಜ ವಿರಾಟ್ ಕೊಹ್ಲಿ ಐಸಿಸಿ ಪುರುಷರ ODI ಬ್ಯಾಟಿಂಗ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಭಾರತದ ಮತ್ತೊಬ್ಬ ಹಿರಿಯ ಆಟಗಾರ ರೋಹಿತ್ ಶರ್ಮಾ ಕೂಡ ಗಾಯದಿಂದ ಚೇತರಿಸಿಕೊಂಡಿರುವ ಕಾರಣ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಡದಿದ್ದರೂ ಮೂರನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಕೊಹ್ಲಿ 836 ರೇಟಿಂಗ್ ಅಂಕಗಳನ್ನು ಹೊಂದಿದ್ದರೆ, ರೋಹಿತ್ 801 ಅಂಕಗಳನ್ನು ಹೊಂದಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಮ್ […]

Advertisement

Wordpress Social Share Plugin powered by Ultimatelysocial