ಭಾರತೀಯ ಸೇನೆಗೆ ಸುಧಾರಿತ ಸ್ವದೇಶೀ ಡ್ರೋನ್

ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನ ಸೈನಿಕರ ಚಲನವಲನಗಳ ಮೇಲೆ ನಿಗಾ ಹೆಚ್ಚಿಸಲು ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ‘ಭಾರತ್’ ವಿಶೇಷ ಡ್ರೋನ್‌ಗಳನ್ನು ಭಾರತೀಯ ಸೇನೆಗೆ ಹಸ್ತಾಂತರಿಸಿದೆ. ಈ ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಡಿಆರ್‌ಡಿಒದ ಚಂಡೀಗಢ ಪ್ರಯೋಗಾಲಯ ಅಭಿವೃದ್ಧಿಪಡಿಸಿದೆ. ವಿಶ್ವದ ಅತ್ಯಂತ ಚುರುಕು ಬುದ್ಧಿ ಮತ್ತು ಹಗುರವಾದ ಕಣ್ಗಾವಲು ಡ್ರೋನ್‌ಗಳ ಪಟ್ಟಿಗೆ ಇವು ಸೇರಬಲ್ಲವು ಎಂದು ಡಿಆರ್‌ಡಿಒ ವಿಶ್ವಾಸ ವ್ಯಕ್ತಪಡಿಸಿದೆ. ಪೂರ್ವ ಲಡಾಖ್‌ನ ಅತೀ ಎತ್ತರದ ಪ್ರದೇಶಗಳಲ್ಲಿ ನಿಖರ ಕಣ್ಗಾವಲಿಗಾಗಿ ಭಾರತೀಯ ಸೇನೆಗೆ ಡ್ರೋನ್‌ಗಳ ಆವಶ್ಯಕತೆ ಇದೆ. ಡಿಆರ್‌ಡಿಒ ಹಸ್ತಾಂತರಿಸಿರುವ ಡ್ರೋನ್‌ಗಳು ಎಲ್‌ಎಸಿ ವಲಯಗಳಲ್ಲಿ ಕಾರ್ಯಾಚರಣೆಗಿಳಿಯಲಿವೆ ಎಂದು ರಕ್ಷಣ ಮೂಲಗಳು ತಿಳಿಸಿವೆ.

Please follow and like us:

Leave a Reply

Your email address will not be published. Required fields are marked *

Next Post

ಆಧುನಿಕ ಭಗೀರತನಿಗು ಕೊರೋನಾ ಪಾಸಿಟಿವ್ ಧೃಢ

Wed Jul 22 , 2020
ಕೆರೆ ಕಾಮೇಗೌಡ ಎಂದೇ ಖ್ಯಾತಿ ಪಡೆದಿರುವ ಕಲ್ಮನೆ ಕಾಮೇಗೌಡರಿಗೂ ಕೊರೋನಾ ಪಾಸಿಟಿವ್ ಧೃಢಪಟ್ಟಿದೆ. ಆದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ದಿನಗಳಿಂದ ಬಲಗಾಲಿಗೆ ಗಾಯಗೊಂಡು, ಮಳವಳ್ಳಿ ತಾಲ್ಲೂಕು ಆಸ್ಪತ್ರೆ, ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಂತ ಆಧುನಿಕ ಭಗೀರತ ಕಾಮೇಗೌಡರು, ಇತ್ತೀಚೆಗೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಕಾಮೇಗೌಡರನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಿದಾಗ, ಅವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೀಗಾಗಿ ಅವರನ್ನು ಕೋವಿಡ್ -19 ಆಸ್ಪತ್ರೆಗೆ ದಾಖಲಿಸಿ […]

Advertisement

Wordpress Social Share Plugin powered by Ultimatelysocial