ವಿದುರನೀತಿ

ಧೃತರಾಷ್ಟ್ರನು ಚಿಂತಾಕುಲನಾಗಿ ನಿದ್ರೆಯಿಲ್ಲದೆ ತೊಳಲಿ ಕೊನೆಗೆ ವಿದುರನನ್ನು ಕರೆಸಿಕೊಂಡನು. ಇಡೀ ರಾತ್ರಿ ವಿದುರನು ಹೇಳಿದ ನೀತಿಮಾತುಗಳು ವಿದುರನೀತಿಯೆಂದೇ ಪ್ರಸಿದ್ಧವಾಗಿವೆ.
ರಾಜನಿಗೆ ವಿದುರನು ಲೋಕವ್ಯವಹಾರ, ರಾಜಕೀಯ, ಅಧ್ಯಾತ್ಮಿಕ, ಸಾಮಾಜಿಕ, ಧರ್ಮ, ಗೃಹವಾಳ್ತನ, ರಾಜನ ಹೊಣೆ, ಅರಮನೆಯ ನೌಕರರ ನೇಮಕ, ಸೈನ್ಯ, ಮಂತ್ರಿಗಣ, ರಾಜನು ವಹಿಸಬೇಕಾದ ಜವಾಬ್ದಾರಿಗಳು ಹೀಗೆ ಸಮಸ್ತ ವಿಷಯಗಳನ್ನು ಕುರಿತು ವಿವರಿಸುತ್ತಾ ಹೋದನು. ಇದು ಪ್ರತಿಯೊಬ್ಬರಿಗೂ ಅನ್ವಯಿಸುವಂತೆ ಮೂಡಿಬಂದಿದೆ.
ಮೊದಲು ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕು. ಮನ್ನಿಸುವುದಾತ್ಮವನು ಮಿಕ್ಕಿದ್ದು ನಂತರ. ತಾನೇ ಸರಿಯಾಗಿ ಇಲ್ಲದಿದ್ದರೆ ಬೇರೆಯವರಿಗೆ ಏನು ಹೇಳಲು ಸಾಧ್ಯ? ಪಾಪ ಪುಣ್ಯಗಳ ಅರಿವು ಅಗತ್ಯ. ಅವು ನಮ್ಮನ್ನು ನಿಯಂತ್ರಿಸುತ್ತವೆ.
ಈ ಭೂಮಿಯಲ್ಲಿ ರಾವಣ ಮತ್ತು ದುರ್ಯೋಧನ ಈ ಇಬ್ಬರು ಕಡು ಮೂರ್ಖರು. ಭೂಸುರರೊಂದಿಗೆ ದ್ವೇಷ ಬೇಡ.ಈ ಮಾನವಜನ್ಮ ದೊಡ್ಡದು. ಇದನ್ನು ಅರ್ಥ ಮಾಡಿಕೊಂಡು ನಡೆದರೆ ಒಳ್ಳೆಯದು. ಎಲ್ಲಿಯವರೆಗೆ ನಮಗೆ ಋಣಭಯವು ಇರುತ್ತದೆಯೋ ಅಲ್ಲಿಯವರೆಗೆ ಧರ್ಮ, ದೇವರ ಬಗ್ಗೆ ಭಕ್ತಿ ಇರುತ್ತದೆ. ಮಂತ್ರಾಲೋಚನೆ ಮಾಡುವಾಗ ಕೊನೆಯಲ್ಲಿ ತನ್ನ ಮನದಲ್ಲಿರುವ ಭಾವ ಪ್ರಕಟವಾಗಬೇಕು. ಸಿರಿಯೆನ್ನುವುದು ಅಗತ್ಯ. ಅದಿದ್ದರೇ ಮರ್ಯಾದೆ. ಅದನ್ನು ಸರಿಯಾಗಿ ನಿರ್ವಹಿಸಬೇಕು.
ಅಕಾಲಗಳಲ್ಲಿ ಭೋಜನ, ಶಯನ, ಭೋಗ ಮುಂತಾದವನ್ಬು ಮಾಡಬಾರದು. ಬಡತನದಲ್ಲಿ ಬಂಧುಗಳು ಕಾಣರು, ಸಿರಿಯಿದ್ದರೆ ಓಡಿ ಬರುವರು, ಪರಸ್ತ್ರೀಗಮನ ಸಲ್ಲದು. ತಂದೆತಾಯಿಗಳನ್ನು ಆದರಿಸಬೇಕು. ಅವರ ಆಜ್ಞೆಯನ್ನು ಪಾಲಿಸಬೇಕು. ರಾಜನಾದವನಿಗೆ ತನ್ನ ಮಂತ್ರಿ, ಸೇನಾಪತಿ, ಸೇವಕ, ಅಡಿಗೆಯವ, ಚಾಮರದವ, ಛತ್ರದವ ಮುಂತಾದವರ ಬಗ್ಗೆ ಸರಿಯಾದ ಮಾಹಿತಿ ಇರಬೇಕು. ನೇಮಿಸಿಕೊಳ್ಳುವಾಗ ಜಾಗರೂಕತೆಯಿಂದ ವರ್ತಿಸಬೇಕು. ಅವರವರ ವೃತ್ತಿಧರ್ಮಗಳನ್ನು ಅರಿತು ಪಾಲಿಸುವವರೇ ನಿಜವಾದ ಪರಿವಾರ.
ಹಾಗೆಯೇ ರಾಜನಿಗೆ ತನ್ನ ಸೈನ್ಯದ ಸಂಪೂರ್ಣವಾದ ಮಾಹಿತಿ ಇರಬೇಕು. ರಥ, ಕುದುರೆ, ಆನೆ ಮುಂತಾದ ಸೈನ್ಯದ ಬಗ್ಗೆ ತಿಳಿದಿರಬೇಕು. ರಾಜನು ಏಳುವ ಸಮಯದಲ್ಲಿ ಶುಭವಸ್ತುಗಳಾದ ಕಳಶ, ಕನ್ನಡಿ ಸುವಾಸಿನಿ ಮುಂತಾದ ಮಂಗಳ ವಾತಾವರಣ ಅಗತ್ಯ. ಮತ್ತು ನಾಯಿ, ಕೋಳಿ ಮುಂತಾದ ಸಾಮಾನ್ಯ ಜೀವಿಗಳಿಂದಲೂ ಕಲಿಯುವುದು ಬಹಳಷ್ಟು ಇರುತ್ತದೆಂದು ಹೇಳಿದನು. ನಡುವೆ ನಡುವೆ ಪಾಂಡವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಬಗ್ಗೆ ಚಿಂತಿಸಬೇಕೆಂದು ಸೂಕ್ಷ್ಮವಾಗಿ ಹೇಳುತ್ತಿದ್ದನು.
ಕೋಪವೆಂಬುದು ಅನರ್ಥಕ್ಕೆ ಮೂಲ. ಆದ್ದರಿಂದ ಕೋಪ ಸಲ್ಲದು. ಸಹನೆ ಅಗತ್ಯ. ವಿದ್ಯೆಗೆ ಯಾವುದೇ ಸಮಯದಲ್ಲಿಯೂ ಬೆಲೆ ಇರುತ್ತದೆ. ದುಸ್ಸಂಗವೆಂಬುದು ಬಹಳ ಕಷ್ಟ. ಯತಿಯೂ ಕೆಡಬಹುದು ಇದರಲ್ಲಿ. ಸತ್ಸಂಗ ಎಲ್ಲಕ್ಕೂ ಒಳ್ಳೆಯದು. ದೇವಾಲಯಗಳಲ್ಲಿ, ರಾಜನ ಅಸ್ಥಾನದಲ್ಲಿ, ಉದಯಾಸ್ತಕಾಲಗಳಲ್ಲಿ ಸದಾ ಒಳ್ಳೆಯ ಕೆಲಸಗಳನ್ನು ಮಾಡಬೇಕು. ಪಾಂಡುತನಯರಿಗೆ ಚಕ್ರಿಯ ನೆರವಿದೆ. ಅದೊಂದಿದ್ದರೆ ಎಲ್ಲವನ್ನೂ ಗೆಲ್ಲಬಹುದು. ಇನ್ನೂ ಕಾಲ ಮಿಂಚಿಲ್ಲ. ಯೋಚಿಸು ಎಂದು ಬುದ್ಧಿ ಹೇಳಿದನು. ಈಗಾಗಲೇ ಅವರ ಪ್ರಭಾವ ಕಂಡಿರುವೆ. ಅವರನ್ನು ಗೆಲ್ಲುವೆವೆಂಬುದು ಸುಳ್ಳು.
ಹೀಗೆ ವಿದುರನು ಬಹಳ ವಿಸ್ತಾರವಾದ ನೀತಿ ಮಾತುಗಳನ್ನು ತನಗೆ ತೋರಿದಂತೆ ಹೇಳಿದನು. ಚಿತ್ತದ ವಿಕಲತೆಯನ್ನು ಮೆಟ್ಟಿ ನಿಲ್ಲು ಎಂದು ಬೋಧಿಸಿದನು.

ಹೀಗೆ ವಿದುರನು ಬಹಳ ವಿಸ್ತಾರವಾದ ನೀತಿ ಮಾತುಗಳನ್ನು ತನಗೆ ತೋರಿದಂತೆ ಹೇಳಿದನು. ಚಿತ್ತದ ವಿಕಲತೆಯನ್ನು ಮೆಟ್ಟಿ ನಿಲ್ಲು ಎಂದು ಬೋಧಿಸಿದನು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಸ್. ರಾಮಸ್ವಾಮಿ

Mon Mar 28 , 2022
  ಪ್ರಖ್ಯಾತ ವಿದ್ವಾಂಸ, ಪ್ರಾಧ್ಯಾಪಕ, ಸಂಶೋಧಕ, ಪತ್ರಿಕಾ ಸಂಪಾದಕ, ಬರಹಗಾರ, ವಿಶ್ವದೆಲ್ಲೆಡೆ ಅಲಮಾರಿ ಹೀಗೆ ವಿಶಿಷ್ಟ ವೈವಿಧ್ಯಮಯ ಕೀರ್ತಿಗಳಿಂದ ಪ್ರಖ್ಯಾತರಾದವರು ಡಾ. ಎಸ್. ರಾಮಸ್ವಾಮಿ. ಅಲೆಮಾರಿ ರಾಮಸ್ವಾಮಿ ಎಂದು ಪ್ರಖ್ಯಾತರಾದ ಇವರು ಸುತ್ತದ ದೇಶವಿಲ್ಲ, ಪ್ರಬಂಧ ಮಂಡಿಸಿದ ಸಮ್ಮೇಳನಗಳಿಲ್ಲ, ಸಂದರ್ಶಕ ಪ್ರಾಧ್ಯಾಪಕರಾಗಿ ಪಾಠ ಹೇಳದ ವಿಶ್ವವಿದ್ಯಾಲಯಗಳಿಲ್ಲ. ರಾಮಸ್ವಾಮಿಯವರು 1932ರ ಮಾರ್ಚ್‌ 27ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಸ್.ಹನುಮಂತರಾವ್. ತಾಯಿ ನಾಗಮ್ಮ. ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಓದಿ, ಮೈಸೂರು ವಿಶ್ವವಿದ್ಯಾಲಯದಿಂದ […]

Advertisement

Wordpress Social Share Plugin powered by Ultimatelysocial