ಬ್ಯಾಕ್‍ಗ್ರೌಂಡ್ ಇದ್ದರೂ, ಸ್ಯಾಂಡಲ್​ವುಡ್​​ನಲ್ಲಿ ಕ್ಲಿಕ್ ಆಗದ ನಟರು ಇವರು!.

 

ವಿನಯ್ ರಾಜ್ ಕುಮಾರ್- ಉತ್ತಮ ಬ್ಲಾಕ್‍ಗ್ರೌಂಡ್ ಹೊಂದಿರು ವಿನಯ್ ರಾಜ್‍ಕುಮಾರ್ ಸ್ಯಾಂಡಲ್‍ವುಡ್‍ನಲ್ಲಿ ಗಟ್ಟಿಯಾಗಿ ನೆಲೆಯೂರಲ್ಲು ಆಗಿಲ್ಲ.4 ವರ್ಷಗಳಿಂದ ಇವರ ಯಾವ ಸಿನಿಮಾವೂ ತೆರೆಕಂಡಿಲ್ಲ. ಸಿದ್ದಾರ್ಥ್, ರನ್ ಆಂಟನಿ, ಅನಂತು ವರ್ಸಸ್ ನುಸ್ರತ್ ಸಿನಿಮಾದಲ್ಲಿ ಅಭಿನಯಿಸಿದ್ದ ವಿನಯ್ ಅವರು ಸದ್ಯ ಸೈಲೆಂಟ್ ಆಗಿದ್ದಾರೆ.ಮನೋರಂಜನ್ ರವಿಚಂದ್ರನ್-ಸ್ಯಾಂಡಲ್‍ವುಡ್‍ನ ಅದ್ಭುತ ಕಲಾವಿದ ರವಿಚಂದ್ರನ್ ವರು ಪುತ್ರ ಮನೋರಂಜನ್ ರವಿಚಂದ್ರನ್ ಸಹ ಕನ್ನಡ ಸಿನಿಮಾ ರಂಗದಲ್ಲಿ ನೆಲೆಯೂರಲು ಆಗಿಲ್ಲ. ‘ಸಾಹೇಬ’ ಚಿತ್ರದ ಮೂಲಕ ಮನೋರಂಜನ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಅದು ಅಷ್ಟು ಹಿಟ್ ಆಗಲಿಲ್ಲ.ನಂತರ ಬೃಹಸ್ಪತಿ, ಮುಗಿಲ್ ಪೇಟೆ, ಪ್ರಾರಂಭ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಅವು ಕೂಡ ಹಿಟ್ ಆಗಲಿಲ್ಲ.ಪಂಕಜ್- ಜನಪ್ರಿಯ ನಿರ್ದೇಶಕ ಕಲಾಸಾಮ್ರಾಟ್ ಎಸ್.ನಾರಾಯಣ್ ಅವರ ಪುತ್ರ ನಟ ಪಂಕಜ್ ನಾರಾಯಣ್. ಚೈತ್ರದ ಚಂದ್ರಮ ಸಿನಿಮಾ ಮೂಲಕ 16ನೇ ವಯಸ್ಸಿನಲ್ಲಿ ಸಿನಿಮಾಗೆ ಪಾದರ್ಪಣೆ ಮಡಿದ್ರು. ‘ಚೆಲುವಿನ ಚಿಲಿಪಿಲಿ’, ‘ದುಷ್ಟ’,’ದಾಂಡಿಗ’ ದಲ್ಲಿ ನಟಿಸಿದ್ರೂ ಅವು ಅಷ್ಟೊಂದು ಹೆಸರು ತಂದು ಕೊಡಲಿಲ್ಲ.ಗುರುರಾಜ್ ಜಗ್ಗೇಶ್- ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್. ಇವರು ಬಾಲನಟನಾಗಿ `ಬೇಡ ಕೃಷ್ಣ ರಂಗಿನಾಟ’ ಚಿತ್ರದಲ್ಲಿ ನಟಿಸಿದ್ದರು. ಗಿಲ್ಲಿ ಚಿತ್ರದ ಮೂಲಕ ಕನ್ನಡ ಸಿನಿಮಾಗೆ ನಾಯಕನಾಗಿ ಎಂಟ್ರಿ ಕೊಟ್ಟರು. ಜಗ್ಗೇಶ್ ನಿರ್ದೇಶನದ ಗುರು ಚಿತ್ರದಲ್ಲಿ ನಾಯಕನಾಗಿ ನಟಿಸಿದರು. ನಂತರ ಸಂಕ್ರಾತಿ,  ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದ್ರೆ ಆ ಸಿನಿಮಾಗಳೂ ಸಕ್ಸಸ್ ಕಾಣಲಿಲ್ಲ.ಅನೂಪ್ ರೇವಣ್ಣ- ಖ್ಯಾತ ರಾಜಕಾರಣಿ ಹೆಚ್.ಎಮ್. ರೇವಣ್ಣ ಮತ್ತು ನಿರ್ಮಾಪಕಿ ವತ್ಸಲಾ ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ. ಮೊದಲ ಬಾರಿಗೆ ಆರ್.ಚಂದ್ರು ನಿರ್ದೇಶನದ `ಲಕ್ಮಣ’ ಚಿತ್ರದಿಂದ ಸಿನಿಮಾ ಪಯಣ ಶುರು ಮಾಡಿದ್ರು. ‘ಪಂಟ’ ಚಿತ್ರದಲ್ಲಿ ನಟಿಸಿದ್ದರು, ಆದ್ರೂ ಇವರ ಸಿನಿಮಾಗಳು ಸಹ ಹಿಟ್ ಆಗಿಲ್ಲ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಳೆದ 28 ವರ್ಷಗಳಿಂದ ಸತತವಾಗಿ ಜಯ ಗಳಿಸಿದ್ದ ಕ್ಷೇತ್ರವನ್ನೇ ಕಳೆದುಕೊಂಡ ಬಿಜೆಪಿ.

Fri Mar 3 , 2023
  ಇತ್ತೀಚಿಗೆ ನಡೆದ ಮೂರು ರಾಜ್ಯಗಳ ವಿಧಾನಸಭಾ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ. ಇದೇ ಸಂದರ್ಭದಲ್ಲಿ ಉಪಚುನಾವಣೆಯ ಫಲಿತಾಂಶವೂ ಹೊರ ಬಿದ್ದಿದ್ದು, ಮಹಾರಾಷ್ಟ್ರದಲ್ಲಿ ಪ್ರಮುಖ ಕ್ಷೇತ್ರ ಒಂದನ್ನು ಬಿಜೆಪಿ ಕಳೆದುಕೊಂಡಿದೆ.ಮಹಾರಾಷ್ಟ್ರದ ಕಸಬಾ ಪೇಠ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಳೆದ 28 ವರ್ಷಗಳಿಂದ ಗೆಲವು ಸಾಧಿಸಿಕೊಂಡು ಬಂದಿದ್ದು, ಆದರೆ ಇದೇ ಮೊದಲ ಬಾರಿಗೆ ಇಲ್ಲಿ ಸೋಲು ಕಂಡಿದೆ.ಈ ಕ್ಷೇತ್ರದಿಂದ ಕಾಂಗ್ರೆಸ್ಸಿನ ರವೀಂದ್ರ ದಂಗೆಕರ್ ಆಯ್ಕೆಯಾಗಿದ್ದು, ಇವರಿಗೆ ಎನ್.ಸಿ.ಪಿ. […]

Advertisement

Wordpress Social Share Plugin powered by Ultimatelysocial