ಕಳೆದ 28 ವರ್ಷಗಳಿಂದ ಸತತವಾಗಿ ಜಯ ಗಳಿಸಿದ್ದ ಕ್ಷೇತ್ರವನ್ನೇ ಕಳೆದುಕೊಂಡ ಬಿಜೆಪಿ.

 

ತ್ತೀಚಿಗೆ ನಡೆದ ಮೂರು ರಾಜ್ಯಗಳ ವಿಧಾನಸಭಾ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ. ಇದೇ ಸಂದರ್ಭದಲ್ಲಿ ಉಪಚುನಾವಣೆಯ ಫಲಿತಾಂಶವೂ ಹೊರ ಬಿದ್ದಿದ್ದು, ಮಹಾರಾಷ್ಟ್ರದಲ್ಲಿ ಪ್ರಮುಖ ಕ್ಷೇತ್ರ ಒಂದನ್ನು ಬಿಜೆಪಿ ಕಳೆದುಕೊಂಡಿದೆ.ಮಹಾರಾಷ್ಟ್ರದ ಕಸಬಾ ಪೇಠ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಳೆದ 28 ವರ್ಷಗಳಿಂದ ಗೆಲವು ಸಾಧಿಸಿಕೊಂಡು ಬಂದಿದ್ದು, ಆದರೆ ಇದೇ ಮೊದಲ ಬಾರಿಗೆ ಇಲ್ಲಿ ಸೋಲು ಕಂಡಿದೆ.ಈ ಕ್ಷೇತ್ರದಿಂದ ಕಾಂಗ್ರೆಸ್ಸಿನ ರವೀಂದ್ರ ದಂಗೆಕರ್ ಆಯ್ಕೆಯಾಗಿದ್ದು, ಇವರಿಗೆ ಎನ್.ಸಿ.ಪಿ. ಹಾಗೂ ಶಿವಸೇನೆ (ಉದ್ದವ್ ಠಾಕ್ರೆ ಬಣ) ಬೆಂಬಲಿಸಿದ್ದವು.ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಅಧಿಕಾರಕ್ಕೆ ಬಂದ ಶಿವಸೇನೆ (ಶಿಂಧೆ ಬಣ) ಹಾಗೂ ಬಿಜೆಪಿ ಮೈತ್ರಿ ನೇತೃತ್ವದ ಸರ್ಕಾರಕ್ಕೆ ಇದು ಮೊದಲ ಚುನಾವಣೆಯಾಗಿತ್ತು. ಕಸಬಾ ಪೇಠ್ ಕ್ಷೇತ್ರದಲ್ಲಿ ಸೋತರೂ ಚಿಂಚ್ವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಅಶ್ವಿನಿ ಜಗಪತ್ ಗೆಲುವು ಸಾಧಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉರಿಯೂತ ಕಡಿಮೆ ಮಾಡಿ ಈ ಆರೋಗ್ಯ ಪ್ರಯೋಜನ ನೀಡುತ್ತೆ ಕರಿಮೆಣಸು

Fri Mar 3 , 2023
ಕಪ್ಪು ಮೆಣಸು ಮಸಾಲೆಗಳಲ್ಲಿ ಜನಪ್ರಿಯತೆ ಪಡೆದಿದೆ. ವಿವಿಧ ಅಡುಗೆಗೆ ಇದನ್ನು ಬಳಸಲಾಗುತ್ತದೆ. ಪೌಷ್ಟಿಕ ಅಂಶಗಳಿಂದ ತುಂಬಿರುವುದರಿಂದ ಇದು ನಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿ. ಶೀತ, ಕೆಮ್ಮಿನಿಂದ ಬಳಲುತ್ತಿರುವ ಜನರಿಗೆ ಕರಿಮೆಣಸು ಅತ್ಯುತ್ತಮ ಔಷಧಿಯಾಗಿದೆ.ಆಯುರ್ವೇದದಲ್ಲೂ ಶೀತ ಮತ್ತು ಕೆಮ್ಮಿನ ಸಮಸ್ಯೆಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತದೆ. ಜನರು ಜೇನುತುಪ್ಪದೊಂದಿಗೆ ಕರಿಮೆಣಸಿನ ಪುಡಿಯನ್ನು ಸೇವಿಸುವುದ್ರಿಂದ ಕೆಮ್ಮು, ಶೀತ ಕಡಿಮೆಯಾಗುತ್ತದೆ. ಸಾಂಕ್ರಾಮಿಕವನ್ನು ತಪ್ಪಿಸಲು ರೋಗ ನಿರೋಧಕ ಶಕ್ತಿ ಬಲವಾಗಿರಬೇಕು. ಈ ಸಂದರ್ಭದಲ್ಲಿ ಕಷಾಯವನ್ನು ಕುಡಿಯಲು ಕೇಳಲಾಗುತ್ತಿದೆ. ರೋಗ […]

Advertisement

Wordpress Social Share Plugin powered by Ultimatelysocial