ನಾಳೆ ಬಿಡುಗಡೆಯಾಗಲಿದೆ ‘ಜೇಮ್ಸ್’ ಟೀಸರ್

ಪುನೀತ್ ರಾಜ್ ಕುಮಾರ್ ನಟನೆಯ ‘ಜೇಮ್ಸ್‌’ ಚಿತ್ರದ ಟೀಸರ್ ನಾಳೆ ಬಿಡುಗಡೆಯಾಗಲಿದ್ದು, ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾ ಇದಾಗಿದ್ದು, ನಾಳೆ ಬೆಳಿಗ್ಗೆ 11-11ಕ್ಕೆ ಈ ಟೀಸರ್ ರಿಲೀಸ್ ಆಗಲಿದೆ.ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಕಿಶೋರ್ ನಿರ್ಮಾಣ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ತೆರೆಕಾಣಲಿದೆ. ಪುನೀತ್ ರಾಜ್ ಕುಮಾರ್ ಪಾತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವಾಯ್ಸ್ ನೀಡಿದ್ದಾರೆ.ಈ ಸಿನಿಮಾದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ಅಭಿನಯಿಸಿದ್ದು, ಶರತ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶ್ರೀಕಾಂತ್, ಅನು ಪ್ರಭಾಕರ್, ಆದಿತ್ಯ ಮೆನನ್ ಸೇರಿದಂತೆ ಹಲವರ ತಾರಾಬಳಗವಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫೆಬ್ರವರಿ 10ರಂದು ದೇಶದ ಬಹುತೇಕ ನಗರಗಳಲ್ಲಿ ಚಿನ್ನ ಭಾರಿ ಏರಿಕೆ!

Thu Feb 10 , 2022
ನವದೆಹಲಿ,ಫೆಬ್ರವರಿ 10 : ದೇಶದ ವಿವಿಧ ನಗರಗಳಲ್ಲಿ ದಿನೇ ದಿನೇ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಫೆಬ್ರವರಿ 10ರಂದು ದೇಶದ ಬಹುತೇಕ ನಗರಗಳಲ್ಲಿ ಚಿನ್ನ ಭಾರಿ ಏರಿಕೆ ಕಂಡಿದೆ.22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 45,800 ರೂ. ಆಗಿದೆ, 24 ಕ್ಯಾರೆಟ್‌ನ ಚಿನ್ನ 49,970ರೂ.ಆಗಿದೆ.ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 45,800 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 49,970 ರೂ ಇದೆ. ಮುಂಬೈನಲ್ಲಿ […]

Advertisement

Wordpress Social Share Plugin powered by Ultimatelysocial