ರಕ್ತದಾನ ಮಾಡಿದ ಕಲಬುರಗಿಯಾ ಮಹಾದೇವಪ್ಪ ರಾಂಪೂರೆ ಪುಣ್ಯಸ್ಮರಣೆ,

ಕಲಬುರಗಿ: ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್. ಇರಾನಿ ಪದವಿ ಮಹಾವಿದ್ಯಾಲಯದಲ್ಲಿ ಭಾನುವಾರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹಾದೇವಪ್ಪ ರಾಂಪೂರೆ ಅವರ 49ನೇ ಪುಣ್ಯಸ್ಮರಣೆ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್‌ಕ್ರಾಸ್ ಘಟಕ ಹಾಗೂ ರೆಡ್‌ ರಿಬ್ಬನ್ ಘಟಕಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು.

 

ಶಿಬಿರ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಮಹಾದೇವಪ್ಪ ವಿ. ರಾಂಪೂರೆ ಅವರು ರಕ್ತದಾನದ ಮಹತ್ವ ವಿವರಿಸಿದರು. 30 ವಿದ್ಯಾರ್ಥಿಗಳು, ಸಿಬ್ಬಂದಿ ರಕ್ತದಾನ ಮಾಡಿದರು.

ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಸೋಮನಾಥ ನಿಗ್ಗುಡಗಿ, ವಿನಯ ಪಾಟೀಲ, ಪ್ರಾಚಾರ್ಯ ಡಾ.ರಾಜಶೇಖರ ಬೀರನಳ್ಳಿ, ರಾಷ್ಟ್ರೀಯ ಸೇವಾ ಯೋಜನೆ ಅ ಘಟಕದ ಅಧಿಕಾರಿ ಡಾ.ಪ್ರಾಣೇಶ ಎಸ್., ರಾಷ್ಟ್ರೀಯ ಸೇವಾ ಯೋಜನೆ ಬ ಘಟಕದ ಅಧಿಕಾರಿ ಡಾ.ಶಂಕರಪ್ಪ ಕೆ., ಡಾ.ಎಸ್.ಡಿ. ಬರ್ದಿ, ಪ್ರೊ.ರೋಹಿಣಿಕುಮಾರ ಹಿಳ್ಳಿ, ಪ್ರೊ.ಸಿದ್ಧಾರೂಢ ಕೋಟನೂರ, ಡಾ.ಶರಣಕುಮಾರ ಮಾಶಾಳ, ಡಾ.ಜಯಶ್ರೀ, ಡಾ.ಸುನಿತಾ, ಬಿ.ಒ. ಬೊಮ್ಮಪ್ಪ, ಬಸವರಾಜ ಬಿ.ಸಿ. ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲಬುರಗಿಯಲ್ಲಿ ಇಂದಿನಿಂದ ಜಗದಂದಬಾದೇವಿ ಅಗ್ಗಿ ಜಾತ್ರೆ ಆರಂಭ.

Mon Feb 7 , 2022
ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಚೌಡಾಪುರದ ಜಗದಂಬಾದೇವಿ 12ನೇ ಅಗ್ಗಿ ಜಾತ್ರಾ ಮಹೋತ್ಸವ, ಲಕ್ಷ ದೀಪೋತ್ಸವ, ಬಂಜಾರ ಭವನದ ಉದ್ಘಾಟನೆ ಹಾಗೂ ವಿಶ್ವಧರ್ಮ ಪ್ರವಚನ ಕಾರ್ಯಕ್ರಮ ಫೆ. 7 ಹಾಗೂ 8ರಂದು ನಡೆಯಲಿದೆ. ಕ್ಷೇತ್ರದ ಮುರಾಹರಿ ಮಹಾರಾಜ ಅವರು ಎಲ್ಲ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸುವರು. ಪೆ. 7ರಂದು ಸಂಜೆ 7.30ಕ್ಕೆ ಬಂಜಾರ ಭವನದ ಉದ್ಘಾಟನೆ ಹಾಗೂ ರಾತ್ರಿ 8ಕ್ಕೆ ಲಕ್ಷ ದೀಪೋತ್ಸವ ನಡೆಯಲಿದೆ. ಚಿಣಮಗೇರಾ ಮಹಾಂತೇಶ್ವರ ಮಠದ ವೀರಮಹಾಂತ ಶಿವಾಚಾರ್ಯರು, ಲಿಂಗಸೂರಿನ […]

Advertisement

Wordpress Social Share Plugin powered by Ultimatelysocial