ಭಾರತೀಯ ಸೇನೆಯು ಟರ್ಕಿಯಲ್ಲಿ ಸುಮಾರು 3600 ರೋಗಿಗಳಿಗೆ ಚಿಕಿತ್ಸೆ ನೀಡಿದೆ : ಭಾರತ ಸೈನ್ಯಕ್ಕೆ ‘ಟರ್ಕಿ’ ಜನರಿಂದ ಹೃದಯಾಳದ ಧನ್ಯವಾದ

ವದೆಹಲಿ : ಭೂಕಂಪ ಪೀಡಿತ ಟರ್ಕಿಯಲ್ಲಿ ಆಪರೇಷನ್ ದೋಸ್ತ್ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಭಾರತೀಯ ಸೇನೆಯು ತ್ವರಿತ ರೀತಿಯಲ್ಲಿ ನೀಡಿದ ಸಹಾಯ ವಿಧಾನಕ್ಕೆ ಟರ್ಕಿ ಜನ ಅಭಿಮಾನಿಗಳಾಗಿದ್ದಾರೆ. ಅದ್ರಂತೆ, ಭಾರತೀಯ ಸೇನೆಯು ಟರ್ಕಿಯಲ್ಲಿ ಸುಮಾರು 3600 ರೋಗಿಗಳಿಗೆ ಚಿಕಿತ್ಸೆ ನೀಡಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ.

ಟರ್ಕಿಯ ನಾಗರಿಕರು ಈ ಬಗ್ಗೆ ಸಂದೇಶಗಳನ್ನ ಕಳುಹಿಸುವ ಮೂಲಕ ನಮಗೆ ಧನ್ಯವಾದ ಹೇಳುತ್ತಿದ್ದಾರೆ ಎಂದು ಅವರು ಹೇಳಿದರು. ಟರ್ಕಿಶ್ ರೋಗಿಗಳು ಭಾರತೀಯ ಸೇನೆಯು ನಿಜವಾಗಿಯೂ ಅಗತ್ಯವಿರುವ ಸಮಯದಲ್ಲಿ ಸಹಾಯ ಮಾಡಿದೆ ಎಂದು ಹೇಳುತ್ತಾರೆ ಎಂದರು.

ಆರು ಗಂಟೆಗಳಲ್ಲಿ ಆಸ್ಪತ್ರೆ ಸಿದ್ಧ.!
ಟರ್ಕಿಯಲ್ಲಿ ಆಸ್ಪತ್ರೆಯನ್ನ ಕೇವಲ ಆರು ಗಂಟೆಗಳ ಅಲ್ಪಾವಧಿಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಹೇಳಿದ್ದಾರೆ. ಅವಸರದಲ್ಲಿ 30 ಹಾಸಿಗೆಗಳ ಆಸ್ಪತ್ರೆಯನ್ನ ನಿರ್ಮಿಸಲಾಯಿತು. ಈ ಕ್ಷೇತ್ರ ಆಸ್ಪತ್ರೆ 14 ದಿನಗಳ ಕಾಲ ಕೆಲಸ ಮಾಡುವುದನ್ನ ಮುಂದುವರಿಸಿತು. ಇದಕ್ಕಾಗಿ ತಜ್ಞ ವೈದ್ಯರನ್ನ ನಿಯೋಜಿಸಲಾಗಿತ್ತು. ಭಾರತೀಯ ಸೇನಾ ವೈದ್ಯಕೀಯ ತಂಡ 60 ಪ್ಯಾರಾ ಫೀಲ್ಡ್’ನ್ನ ಸೇನಾ ಮುಖ್ಯಸ್ಥರು ಸನ್ಮಾನಿಸಿದರು. ಟರ್ಕಿಯಲ್ಲಿ ನೆರವು ನೀಡಿದ ನಂತರ ತಂಡವು ಮನೆಗೆ ಮರಳಿದೆ.

ತೀವ್ರ ಭೂಕಂಪ.!
ಅಂದ್ಹಾಗೆ, ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದ ನಂತರ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ನಂತ್ರ, ತಕ್ಷಣವೇ ಭಾರತ ಅವರ ನೆರವಿಗೆ ನಿಂತಿತು. ಇದಕ್ಕಾಗಿ ಪ್ರತ್ಯೇಕ ತಂಡಗಳನ್ನ ಕಳುಹಿಸಲಾಗಿತ್ತು. ಎನ್ಡಿಆರ್‌ಎಫ್ ಸಿಬ್ಬಂದಿಯ ತಂಡವು ರಕ್ಷಣಾ ಕಾರ್ಯಕ್ಕಾಗಿ ಟರ್ಕಿಗೆ ತೆರಳಿತ್ತು. ಇನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಟರ್ಕಿಯಿಂದ ಹಿಂದಿರುಗಿದ ಎನ್ಡಿಆರ್‌ಎಫ್ ಸಿಬ್ಬಂದಿಯನ್ನು ಭೇಟಿಯಾಗಿ ಅವರನ್ನ ಶ್ಲಾಘಿಸಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನನ್ನ ಕ್ಷೇತ್ರದ ಮೇಲೆ ದೇವರಿಗೂ ಕೋಪ, ಸರ್ಕಾರಕ್ಕೂ ಕೋಪ.

Wed Feb 22 , 2023
ವಿಧಾನಸಭೆ: ನನ್ನ ಕ್ಷೇತ್ರದ ಮೇಲೆ ದೇವರಿಗೂ ಕೋಪ, ಸರ್ಕಾರಕ್ಕೂ ಕೋಪ. ಸರ್ಕಾರ ಇನ್ನು ಒಂದು ತಿಂಗಳು ಮಾತ್ರ ಇರಲಿದ್ದು, ಈ ಅವಧಿಯಲ್ಲಾದರೂ ಪ್ರೀತಿ ತೋರಿಸಿ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್‌ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ರಸ್ತೆ ಹಾಳಾಗಿದ್ದು ದುರಸ್ತಿ ಆಗಬೇಕಿದೆ. ನೆರೆ ತಡೆ ಗೋಡೆ ನಿರ್ಮಾಣ ಮಾಡುವುದು ಸೇರಿದಂತೆ ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿನ ರಸ್ತೆ ಮತ್ತಿತರ ಮೂಲಸೌಕರ್ಯಗಳ ಅಭಿವೃದ್ಧಿಗೆ […]

Advertisement

Wordpress Social Share Plugin powered by Ultimatelysocial