ಭ್ರಷ್ಟಾಚಾರವೇ ಬಿಜೆಪಿ ಸಂಸ್ಕಾರ

ಕೊರೊನಾ ಹೆಸರಿನಲ್ಲಿ ನಡೆಸಿದ ಭ್ರಷ್ಟಾಚಾರವೇ ಬಿಜೆಪಿ ಸಂಸ್ಕಾರ ಎನ್ನುವಂತಾಗಿದೆ. ಸಾರ್ವಜನಿಕ ಲೆಕ್ಕ ಸಮಿತಿ ಸಭೆ ನಡೆಸಲು ಸರ್ಕಾರ ಮುಂದಾಗಿಲ್ಲ. ಭ್ರಷ್ಟಾಚಾರದ ಬಗ್ಗೆ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ಆಗಬೇಕು’ ರಾಜ್ಯದ ಎಲ್ಲ ಜಿಲ್ಲೆಗಳಿಗೂ 30 ಜನರ ತಂಡ ಭೇಟಿ ನೀಡಲಿದೆ. ಕೊರೊನಾ ಸಂತ್ರಸ್ತರಿಗೆ ಧೈರ್ಯ ತುಂಬುವ, ಸಹಾಯ ಮಾಡುವ ಮತ್ತು ಭ್ರಷ್ಟಾಚಾರ ಬಯಲಿಗೆ ಎಳೆಯುವ ಕೆಲಸವನ್ನು ಈ ತಂಡ ಮಾಡಲಿದೆ’ ರಾಜ್ಯ ಸರ್ಕಾರ ಕೋವಿಡ್ -19 ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಮೂಲಕ ₹4 ಸಾವಿರ ಕೋಟಿಯನ್ನು ಸುರಕ್ಷಾ ಸಾಮಗ್ರಿ, ವೈದ್ಯಕೀಯ ಉಪಕರಣಗಳ ಖರೀದಿ ಮತ್ತು ಕಾರ್ಮಿಕ ಇಲಾಖೆಯ ಮೂಲಕ ವೆಚ್ಚ ಮಾಡಿರುವುದಾಗಿ ದಾಖಲೆಯಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರದ ಸಾಮಗ್ರಿ ಖರೀದಿ ಹಾಗೂ ಇತರ ರಾಜ್ಯಗಳು ಕೋವಿಡ್ ಸಾಮಗ್ರಿಗಳ ಬೆಲೆಗೆ ಹೋಲಿಸಿದರೆ, ರಾಜ್ಯದಲ್ಲಿ ₹2 ಸಾವಿರ ಕೋಟಿಗೂ ಅಧಿಕ ಹಣ ಲೂಟಿಯಾಗಿದೆ ಎಂದು ಆರೋಪಿಸಿದರು.’ರಾಜ್ಯದಲ್ಲಿ ಅಭಿವೃದ್ಧಿ ಕೆಲಸವನ್ನು ನಿಲ್ಲಿಸಲಾಗಿದ್ದು, ಸರ್ಕಾರಕ್ಕೆ ಬೇಕಾದ ಕೆಲಸ ಮಾತ್ರ ಮಾಡಲಾಗುತ್ತಿದೆ. ಬೇಕಾಬಿಟ್ಟಿ ಬಿಲ್‌ಗಳನ್ನು ನೀಡುತ್ತಾರೆ. ₹ 4 ಲಕ್ಷ ಮೌಲ್ಯದ ವೆಂಟಿಲೇಟರ್ ಕಿಟ್ ಅನ್ನು ₹ 18 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ನಾನು ₹1,050 ದರದಲ್ಲಿ ಥರ್ಮಲ್ ಸ್ಕ್ಯಾನರ್ ಖರೀದಿ ಮಾಡಿದ್ದೇನೆ. ₹100 ದರದಲ್ಲಿ ಸ್ಯಾನಿಟೈಸರ್‌ನ್ನು ಖರೀದಿ ಮಾಡಿದ್ದೇನೆ. ಆದರೆ ಸರ್ಕಾರ ಸಾವಿರಾರು ರೂಪಾಯಿ ಖರ್ಚು ಮಾಡಿ ಖರೀದಿ ಮಾಡಿದೆ’ ಎಂದು ಟೀಕಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ

Sat Aug 1 , 2020
ಸುಶಾಂತ್ ಸಿಂಗ್ ರಜಪೂತರ ಸಾವಿನ ಪ್ರಕರಣವನ್ನ ಸಿಬಿಐಗೆ ಒಪ್ಪಿಸಬೇಕೆಂಬ ಕೂಗು ಬಲವಾಗಿ ಕೇಳಿಬಂದ ಹಿನ್ನಲೆಯಲ್ಲಿ ಮಹಾರಾಚ್ಟç ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮುಂಬೈ ಪೊಲೀಸರು ತನಿಖೆ ನಡೆಸಲು ಸಮರ್ಥರಿದ್ದಾರೆ ಸಿಬಿಐಗೆ ಒಪ್ಪಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ತನಿಖೆ ವಿಳಂಬವಾಗುತ್ತಿದೆ ಎಂಬ ಕೂಗು ಕೇಳಿಬಂದ ಹಿನ್ನಲೆಯಲ್ಲಿ ಸಿಬಿಐಗೆ ಕೇಸನ್ನ ಒಪ್ಪಿಸಬೇಕೆಂಬ ಕೂಗು ಕೇಳಿಬಂದಿತ್ತು ಇದಕ್ಕೆ ಉದ್ದವ ಠಾಕ್ರೆ ತಮ್ಮ ರಾಜ್ಯದ ಪೊಲೀಸರನ್ನ ವಹಿಸಿಕೊಂಡು ಅವರು ಮುಂಬೈ ಪೊಲೀಸರು ಕೋವಿಡ್ ೧೯ ವಿರುದ್ಧ ಹೋರಾಡುತ್ತಿದ್ದಾರೆ […]

Advertisement

Wordpress Social Share Plugin powered by Ultimatelysocial