ಮತಾಂತರ ಆದ್ರಷ್ಟೇ ಮನೆಗೆ ಸೇರಿಸ್ತೀವಿ ಅಂತ ಹಿಂಸಿಸ್ತಾರೆ. ಹಿಂದು ಯುವಕ ಕಣ್ಣೀರು.|Hosadurga|

(ಚಿತ್ರದುರ್ಗ): ನನ್ನ ಹೆಂಡ್ತಿ-ಮಗುವನ್ನೂ ನೋಡೋಕೆ ಬಿಡ್ತಿಲ್ಲ, ಮತಾಂತರ ಆದರಷ್ಟೇ ಮನೆಗೆ ಸೇರಿಸ್ತಾರಂತೆ… ದಯವಿಟ್ಟು ನನಗೆ ನ್ಯಾಯ ಕೊಡಿಸಿ, ಬಲವಂತವಾಗಿ ನನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡೋಕೆ ಯತ್ನಿಸುತ್ತಿರುವ ನನ್ನ ಮಾವನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹಿಂದು ಯುವಕನೊಬ್ಬ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.

ಇಂತಹ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ಸಂಭವಿಸಿದೆ. ವಿಜಯನಗರದ ಹೊಸಪೇಟೆಯ ಅರವಿಂದನಗರ ಪಕ್ಕದ ಬುಡ್ಜ ಜಂಗಮ ಕಾಲನಿಯ ನಿವಾಸಿ ದೊಡ್ಡಮಾರಪ್ಪ ನೀಡಿದ ದೂರಿನ ಮೇರೆಗೆ ಈತನ ಅಕ್ಕನ ಗಂಡ ವಸಂತ್​ಕುಮಾರ್​ ಸೇರಿ ಐವರ ವಿರುದ್ಧ ಕೇಸ್​ ದಾಖಲಾಗಿದೆ.

ದೊಡ್ಡಮಾರಪ್ಪನ ಅಕ್ಕ ಗಂಡ ವಸಂತಕುಮಾರ್. ಅಕ್ಕನ ಮಗಳು ಸರಳಾ ಎಂಬಾಕೆ ಜತೆ 2020ರ ಜುಲೈ 6ರಂದು ದೊಡ್ಡಮಾರಪ್ಪನ ಮದುವೆ ಆಗಿದೆ. ಅಂದು ದೀಕ್ಷಾ ಸ್ನಾನದ ಹೆಸರಿನಲ್ಲಿ ನೀರಿನಲ್ಲಿ ಮುಳುಗಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿ ವಸಂತಕುಮಾರ್​ ತನ್ನ ಮಗಳು ಸರಳಾರನ್ನು ಮದುವೆ ಮಾಡಿಕೊಟ್ಟಿದ್ದರು. ಬೇರೊಂದು ಧರ್ಮ ಪಾಲಿಸಲಾಗದೆ ನಾನು ಹಿಂದು ಧರ್ಮದಲ್ಲೇ ಮುಂದವರಿದೆ ಎಂದು ದೊಡ್ಡಮಾರಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ 2021ರ ಡಿಸೆಂಬರ್​ 2ರಂದು ಹೆರಿಗೆಗೆಂದು ನನ್ನ ಪತ್ನಿ ಸರಳಾರನ್ನು ವಸಂತಕುಮಾರ ದಂಪತಿ ತವರು ಮನೆಗೆ ಕರೆದುಕೊಂಡು ಹೋಗಿದ್ರು. ನನ್ನ ಪತ್ನಿ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಈ ವಿಷಯವನ್ನು ನನಗೆ ತಿಳಿಸಿರಲಿಲ್ಲ. ಹೇಗೋ ಮಾಹಿತಿ ತಿಳಿಯುತ್ತಿದ್ದಂತೆ ಮಗು ನೋಡಲು ನನ್ನ ಸಹೋದರರ ಜತೆ ಹೊಸದುರ್ಗದ ಮಾವನ ಮನೆಗೆ ಹೋದೆ. ಆದರೆ ಅವರು ನನ್ನನ್ನು ಮನೆಯೊಳಗೆ ಬಿಟ್ಟುಕೊಳ್ಳಲಿಲ್ಲ. ಹಿಂದು ಧರ್ಮ ಬಿಟ್ಟು ಕ್ರೈಸ್ತ ಧರ್ಮ ಪಾಲಿಸಿದರೆ ಮಾತ್ರ ನೀನು ನಿನ್ನ ಹೆಂಡತಿ- ಮಗು ನೋಡಬಹುದು ಎಂದು ನನ್ನ ಮಾವ ತಾಕೀತು ಮಾಡಿದರು. ಈ ವೇಳೆ ನನ್ನ ಹಾಗೂ ನನ್ನ ಸಹೋದರರಾದ ದೊಡ್ಡ ಹುಸೇನಿ, ಸಣ್ಣ ಹುಸೇನಿ, ಕಾರ್ತಿಕ, ಚಂದ್ರು ಮೇಲೆ ಹಲ್ಲೆಯನ್ನೂ ನಡೆಸಿದರು. ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೊಡ್ಡ ಮಾರಪ್ಪ ಹೊಸದುರ್ಗದ ಪೊಲೀಸ್​ ಠಾಣೆಗೆ 2 ದಿನದ ಹಿಂದೆ ದೂರು ನೀಡಿದ್ದಾರೆ. ದೊಡ್ಡಮಾರಪ್ಪ ನೀಡಿದ ದೂರು ಆಧರಿಸಿ ಹೊಸದುರ್ಗದ ಜಂಗಮನಗರದ ವಸಂತಕುಮಾರ್​, ರಾಮಚಂದ್ರಪ್ಪ, ಸುಧಾಕರ್​, ಮಂಜುನಾಥ್​, ಸಂಕಪ್ಪ ವಿರುದ್ಧ ದೂರು ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

football:ರೊನಾಲ್ಡೊ, ಮೆಸ್ಸಿ ಮತ್ತು ನೇಮಾರ್ ಅವರೊಂದಿಗೆ ಆಡಿದ 5 ಶ್ರೇಷ್ಠ ಆಟಗಾರರು;

Mon Jan 24 , 2022
  ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಯಾವಾಗಲೂ ಶ್ರೇಷ್ಠ ಆಟಗಾರರ ಚರ್ಚೆಯ ಭಾಗವಾಗಿದ್ದರೂ, ನೇಮರ್ ಜೂನಿಯರ್ ಇದೇ ಮಟ್ಟವನ್ನು ತಲುಪಿದ ಸಂದರ್ಭಗಳಿವೆ. ಮೂವರೂ ಸ್ವಲ್ಪ ಸಮಯದವರೆಗೆ ಬ್ಯಾಲನ್ ಡಿ’ಓರ್ ಪ್ರಶಸ್ತಿಗಳಲ್ಲಿ ನಿಯಮಿತ ವೈಶಿಷ್ಟ್ಯಗಳನ್ನು ಹೊಂದಿದ್ದಾರೆ, ಇದು ಅವರ ಪ್ರಾವೀಣ್ಯತೆಯನ್ನು ಮಾತ್ರ ಸಾಬೀತುಪಡಿಸುತ್ತದೆ. ಮೂವರ ತಂಡದ ಸಹ ಆಟಗಾರರು ಎಂಬ ಹೆಗ್ಗಳಿಕೆಗೆ ಅನೇಕರು ಸಾಧ್ಯವಿಲ್ಲ. ಅಂತಹ ಫುಟ್ಬಾಲ್ ಶ್ರೇಷ್ಠರ ಜೊತೆಗೆ ಆಡುವುದು ಯಾವಾಗಲೂ ಗೌರವವಾಗಿದೆ ಮತ್ತು ಕೆಲವರು ಮಾತ್ರ ಹಾಗೆ […]

Advertisement

Wordpress Social Share Plugin powered by Ultimatelysocial