ಮಹಿಳಾ ವಿಶ್ವವಿದ್ಯಾನಿಲಯಕ್ಕೆ ನೂತನ ಕುಲಪತಿ ನೇಮಕ

ಹಾಲಿ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ಅವರು ನಾಲ್ಕು ವರ್ಷಗಳ ಸೇವೆಯ ನಂತರ ಜೂನ್ ೧೯ರಂದು ನಿವೃತ್ತಿಯಾಗುತ್ತಿದ್ದು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ಪ್ರೊ.ಓಂಕಾರ ಕಾಕಡೆ ಅವರನ್ನು ನೇಮಕ ಮಾಡಿ ರಾಜ್ಯಪಾಲ ವಜುಬಾಯಿ ವಾಲಾ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ ಅನ್ವಯ ಪ್ರದತ್ತವಾದ ಅಧಿಕಾರ ಬಳಸಿ ಈ ನೇಮಕ ಮಾಡಲಾಗಿದೆ. ಇವರ ಅಧಿಕಾರ ಅವಧಿ ೨೦-೬-೨೦೨೦ರಿಂದ ೧೩-೧೨-೨೦೨೦ರವರೆಗೆ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇನ್ನೂ ರಾಜ್ಯಪಾಲರ ಆದೇಶದಂತೆ ಪ್ರೊ.ಸಬಿಹಾ ಭೂಮಿಗೌಡ ಅವರು ನೂತನ ಕುಲಪತಿ ಪ್ರೊ.ಓಂಕಾರ ಕಾಕಡೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಾಲ್ಕು ವರ್ಷಗಳ ಸೇವೆಯಿಂದ ನಿವೃತ್ತರಾದ ಪ್ರೊ.ಸಬಿಹಾ ಅವರನ್ನು ವಿಶ್ವವಿದ್ಯಾನಿಲಯದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಪ್ರೊ.ಸಬಿಹಾ ಅವರು ತಮ್ಮ ಮಾತೃ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಪೀಠಕ್ಕೆ ಮರಳಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಪೊಲೀಸರ ಮೇಲೆ ಕೊರೊನಾ ಅಟ್ಟಹಾಸ

Tue Jun 23 , 2020
ಪೊಲೀಸರ ಮೇಲೆ  ಕೊರೊನಾ ತನ್ನ ಅಟ್ಟಹಾಸವನ್ನ ಮುಂದುವರೆಸಿದೆ. ಕೊಲೆ ಯತ್ನ ಪ್ರಕರಣದಲ್ಲಿ ಬಂಧಿಯಾಗಿದ್ದ ಆರೋಪಿಯಿಂದ ಡಿಜೆ ಹಳ್ಳಿ ಪೊಲೀಸರಿಗೆ  ಕೊರೊನಾ ಕಂಟಕ ಶುರುವಾಗಿದೆ. ಡಿಜೆ ಹಳ್ಳಿ ಪೊಲೀಸರು ಕೊಲೆ ಯತ್ನಕ್ಕೆ ಯತ್ನಿಸಿದ್ದ ಆರೊಪಿಯೋರ್ವನನ್ನ ಬಂಧಿಸಿದ್ದಾಗ ಆರೋಪಿಗೆ ಪಾಸಿಟಿವ್ ಇರೋದು ಧೃಡ ವಾಗಿದೆ.  ಈ ಹಿನ್ನೆಲೆಯಲ್ಲಿ ಆರೋಪಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಒಟ್ಟು 20 ಜನ ಪೊಲೀಸರನ್ನ ಕ್ವಾರಂಟೇನ್ ಮಾಡಲಾಗಿದೆ. ಅಲ್ಲದೆ ಡಿಜೆ ಹಳ್ಳಿ ಪೊಲೀಸ್ ಠಾಣೆಯನ್ನ ತಾತ್ಕಾಲಿಕವಾಗಿ ಸೀಲ್ ಡೌನ್ ಮಾಡಲಾಗಿದೆ. […]

Advertisement

Wordpress Social Share Plugin powered by Ultimatelysocial