ಕೊರಟಗೆರೆಯ ಪ್ರಸಿದ್ಧ ರಾಕಿಂಗ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಅಪ್ಪುಗೆ ನುಡಿ ನಮನ

ಕೊರಟಗೆರೆ: ರಾಂಕಿಗ್ ಡ್ಯಾನ್ಸ್ ಅಕಾಡೆಮಿ,ಹಿಂದೂಸ್ಥಾನಿ ಶಾಸ್ತ್ರೀಯ ಮತ್ತು ಕರ್ನಾಟಕ ನೃತ್ಯ ಶಾಲೆ ಹಾಗೂ ಭರತ ನಾಟ್ಯ ಶಾಲೆ ಇವರ ವತಿಯಿಂದ ಪಟ್ಟಣದ ಪಟ್ಟಣ ಪಂಚಾಯತಿ ಮುಂಭಾಗದಲ್ಲಿ ಅಪ್ಪು ನಮನ ಕಾರ್ಯಕ್ರಮವನ್ನು ಪುನೀತ್ ರಾಜ್ ಕುಮಾರ್ ನೆನಪಿನಾರ್ಥವಾಗಿ ಗೌರವ ಸಮರ್ಪಣೆ ಜೊತೆಗೆ ನೇತ್ರದಾನ ನೋಂದಣಿ ಮತ್ತು ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು .ಅಪ್ಪು ನಮನವನ್ನು ನಮ್ಮ ರಾಜ್ಯದಲ್ಲಿ ವಿಶೇಷವಾಗಿ ನಾಡಿನ ಜನತೆ, ಅಭಿಮಾನಿಗಳು ಸಲ್ಲಿಸುತ್ತಿದ್ದಾರೆ, ಅವರು ಸಮಾಜ ಮುಖಿ ಕೆಲಸಗಳನ್ನು ಯಾರಿಗೂ ತಿಳಿಯದೆ ಅವರ ಅಪಾರ ಕೊಡುಗೆ ಕನ್ನಡಿಗರ ಕಣ್ಮರೆಯಲ್ಲಿ ಮಾಡಿದರು. ಅವರ ನಿಧನದ ನಂತರ ಎಲ್ಲವೂ ಕಣ್ಣೆದುರಿಗೆ ಬಂದಾಗ ಅವರು ಇಲ್ಲ ಎಂದಾಗ ಕನ್ನಡಿಗರ ಮನಸ್ಸು ಕನ್ನಡಿಯಂತೆ ಚೂರು ಚೂರಾಗಿತ್ತು ಆದರೆ ಕನ್ನಡ ಚಿತ್ರರಂಗದ ನಟ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ನಾವು ನಾಡಿನ ಜನತೆ ಅನಾಥರಾಗಿದ್ದೇವೆ ಆದರೆ ಅವರು ಮಾಡಿರುವ ಅನೇಕ ಜೀವಿಗಳು ನಮ್ಮೆಲ್ಲರಿಗೂ ಪ್ರೇರಣೆ ಎಂದು ತಿಳಿಸಿ ನುಡಿನಮನ ಸಲ್ಲಿಸಿದರು .ಅಪ್ಪು ನಮನ ಕಾರ್ಯಕ್ರಮ ನನ್ನ 70 ವರ್ಷದ ಜೀವನದಲ್ಲಿ ಇತರಹ ಕಾರ್ಯಕ್ರಮವನ್ನು ನಾನು ಎಂದು ಕಂಡಿಲ್ಲ, ಕನ್ನಡ ರಾಜ್ಯೋತ್ಸವ ಆಚರಣೆ ಕೂಡ ಇಷ್ಟು ಅದ್ಧೂರಿಯಾಗಿ ನಮ್ಮ ಕರ್ನಾಟಕದಲ್ಲಿ ಎಂದಿಗೂ ನಡೆದಿಲ್ಲ , ತಂದೆಯ ಆದಿಯಲ್ಲೇ ಜೀವನ ಸಾಗಿಸಿದ ಒಬ್ಬ ಅತ್ಯುತ್ತಮ ನಟ, ಅವರಿಂದ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಅನಾಥಾಶ್ರಮ ಸೇರಿದಂತೆ ಅನೇಕ ಸೇವೆಗಳು ನಡೆಯುತ್ತಿತ್ತು ಅವರನ್ನು ಕಳೆದುಕೊಂಡ ನಮ್ಮ ನಾಡೇ ದುಃಖದಲ್ಲಿದೆ ಎಂದು ತಿಳಿಸಿದರು .

Please follow and like us:

Leave a Reply

Your email address will not be published. Required fields are marked *

Next Post

 ಒಂದೇ ಕುಟುಂಬ ಮೂರು ಜನ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ

Fri Dec 17 , 2021
ಒಂದೇ ಕುಟುಂಬದ 3 ಜನರು ನೀರಿಗೆ ಬಿದ್ದು ಆತ್ಮಹತ್ಯೆಗೆ ಶರಣದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಸಾಗರನಹಳ್ಳಿ ಗೇಟ್ ಬಳಿ ನಡೆದಿದೆ…ನಿಟ್ಟೂರು ಬಳಿಯ ಸೋಮಲಾಪುರದ ಹೇಮಾವತಿ ನಾಲೆಯಲ್ಲಿ 2 ಶವಗಳು ಪತ್ತೆಯಾಗಿದ್ದು ಹೇಮಾವತಿ ನಾಲಾ ಕಛೇರಿಯ ಇಂಜಿನಿಯರ್ ರಮೇಶ್ (55) ಮತ್ತು ಪತ್ನಿ ಮಮತಾ (46 ) ವರ್ಷ ಶಿಕ್ಷಕಿ ಇವರ ಮಗಳು ಶುಭ (25)ವರ್ಷ ವಿದ್ಯಾರ್ಥಿನಿ ಸಾವನ್ನಪ್ಪಿರುವ ದುರ್ದೈವಿಗಳು ಮಮತಾ ಮತ್ತು ಶುಭ ಶವಗಳು […]

Advertisement

Wordpress Social Share Plugin powered by Ultimatelysocial