ಮಾಂಸ ಮಾರಾಟ ಮಳಿಗೆಗೆ ದಿಢೀರ್ ಭೇಟಿ

ಹಾಸನ ಜಿಲ್ಲೆಯ ಅರಸೀಕೆರೆಯ ಮಟನ್ ಮಾರ್ಕಟ್‌ನಲ್ಲಿ ಅನಿಮಲ್ ವೆಲ್‌ಫೆರ್ ಆಫ್ ಇಂಡಿಯಾ ಕಾರ್ಯಕರ್ತೆ ನಂದಿನಿ ಮ್ಯಾಥ್ಯನ್ ಸಾರ್ವಜನಿಕರ ದೂರಿನ ಮೆರೆಗೆ ಮಾಂಸ ಮಾರಾಟ ಮಳಿಗೆಯಲ್ಲಿ ತಪಾಸಣೆ ಮಾಡುವಾಗ ಗೋ ಮಾಂಸ ದೊರೆತ್ತಿದ್ದು, ಇದರ ಸಂಭAದ ೩ ಹೆಮ್ಮೆ , ೩ಹಸು, ೬ ಕರು ಮತ್ತು ಒಂದು ಜೆರ್ಸಿ ಹಸುವನ್ನು ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ದೂರಿನ ಆದರದ ಮೇಲೆ ಸ್ಥಳೀಯ ಪೊಲೀಸ್ ಸಹಕಾರದೊಂದಿಗೆ ಇಂದು ನಾವು ಮಾಂಸದ ಅಂಗಡಿಗಳ ದಿಡೀರ್ ತಪಾಸಣೆ ಮಾಡಿ ಅಂಗಡಿ ಮಾಲೀಕರಾದ ಶವಾಜ್, ಅಫ್ರೋಜ್ ರೇಹಮಾನ್ ಹಾಗೂ ಇತರರನ್ನು ಬಂದಿಸಿ ಇವರ ವಿರುದ್ಧ ಮೊಕ್ಕದಮೆ ದಾಖಲಿಸಿದ್ದೇವೆೆ. ರಾಜ್ಯದಲ್ಲಿ ಕುರಿ ಆಡು ಮೆಕ್ಕೆ ಮಾಂಸದ ಜೊತೆÉ ಗೋ ಮಾಂಸವನ್ನು ಸೇರಿಸಿ ಮಾರಾಟ ಮಾಡುವ ಜಾಲ ಇದೆ. ಸಾರ್ವಜನಿಕರು ಅನಾಮದೇಯ ಖಸಯಿಕಾನೆಗಳ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಾಣಿ ಧಯಾ ಸಂಘದ ರಮೇಶ್, ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರ್ ಉಪಸ್ಥಿತರಿದರು.

Please follow and like us:

Leave a Reply

Your email address will not be published. Required fields are marked *

Next Post

ವಸತಿ ಶಾಲೆಗಳಲ್ಲಿ ಸ್ಥಳೀಯರಿಗೆ ಮೀಸಲಾತಿ

Sat Jun 13 , 2020
ರಾಜ್ಯದಲ್ಲಿ ಇನ್ನು ಮುಂದೆ ವಸತಿ ಶಾಲೆಗಳ ಪ್ರವೇಶಾತಿಯಲ್ಲಿ ಶೇ.25ರಷ್ಟು ಸೀಟುಗಳನ್ನು ಸ್ಥಳೀಯ ಮಕ್ಕಳಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಗೋವಿಂದ ಎಂ. ಕಾರಜೋಳ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 135 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಈ ವಸತಿ ಶಾಲೆಗಳು ಇರುವ ಗ್ರಾಮಗಳ ಮಕ್ಕಳಿಗೆ ಇದುವರೆಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಕೇವಲ ವಸತಿ ಶಾಲೆಯನ್ನು ಹೊರಗಿನಿಂದ ನೋಡಿ ಸಮಾಧಾನಪಡಬೇಕಾಗಿತ್ತು. ಆದರೆ ಇದುವರೆಗೂ […]

Advertisement

Wordpress Social Share Plugin powered by Ultimatelysocial