ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ನಿವಾಸ ಆಂಟಿಲಿಯಾ ಸ್ವರ್ಗಕ್ಕಿಂತ ಕಡಿಮೆಯೇನಿಲ್ಲ.

ದ್ಯಮಿ ಮುಖೇಶ್‌ ಅಂಬಾನಿ ವಿಶ್ವದ ಅತ್ಯಂತ ಸಿರಿವಂತರಲ್ಲೊಬ್ಬರು. ಅಂದ್ಮೇಲೆ ಸಹಜವಾಗಿಯೇ ಅಂಬಾನಿ ಅವರ ಮನೆ ಕೂಡ ಐಷಾರಾಮಿಯಾಗಿದೆ. ಆದರೆ ಈ ಮನೆಯ ವೈಭೋಗ ನಿಜಕ್ಕೂ ಜನಸಾಮಾನ್ಯರನ್ನು ದಂಗಾಗಿಸುವಂತಿದೆ. ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ನಿವಾಸ ಆಂಟಿಲಿಯಾ ಸ್ವರ್ಗಕ್ಕಿಂತ ಕಡಿಮೆಯೇನಿಲ್ಲ.

ಭಾರತದ ಅತ್ಯಂತ ಪ್ರಸಿದ್ಧ ಮತ್ತು ದುಬಾರಿ ಮನೆ ಇದು. ಅಷ್ಟೇ ಅಲ್ಲ ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆ ಎನಿಸಿಕೊಂಡಿದೆ. ಬಕಿಂಗ್‌ಹ್ಯಾಮ್‌ ಪ್ಯಾಲೇಸ್‌ ಬಿಟ್ಟರೆ ಅತಿ ಹೆಚ್ಚು ಬೆಲೆಬಾಳುವ ಮನೆ ಆಂಟಿಲಿಯಾ.

ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿ ಮುಖೇಶ್‌ ಅಂಬಾನಿ ಅವರ ನಿವಾಸವಿದೆ. ಇದರ ವಿಸ್ತಾರ ಸುಮಾರು 4,532 ಚದರ ಮೀಟರ್‌ಗಳಷ್ಟಿದೆ. ಅಟ್ಲಾಂಟಿಕ್ ಸಾಗರದಲ್ಲಿರುವ ಫ್ಯಾಂಟಮ್ ದ್ವೀಪದ ಹೆಸರಲ್ಲಿ ಅಂಬಾನಿ ನಿವಾಸಕ್ಕೆ ಆಂಟಿಲಿಯಾ ಎಂದು ನಾಮಕರಣ ಮಾಡಲಾಗಿದೆ. ಆಂಟಿಲಿಯಾ ದಕ್ಷಿಣ ಮುಂಬೈನ ಹೃದಯ ಭಾಗದಲ್ಲಿದೆ. 27 ಮಹಡಿಗಳ ಬೃಹತ್‌ ಕಟ್ಟಡ ಇದು. ಇಲ್ಲಿ ಸುಮಾರು 600 ಸಿಬ್ಬಂದಿ ಕೆಲಸ ಮಾಡ್ತಾರೆ. ಮನೆಯಲ್ಲಿ ಮೂರು ಹೆಲಿಪ್ಯಾಡ್‌, ಮುಂಬೈ ಮತ್ತು ಅರೇಬಿಯನ್ ಸಮುದ್ರದ ಸ್ಕೈಲೈನ್‌ಗಳನ್ನು ಹೊಂದಿದೆ.

ಆಂಟಿಲಿಯಾದ ನಿರ್ಮಾಣಕ್ಕೆ ಸುಮಾರು ಎರಡು ವರ್ಷಗಳೇ ಬೇಕಾಯ್ತು. 2008ರಲ್ಲಿ ಕಾಮಗಾರಿ ಪ್ರಾರಂಭವಾಗಿ 2010ರಲ್ಲಿ ಪೂರ್ಣಗೊಂಡಿತು. ಈ ಮನೆಯಲ್ಲಿ ಪ್ರತ್ಯೇಕ ಮನರಂಜನಾ ಸ್ಥಳ, ಭವ್ಯವಾದ ಪ್ರವೇಶ ದ್ವಾರ, ವಿಶಾಲವಾದ ಕೋಣೆಗಳು, 6 ಅಂತಸ್ತಿನ ಕಾರ್ ಪಾರ್ಕಿಂಗ್ ಹೀಗೆ ತರಹೇವಾರಿ ಸೌಲಭ್ಯಗಳಿವೆ. ಯೋಗ ಕೇಂದ್ರ, ಡಾನ್ಸ್‌ ಸ್ಟುಡಿಯೋ, ಹೆಲ್ತ್‌ ಸ್ಪಾ ಮತ್ತು ಈಜುಕೊಳವನ್ನು ಸಹ ಹೊಂದಿದೆ.

ಈ ಮೊದಲು ಮುಂಬೈನ ಸೀ ವಿಂಡ್‌ನಲ್ಲಿರುವ 14 ಅಂತಸ್ತಿನ ಮನೆಯಲ್ಲಿ ಅಂಬಾನಿ ಕುಟುಂಬ ವಾಸವಾಗಿತ್ತು. ಬಳಿಕ ಆಂಟಿಲಿಯಾ ನಿವಾಸಕ್ಕೆ ಶಿಫ್ಟ್‌ ಆಗಿದೆ. ಆಸ್ಟ್ರೇಲಿಯನ್ ಮೂಲದ ಕಂಪನಿ ಲೈಟನ್ ಹೋಲ್ಡಿಂಗ್ಸ್‌ ಮನೆಯನ್ನು ವಿನ್ಯಾಸಗೊಳಿಸಿದೆ. ಆಂಟಿಲಿಯಾ ನಿರ್ಮಾಣಕ್ಕೆ ಸುಮಾರು 6,000-12,000 ಕೋಟಿ ರೂಪಾಯಿ ವೆಚ್ಚವಾಗಿದೆ. ಬೃಹತ್‌ ಕಟ್ಟಡವಾಗಿದ್ದರಿಂದ 9 ಲಿಫ್ಟ್‌ಗಳನ್ನೂ ಅಳವಡಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಧುಮೇಹಿ ಮಹಿಳೆಯ ಪಿತ್ತಕೋಶದಲ್ಲಿ ಬರೋಬ್ಬರಿ 1,200ಕ್ಕೂ ಹೆಚ್ಚು ಕಲ್ಲು ಪತ್ತೆ!

Tue Feb 21 , 2023
ಚೆನ್ನೈ: ಚೆನ್ನೈನ ಆಸ್ಪತ್ರೆಯ ವೈದ್ಯರು ಮಧುಮೇಹಿ ಮಹಿಳೆಯ ಪಿತ್ತಕೋಶದಿಂದ 1,200 ಕ್ಕೂ ಹೆಚ್ಚು ಕಲ್ಲುಗಳನ್ನು ಹೊರ ತೆಗೆದು ಆಕೆಯ ಜೀವ ಉಳಿಸಿದ್ದಾರೆ. ತೀವ್ರ ಹೊಟ್ಟೆ ನೋವು, ಹಸಿವಾಗದಿರುವುದು, ಜಠರದುರಿತ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯಿಂದ ಬಳಲುತ್ತಿದ್ದ 55 ವರ್ಷದ ಮಹಿಳೆ ಚೆನ್ನೈನಲ್ಲಿರುವ ಮೋಹನ್ ಡಯಾಬಿಟಿಸ್ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ಅಲ್ಲಿ ಆಕೆಯ ದೇಹವನ್ನು ಸ್ಕ್ಯಾನ್‌ ಮಾಡಿದಾಗ, ಆಕೆಯ ಪಿತ್ತಕೋಶದಲ್ಲಿ ಐವತ್ತಕ್ಕೂ ಹೆಚ್ಚು ಕಲ್ಲುಗಳಿರುವುದು ತಿಳಿದುಬಂದಿದೆ. ನಂತರ, ವೈದ್ಯರ ತಂಡವು ತಕ್ಷಣವೇ […]

Advertisement

Wordpress Social Share Plugin powered by Ultimatelysocial