ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ

ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಸುಗೂ ಹೆಂಧಾಮ  ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಚಕಮಕಿ ನಡೆದಿದೆ ಎಂದು ವರಿದಯಾಗಿದೆ. ಗುಂಡಿನ ಕಾಳಗದಲ್ಲಿ ಭಾರತೀಯ ಸೇನಾ ಪಡೆ ಇಬ್ಬರು ಭಯೋತ್ಪಾದಕರನ್ನು  ಎನ್‌ಕೌಂಟರ್‌ ಮೂಲಕ ಹತ್ಯೆಗೈದಿದ್ದು, ಇನ್ನು ಕಾರ್ಯಚರಣೆ ಪ್ರಗತಿಯಲ್ಲಿದೆ. ಪೊಲೀಸ್, ಭಾರತೀಯ ಸೇನೆ ಮತ್ತು ಸಿಆರ್‌ಪಿಎಫ್  ಜಂಟಿ ತಂಡ ಇಂದು ಬೆಳಿಗ್ಗೆ ಸುಗೂ ಹೆಂಧಮಾದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಪಡೆದು ಕಾರ್ಯಚರಣೆಗಿಳಿದಿದ್ದವು. ಈ ವೇಳೆ ಉಗ್ರರು ಏಕಾಏಕಿ  ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಇಂದು ಮುಂಜಾನೆ ಖಚಿತ ಮಾಹಿತಿ ಮೇರೆಗೆ ಕರ‍್ಯಾಚರಣೆ ನಡೆಸಲಾಯಿತು.   ಸ್ಥಳದಲ್ಲಿ ಇನ್ನು ಹಲವು ಉಗ್ರರು ಅಡಗಿರುವ ಸಾಧ್ಯತೆ ಇದ್ದು ಶೋಧ ಕರ‍್ಯ ನಡೆಯುತ್ತಿದೆ ಎಂದರು.ಈ ವಾರದಲ್ಲಿ  ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಮೂರನೇ ಎನ್ ಕೌಂಟರ್ ಇದಾಗಿದೆ.  ಕಳೆದ ಭಾನುವಾರ ಮತ್ತು ಸೋಮವಾರ ನಡೆದ ಎರಡು ಎನ್‌ಕೌಂಟರ್‌ ಗಳಲ್ಲಿ ೯ ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ತಿಳಿಸಿದರು.

 

 

 

 

Please follow and like us:

Leave a Reply

Your email address will not be published. Required fields are marked *

Next Post

ಶಾಲಾ ಶುಲ್ಕ, ಆನ್‌ಲೈನ್ ತರಗತಿಗಳ ವಿಚಾರವಾಗಿ ಸಭೆ

Wed Jun 10 , 2020
ಶಾಲಾ ಶುಲ್ಕ, ಆನ್‌ಲೈನ್ ತರಗತಿಗಳ ಕುರಿತು ಸಭೆ…ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ…ಶಾಲಾ ಶುಲ್ಕ ಮತ್ತು ಆನ್ ಲೈನ್ ಕ್ಲಾಸ್ ವಿಚಾರವಾಗಿ, ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.ಕೊರೊನಾ ಉಂಟುಮಾಡಿರುವ ರ‍್ಥಿಕ ಸಂಕಷ್ಟದ ನಡುವೆ, ಶಾಲಾ ಫೀಸ್ ಕುರಿತು ಸಾಕಷ್ಟು ರ‍್ಚೆಗಳು ಸೃಷ್ಟಿಯಾಗುತ್ತಿದ್ದು, ಪೋಷಕರು ತೀರ ಗೊಂದಲಕ್ಕೀಡಾಗಿದ್ದಾರೆ. ಈ ಸಂಬಂಧ ಅಧಿಕಾರಿಗಳ ಜತೆ ಶಿಕ್ಷಣ ಸಚಿವರು ರ‍್ಚೆ ನಡೆಸಲಿದ್ದು, ಪೋಷಕರು,ಖಾಸಗಿ ಶಾಲೆಗಳ ಒಕ್ಕೂಟ,ಶಿಕ್ಷಣ ಇಲಾಖೆಯ ಆಯುಕ್ತರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. […]

Advertisement

Wordpress Social Share Plugin powered by Ultimatelysocial