ಮೊದಲ ಭಾರಿಗೆ ನಿತ್ಯ ವೆಬ್ ಸರಣಿಯಲ್ಲಿ ನಟನೆ

ನಿತ್ಯಾ ಮೆನನ್ ಇದೇ ಮೊದಲ ಬಾರಿಗೆ ‘ಬ್ರಿಥ್ ೨’ ಎಂಬ ವೆಬ್ ಸರಣಿಯಲ್ಲಿ ನಟಿಸಿದ್ದು, ಆ ಸರಣಿ ಈಗಾಗಲೇ ಅಮೇಜಾನ್ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ಮಧ್ಯೆ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಬಯೋಪಿಕ್ನಲ್ಲೂ ನಿತ್ಯಾ ಅಭಿನಯಿಸುತ್ತಿದ್ದು, ಈ ಚಿತ್ರಕ್ಕೆ ‘ದಿ ಐರನ್ ಲೇಡಿ’ ಎಂಬ ಹೆಸರು ಇಡಲಾಗಿದೆ.ಈಗಾಗಲೇ ಜಯಲಲಿತಾ ಕುರಿತಾಗಿ ‘ತಲೈವಿ’ ಎಂಬ ಚಿತ್ರ ನರ‍್ವಣವಾಗಿದ್ದು, ಅದರಲ್ಲಿ ಜಯಲಲಿತಾ ಪಾತ್ರವನ್ನು ಕಂಗನಾ ರಣಾವತ್ ನರ‍್ವಹಿಸಿದ್ದಾರೆ. ಇನ್ನು ‘ಕ್ವೀನ್’ ಎಂಬ ವೆಬ್ ಸೀರೀಸ್ನಲ್ಲಿ ರಮ್ಯಾ ಕೃಷ್ಣ ನಟಿಸಿದ್ದಾರೆ. ಹೀಗೆ ಈಗಾಗಲೇ ಇಬ್ಬಿಬ್ಬರು ಜಯಲಲಿತಾ ಅವರ ಪಾತ್ರಗಳಲ್ಲಿ ಕಾಣಿಸಿಕೊಂಡಿರುವಾಗ, ಹೋಲಿಕೆಗಳು ಸಹಜ. ಆದರೆ, ನಿತ್ಯಾ ಹೋಲಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲವಂತೆ. ‘ನಾವು ಆ ಪಾತ್ರಕ್ಕೆ ಸರಿ ಹೊಂದುತ್ತೇವೋ, ಇಲ್ಲವೋ ಎಂದು ಹೋಲಿಕೆ ಮಾಡುವುದು ಮುಖ್ಯವಲ್ಲ. ಆ ಪಾತ್ರವನ್ನು ಮೂವರು ನಟಿಯರು ಮಾಡಿದ್ದು, ಯಾರು ಎಷ್ಟು ಚೆನ್ನಾಗಿ ಪಾತ್ರ ಮಾಡಿದ್ದಾರೆ ಎನ್ನುವುದು ಹೆಚ್ಚು ಮುಖ್ಯ’ ಎನ್ನುತ್ತಾರೆ ನಿತ್ಯಾ ಮೆನನ್.ಇನ್ನು ಜಯಲಲಿತಾ ಕುರಿತಾ ಇಷ್ಟೊಂದು ಚಿತ್ರಗಳು ನರ‍್ವಣವಾಗುತ್ತಿರುವ ಬಗ್ಗೆ ನಿತ್ಯಾಗೆ ಭಯವಿಲ್ಲವಂತೆ. ‘ಎಲ್ಲರಿಗೂ ತಮಗೆ ಬೇಕಾದ ಸಿನಿಮಾ ಮಾಡುವ ಸ್ವಾತಂತ್ರ‍್ಯವಿದೆ. ಎಲ್ಲರೂ ತಮ್ಮ ಚಿತ್ರವನ್ನು ಬಹಳ ಪ್ಯಾಶನ್ನಿಂದ ಮಾಡುತ್ತಾರೆ. ನಾವು ಸಹ ಅಷ್ಟೇ ಪ್ಯಾಶನ್ನಿಂದ ಮಾಡಿದ್ದೇವೆ. ನರ‍್ದೇಶಕಿ ಪ್ರಿಯರ‍್ಶಿನಿ ಅವರು ಈ ಚಿತ್ರ ಮಾಡುವ ಬಗ್ಗೆ ಹೇಳಿದಾಗ, ನಾನು ಮೊದಲು ಒಪ್ಪಿರಲಿಲ್ಲ. ಆದರೆ, ಅವರ ಆಸಕ್ತಿ ನೋಡಿ, ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡೆ’ ಎನ್ನುತ್ತಾರೆ ನಿತ್ಯಾ ಮೆನನ್.

Please follow and like us:

Leave a Reply

Your email address will not be published. Required fields are marked *

Next Post

ವಿದೇಶದಲ್ಲಿ ಭಾರೀ ಸದ್ದು ಮಾಡ್ತಿದೆ ಕನ್ನಡದ ಸಿನಿಮಾ

Mon Jul 13 , 2020
  ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿ, ಪುಟ್ಟಣ್ಣನವರು ನಿರ್ಮಿಸಿರುವ ಅಮೃತಮತಿ ಚಿತ್ರವು ಇತ್ತಿಚೆಗಷ್ಟೇ ಆಸ್ಟ್ರೀಯಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ಗೊತ್ತೇ ಇದೆ. ಇದೀಗ ಇನ್ನೊಂದು ಸಂತೋಷದ ಸುದ್ದಿಯೊಂದಿಗೆ ಚಿತ್ರತಂಡ ಮುಂದೆಬಂದಿದೆ.ಅಮೃತಮತಿ ಚಿತ್ರವೂ ಅಮೆರಿಕದ ಅಟ್ಲಾಂಟದಲ್ಲಿ ನಡೆಯುವ ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಅಧಿಕೃತ ಆಯ್ಕೆಯಾಗಿದ್ದು, ಪ್ರದರ್ಶನಗೊಳ್ಳಲಿದೆ. ಕರೊನಾ ಕಾರಣದಿಂದ ಈ ಚಿತ್ರೋತ್ಸವ ಕೂಡ ಆನ್​ಲೈನ್​ ಮೂಲಕ ಜು. 29ರಿಂದ ಆಗಸ್ಟ್ 12ರ ವರೆಗೆ ನಡೆಯಲಿದೆ. ಈ ಸಿನಿಮಾ ಎಲ್ಲ ವಿಭಾಗಗಳಲ್ಲಿ ಪ್ರಶಸ್ತಿ ಸ್ಪರ್ಧೆಗೆ […]

Advertisement

Wordpress Social Share Plugin powered by Ultimatelysocial