ಮೊಬೈಲ್ ಫೋನ್ ನಿಂದ ಶುರುವಾದ ಪ್ರೀತಿ: ಲವರ್‌ ಕುರುಡನೆಂದು ಗೋತ್ತದ್ದ ಹುಡುಗಿ ಮಾಡಿದ್ದು ಏನು

ಬಲಗಿರ್​: ನೀವು ಹಲವಾರು ಲವ್​ ಸ್ಟೋರಿಗಳನ್ನು ನೋಡಿರುತ್ತೀರಿ. ಅವುಗಳಲ್ಲಿ ಕೆಲವೊಂದು ಯಶಸ್ಸಿನ ಹಾದಿ ಹಿಡಿದರೆ, ಇನ್ನು ಕೆಲವು ಲವ್​ ಸ್ಟೋರಿಗಳು ವಿವಿಧ ಕಾರಣಗಳಿಂದ ವಿಫಲ ಹಾದಿ ಹಿಡಿಯುತ್ತವೆ. ಆದರೆ, ಇದೀಗ ನಾವು ಹೇಳಲು ಹೊರಟಿರುವ ಈ ಲವ್​ ಸ್ಟೋರಿ ತುಂಬಾ ವಿಭಿನ್ನವಾಗಿದ್ದು, ಪ್ರೀತಿ ಕುರುಡು ಎಂಬ ಮಾತಿಗೆ ನಿಜವಾದ ಅರ್ಥವನ್ನು ನೀಡುತ್ತದೆ.

ಒಡಿಶಾದ ಬಲಗಿರ್​ ಜಿಲ್ಲೆಯ ಮಂದಮಹುಲ್​ ಗ್ರಾಮದ ದಿಲೀಪ್​ ತಂಡಿ ಮತ್ತು ಅದೇ ಜಿಲ್ಲೆಯ ಬುರುಡಾ ಗ್ರಾಮದ ಚಾಂದಿನಿ ಬಾಘ್​ ನಡುವೆ ಮಿಸ್​ ಕಾಲ್​ ಮೂಲಕ ಲವ್​ ಶುರುವಾಗಿತ್ತು. ಆದರೆ, ದಿಲೀಪ್​ ಅಂಧನಾಗಿದ್ದರೂ ಕೂಡ ಚಾಂದಿನಿ ಆತನನ್ನು ಮದುವೆ ಆಗಲು ನಿರ್ಧರಿಸುವ ಮೂಲಕ ನಿಜವಾದ ಪ್ರೀತಿ ಏನೆಂಬುದನ್ನು ನಿರೂಪಿಸಿದ್ದಾರೆ.

ಇಂದಿನ ಆಧುನಿಕ ಯುಗದಲ್ಲಿ ದೈಹಿಕ ಸಾಮರ್ಥ್ಯ, ಹಣ, ಸಂಪತ್ತು, ಘಟನೆ ಮತ್ತು ಸ್ಥಾನವನ್ನು ನೋಡಿ ಪ್ರೀತಿ ಮಾಡುವವರ ನಡುವೆ ಚಾಂದಿನಿ ತಾನು ಪ್ರೀತಿ ಮಾಡುತ್ತಿರುವ ಯುವಕ, ಅಂಧ ಅಂತಾ ಗೊತ್ತಿದ್ದರೂ ಆತನ ಜತೆಗೆ ಮದುವೆಗೆ ಒಪ್ಪಿಕೊಂಡಿರುವುದು ನಿಜವಾದ ಪ್ರೀತಿಗೆ ತಾಜಾ ಉದಾಹರಣೆಯಾಗಿದೆ.ಚಾಂದಿನಿ ಮತ್ತು ದಿಲೀಪ್ ಅವರ ಪ್ರೀತಿಯನ್ನು ಕಂಡು ಮೂಕವಿಸ್ಮಿತರಾಗಿರುವ​ ಎರಡು ಕುಟುಂಬದವರು ಇಬ್ಬರ ಮದುವೆಗೆ ಹಸಿರು ನಿಶಾನೆ ಸಹ ತೋರಿದ್ದಾರೆ. ಇದೀಗ ಮದುವೆ ಮೂಲಕ ಇಬ್ಬರ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಇಬ್ಬರು ನಿರ್ಧರಿಸಿದ್ದು, ಅಂಧ ಅಂತಾ ಗೊತ್ತಿದ್ದರೂ ಆತನನ್ನು ಒಪ್ಪಿಕೊಂಡಿರುವ ಚಾಂದಿನಿ ನಿರ್ಧಾರಕ್ಕೆ ಗ್ರಾಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.(ಏಜೆನ್ಸೀಸ್​)

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಟ್ವಿಟರ್ ಸಿಇಒಗೆ ಸ್ವಾತಂತ್ರ್ಯದ ಕಾಳಜಿಯ ಕುರಿತು ರಾಹುಲ್ ಟ್ವೀಟ್;

Thu Jan 27 , 2022
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಡಿಸೆಂಬರ್ 27 ರಂದು ಟ್ವಿಟರ್ ಸಿಇಒ ಪರಾಗ್ ಅಗರ್‌ವಾಲ್‌ಗೆ ಬರೆದ ಪತ್ರದಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್ ಭಾರತದಲ್ಲಿ ಮುಕ್ತ ಮತ್ತು ನ್ಯಾಯಯುತ ಭಾಷಣವನ್ನು ತಡೆಯುವಲ್ಲಿ ತಿಳಿಯದೆ ಸಹಕರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಅವರ ಮೇಲೆ ನೆರಳು ನಿಷೇಧವಿದೆ, ಅದು ಅವರ ಟ್ವೀಟ್‌ಗಳನ್ನು ಮತ್ತು ಅವರನ್ನು ಅನುಸರಿಸುವ ಜನರ ಸಂಖ್ಯೆಯನ್ನು ನಿರ್ಬಂಧಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್ (WSJ) ಬುಧವಾರ […]

Advertisement

Wordpress Social Share Plugin powered by Ultimatelysocial