ಯಥಾಸ್ಥಿತಿಯಲ್ಲಿ ಅಮೆರಿಕದ ಬಡ್ಡಿದರ; ಚಿನ್ನ ಮತ್ತು ಷೇರುಗಳ ಮೇಲೇನು ಪರಿಣಾಮ?

US Interest Rates Unchanged: ಅಮೆರಿಕದ ಫೆಡರಲ್ ರಿಸರ್ವ್ ನಿನ್ನೆ ತನ್ನ ನಿರ್ಧಾರಗಳನ್ನು ಪ್ರಕಟಿಸಿದ್ದು, ಬಡ್ಡಿದರ ಶೇ. 5.25ರಿಂದ ಶೇ. 5.50ರಲ್ಲಿ ಮುಂದುವರಿಸಿದೆ. 2001ರಿಂದೀಚೆ ಅಮೆರಿಕದಲ್ಲಿ ಅತಿಹೆಚ್ಚಿನ ಬಡ್ಡಿದರ ಇದಾಗಿದೆ. ಈ ವರ್ಷದೊಳಗೆ ಬಡ್ಡಿದರ ಹೆಚ್ಚಿಸುವ ಸುಳಿವನ್ನೂ ನೀಡಲಾಗಿದೆ.
ಅಮೆರಿಕದಲ್ಲಿ ಹಣದುಬ್ಬರ ಏರಿಕೆಯಾದರೂ ಆರ್ಥಿಕತೆ ಉತ್ತಮಗೊಂಡಿರುವುದರಿಂದ ಬಡ್ಡಿದರ ಯಥಾಸ್ಥಿತಿ ಪಾಲಿಸಲು ನಿರ್ಧರಿಸಿರುವ ಸಾಧ್ಯತೆ ಇದೆ.ನವದೆಹಲಿ, ಸೆಪ್ಟೆಂಬರ್ 21: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಫೆಡರಲ್ ರಿಸರ್ವ್ (Federal Reserve) ನಿರೀಕ್ಷಿಸಿದಂತೆ ಈ ಬಾರಿ ಬಡ್ಡಿದರದಲ್ಲಿ ಯಾವ ಬದಲಾವಣೆ ಮಾಡಿಲ್ಲ. ಶೇ. 5.25ರಿಂದ ಶೇ. 5.50ರ ಶ್ರೇಣಿಯಲ್ಲಿ ಬಡ್ಡಿದರ ಮುಂದುವರಿಸಲು ಅದು ನಿರ್ಧರಿಸಿದೆ. ಆದರೆ, ಹಣದುಬ್ಬರ (Inflation) ತಗ್ಗಿಸಲು ಈ ವರ್ಷದಲ್ಲಿ ಒಮ್ಮೆಯಾದರೂ ಬಡ್ಡಿದರ ಹೆಚ್ಚಿಸುವ ಸುಳಿವನ್ನು ಫೆಡರಲ್ ರಿಸರ್ವ್ ನೀಡಿದೆ. ಈಗಿರುವ ಬಡ್ಡಿದರ ಕಳೆದ 2 ದಶಕದಲ್ಲೇ ಗರಿಷ್ಠ ಮಟ್ಟದ್ದಾಗಿದೆ. 2001ರಲ್ಲಿ ಈ ಮಟ್ಟದ ಬಡ್ಡಿದರ ಇತ್ತು.

ಜುಲೈನಲ್ಲಿ ಫೆಡರಲ್ ರಿಸರ್ವ್ 25 ಬೇಸಿಸ್ ಅಂಕಗಳಷ್ಟು ಬಡ್ಡಿದರ ಹೆಚ್ಚಿಸಿತ್ತು. ಸತತ 11ನೇ ಬಾರಿ ಬಡ್ಡಿದರ ಏರಿಕೆಯಾಗಿ ಈಗಿರುವ 5.25ರಿಂದ 5.50 ಪ್ರತಿಶತ ತಲುಪಿತ್ತು. ಅಮೆರಿಕ್ಕೆ ಹಣದುಬ್ಬರವನ್ನು ಶೇ. 2ಕ್ಕೆ ತಂದು ನಿಲ್ಲಿಸುವುದು ದೊಡ್ಡ ಸವಾಲಿನ ಕೆಲಸವಾಗಿದೆ. ಜುಲೈನಲ್ಲಿ ಶೇ. 3.2ರಷ್ಟಿದ್ದು ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ. 3.7 ತಲುಪಿದೆ. ಈ ವರ್ಷದೊಳಗೆ ಇನ್ನೊಮ್ಮೆ ಬಡ್ಡಿದರ ಹೆಚ್ಚಿಸುವುದು ಸೆಂಟ್ರಲ್ ಬ್ಯಾಂಕ್​ಗೆ ಅನಿವಾರ್ಯವಾಗಬಹುದು.

2023 ಜುಲೈಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ; ಇಪಿಎಫ್‌ಒಗೆ ಸೇರ್ಪಡೆಯಾದ 18.75 ಲಕ್ಷ ವೇತನದಾರರು

ಆದರೆ, ಅಮೆರಿಕದ ಆರ್ಥಿಕತೆ ಗರಿಗೆದರಿದೆ. ಉದ್ಯೋಗಸೃಷ್ಟಿ ಮಂದಗೊಂಡಿದೆಯಾದರೂ ನಿರುದ್ಯೋಗ ಪ್ರಮಾಣ ಕಡಿಮೆ ಇದೆ. ಈ ಸಂದರ್ಭದಲ್ಲಿ ಬ್ಯಾಂಕ್ ಬಡ್ಡಿದರ ಹೆಚ್ಚಳವಾದರೆ ಆರ್ಥಿಕತೆ ಚಟುವಟಿಕೆ ಮಂದಗೊಳ್ಳುವ ಭಯ ಇದೆ. ಹೀಗಾಗಿ, ಬಡ್ಡಿದರ ಹೆಚ್ಚಿಸದೇ ಇರಬಹುದು.

ಭಾರತದ ಷೇರುಪೇಟೆ ಮತ್ತು ಚಿನ್ನದ ಮೇಲೇನು ಪರಿಣಾಮ?

ಅಮೆರಿಕದ ಬಡ್ಡಿದರ ಯಥಾಸ್ಥಿತಿ ನಿರ್ಧಾರ ನಿರೀಕ್ಷಿತವೇ ಆಗಿದೆ. ಮುಂದಿನ ಒಂದು ವರ್ಷದವರೆಗೂ ಅಮೆರಿಕದಲ್ಲಿ ಬಡ್ಡಿದರ ಹೆಚ್ಚಿನ ಮಟ್ಟದಲ್ಲೇ ಇರುತ್ತದೆ ಎಂಬುದು ಬಹಿರಂಗವಾಗಿ ಗೊತ್ತಿರುವ ರಹಸ್ಯ. ಆದರೆ, ಅಮೆರಿಕದ ಆರ್ಥಿಕ ಬೆಳವಣಿಗೆ ಎತ್ತ ಸಾಗುತ್ತದೆ ಎಂಬುದು ಜಾಗತಿಕ ಮಾರುಕಟ್ಟೆಗಳಿಗೆ ಇದ್ದ ಕುತೂಹಲ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಈ ವರ್ಷದ ಆರ್ಥಿಕತೆ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಇದು ಭಾರತದ ಷೇರುಮಾರುಕಟ್ಟೆ ಮೇಲೆಯೂ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.

ಪ್ರಧಾನಿ ನರೇಂದ್ರ ಮೋದಿ ಹೊಸ ವಾಟ್ಸಾಪ್ ಚಾನಲ್; ಒಂದೇ ದಿನದಲ್ಲಿ 10 ಲಕ್ಷ ಫಾಲೋಯರ್ಸ್

ಚಿನ್ನದ ಮೇಲಿನ ಬೇಡಿಕೆ ಮೊದಲಿನ ರೀತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಇರುವುದಿಲ್ಲ. ಚಿನ್ನದ ಬೆಲೆ ಏರಿಕೆಯಾದರೂ ತೀರಾ ಎತ್ತರಕ್ಕೆ ಹೋಗುವುದು ಅನುಮಾನ ಎನ್ನಲಾಗಿದೆ.

Please follow and like us:

tmadmin

Leave a Reply

Your email address will not be published. Required fields are marked *

Next Post

Bank Accounts: ಬ್ಯಾಂಕ್ ಖಾತೆಗಳಲ್ಲಿ ಉಳಿಸಿದ ಹಣ ನಮ್ಮ ಸಾವಿನ ನಂತರ ಏನಾಗುತ್ತೆ?

Thu Sep 21 , 2023
ಸಾಮಾನ್ಯವಾಗಿಯೇ ನಮ್ಮಲ್ಲಿರುವ ಹಣವನ್ನು ನಾವು ಬ್ಯಾಂಕ್‌ ಖಾತೆಯಲ್ಲಿ ಜೋಪಾನವಾಗಿರಿಸಿಕೊಳ್ಳುವುದು ರೂಢಿ. ಪ್ರಸ್ತುತ ದೇಶದಲ್ಲಿ ಬಹುತೇಕ ಜನರಲ್ಲಿ ಬ್ಯಾಂಕ್‌ ಖಾತೆಗಳಿದ್ದು, ಹಣವನ್ನು ಈ ಖಾತೆಯಲ್ಲಿ ಉಳಿತಾಯ ಮಾಡುತ್ತಾರೆ. ಆದರೆ ನಿಮ್ಮ ಸಾವಿನ ನಂತರ ನಿಮ್ಮ ಹಣ ಏನಾಗುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ?   ನೀವು ಮರಣ ಹೊಂದಿದ ಬಳಿಕ ನಿಮ್ಮ ಖಾತೆಯಲ್ಲಿದ್ದ ಹಣ, ಉಳಿತಾಯ ಮೊತ್ತದ ಬಗ್ಗೆ ನಿಮ್ಮಲ್ಲಿ ಹಲವು ಪ್ರಶ್ನೆಗಳು ಇರಲೇಬೇಕು. ಅದರಲ್ಲಿ ಮೊದಲನೆಯದಾಗಿ, ನಿಮ್ಮ ಬ್ಯಾಂಕ್ ಖಾತೆಗೆ ನಾಮಿನಿಯನ್ನು […]

Advertisement

Wordpress Social Share Plugin powered by Ultimatelysocial