ರಾಗಿಣಿ ಚಂದ್ರನ್ ಲಾ ಕುತೂಹಲ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ

ಪುನೀತ್ ರಾಜಕುಮಾರ್ ನರ‍್ಮಾಣದ ‘ಲಾ’ ಚಿತ್ರವು ಇದೇ ತಿಂಗಳ ೧೭ರಂದು ಅಮೇಜಾನ್ನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ರಾಗಿಣಿ ಈ ಹಿಂದೆ ಕೆಲವು ಜಾಹೀರಾತುಗಳಲ್ಲಿ ಮತ್ತು ರಚಿತಾ ರಾಮ್ ನಿರ್ಮಾಣದ ‘ರಿಷಭ ಪ್ರಿಯ’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದರು. ಈಗ ‘ಲಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ರಾಗಿಣಿಗೆ ರೊಮ್ಯಾಂಟಿಕ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸುವುದು ಇಷ್ಟವಿರಲಿಲ್ಲವಂತೆ. ‘ನಾನು ಒಂದು ಚಾಲೆಂಜಿಂಗ್ ಪಾತ್ರದ ನಿರೀಕ್ಷೆಯಲ್ಲಿದ್ದೆ. ಒಳ್ಳೆಯ ಚಿತ್ರಕಥೆಗಾಗಿ ಕಾಯುತ್ತಿದ್ದೆ. ಅವೆರಡೂ ನನಗೆ ‘ಲಾ’ ಚಿತ್ರದ ಮೂಲಕ ಸಿಕ್ಕಿತು ಎಂದು ಅವರು ಹೇಳುತ್ತಾರೆ. ‘ಲಾ ಚಿತ್ರದಲ್ಲಿ ರಾಗಿಣಿ ಜತೆಗೆ ಅಚ್ಯುತ್ ಕುಮಾರ್, ಸುಧಾರಾಣಿ, ಅವಿನಾಶ್, ಮುಖ್ಯಮಂತ್ರಿ ಚಂದ್ರು ಮುಂತಾದವರು ಅಭಿನಯಿಸಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಎಂ. ಗೋವಿಂದ ನರ‍್ವಿುಸಿರುವ ಈ ಚಿತ್ರವು, ಚಿತ್ರಮಂದಿರಗಳಿಗಿಂಥ ಮುನ್ನ ಅಮೇಜಾನ್ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಸರೋಜ್ ಖಾನ್ ವಿಧಿವಶ

Fri Jul 3 , 2020
ಬಾಲಿವುಡ್‌ನ ಖ್ಯಾತ ಕೊರಿಯೋಗ್ರಾಫರ್ ಸರೋಜ್ ಖಾನ್ ತಡರಾತ್ರಿ ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿAದ ಬಳಲುತ್ತಿದ್ದ ಸರೋಜ್ ಖಾನ್ ಜೂನ್ ೧೭ರಲ್ಲಿ ಮುಂಬೈನ ಗುರುನಾನಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಿನ್ನೆ ರಾತ್ರಿ ಹೃದಯಾಘಾತ ಸಂಭವಿಸಿದ್ದು ಅವರು ಕೊನೆಯುಸಿರೆಳೆದಿದ್ದಾರೆ. ೧೯೭೨ ರಲ್ಲಿ ತೆರೆಕಂಡ ನಾಮ್ ಸಿನಿಮಾಗೆ ನೃತ್ಯ ಸಂಯೋಜನೆ ಮಾಡುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದ ಸರೋಜ್ ಖಾನ್ ಸಾವಿರಾರು ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಮೂರು ಬಾರಿ ರಾಷ್ಟç ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. Please follow and […]

Advertisement

Wordpress Social Share Plugin powered by Ultimatelysocial