ರಾಜ್ಯದ ಜನತೆಗೆ ಮತ್ತೊಂದು ಶಾಕ್ : ಇಂದಿನಿಂದ `ಜಂಬೋ ಹಾಲಿನ’ ದರ 3 ರೂ. ಹೆಚ್ಚಳ

 

ಬೆಂಗಳೂರು: ಈಗಾಗಲೇ ನಂದಿನಿ ಹಾಲು, ಮೊಸರು, ತುಪ್ಪ ಸೇರಿದಂತೆ ನಂದಿನಿ ಉತ್ಪನ್ನಗಳ  ದರವನ್ನು ಕೆಎಂಎಫ್ ನಿಂದ ಹೆಚ್ಚಳ ಮಾಡಲಾಗಿತ್ತು. ಈಗ ನಂದಿನಿ ಜಂಬೂ ಹಾಲಿನ ದರವನ್ನು 3 ರೂ ಹೆಚ್ಚಳ ಮಾಡಿ ಆದೇಶಿಸಿದೆ.

ಈ ದರ ಇಂದಿನಿಂದ ಜಾರಿಗೆ ಬರಲಿದೆ ಎಂಬುದಾಗಿ ಹೇಳಿದೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ಕೆಎಂಎಫ್, ಜಂಬೂ ಪ್ಯಾಕೇಟ್ ಹಾಲಿನದ ದರವನ್ನು 3 ರೂ ಹೆಚ್ಚಳ ಮಾಡಲಾಗುತ್ತಿದೆ. ದರ ಹೆಚ್ಚಳದ ಹಿನ್ನಲೆಯಲ್ಲಿ ನಂದಿನಿ ಜಂಬೂ ಪ್ಯಾಕೇಟ್ ಹಾಲಿನ ದರಗಳು ಫೆಬ್ರವರಿ 11 ರ ಇಂದಿನಿಂದ 231ರಿಂದ 234 ರೂಗೆ ಏರಿಕೆಯಾಗಲಿವೆ ಎಂದು ಹೇಳಿದೆ.

ಅಂದಹಾಗೇ ನಂದಿನಿ ಜಂಬೂ ಪ್ಯಾಕೇಟ್ ಹಾಲು 6 ಲೀಟರ್ ಸಾಮರ್ಥ್ಯದ್ದಾಗಿದೆ. ಈ ದರವನ್ನು ಇಂದಿನಿಂದ ಜಾರಿಗೆ ಬರುವಂತೆ 3 ರೂ ಹೆಚ್ಚಿಸಿದ ಪರಿಣಾಮ 234 ರೂ ಆಗಲಿದೆ. ಈ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುದೀಪ್‌ಗೆ ಆಹ್ವಾನ ತಲುಪಿತ್ತೆ? ಗೊಂದಲ ಮೂಡಿಸಿದ ಚಿತ್ರ, ರಾಮುಲು ಬಗ್ಗೆಯೂ ಚರ್ಚೆ!

Sat Feb 11 , 2023
ದಾವಣಗೆರೆ ಜಿಲ್ಲೆ, ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆದ ‘ವಾಲ್ಮಿಕಿ ಜಾತ್ರೆ’ ಈಗ ಚರ್ಚೆಯ ವಿಷಯವಾಗಿದೆ. ಸಮುದಾಯದ ಏಳಿಗೆ ಇನ್ನಿತರೆ ರಾಜಕೀಯ ಕಾರಣಗಳಿಗೆ ಅಲ್ಲದೆ ನಟ ಸುದೀಪ್‌ ಗೈರು ಹಾಜರಿ ಹಾಗೂ ಸುದೀಪ್‌ರ ಅಭಿಮಾನಿಗಳು ವಾಲ್ಮಿಕಿ ಜಾತ್ರೆಯಲ್ಲಿ ನಡೆದುಕೊಂಡ ರೀತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, ಮಾಧ್ಯಮಗಳಲ್ಲಿ ಜೋರಾದ ಚರ್ಚೆಗಳಾಗುತ್ತಿವೆ.ವಾಲ್ಮಿಕಿ ಜಾತ್ರೆಯ ಮೊದಲ ದಿನ ನಟ ಸುದೀಪ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ ಎನ್ನಲಾಗಿತ್ತು. ಆಯೋಜಕರು ಸಹ ಇದನ್ನೇ ಹೇಳಿದ್ದರು. ಆಹ್ವಾನ […]

Advertisement

Wordpress Social Share Plugin powered by Ultimatelysocial