ರಾಯಚೂರು ಜಿಲ್ಲೆಯಾ ರಸ್ತೆಗಳಲ್ಲಿ ಮಲಗಿದ ಪಶುಗಳು

ರಾಯಚೂರು ಜಿಲ್ಲೆಯಾದ್ಯಂತ ರಸ್ತೆಗಳ ಮದ್ಯೆ ಹೆಚ್ಚಾದ ದನಗಳಿಂದ ಅಪಾಘಾತ ಸಂಭವಿಸುತ್ತಿರುವುದನ್ನು ಗಮನಿಸಿ ದನಗಳನ್ನು ಗೋಶಾಲೆಗೆ ಸೇರಿಸಿ ಪೊಲೀಸ್ ಇಲಾಖೆ ವಾರಸುದಾರರಿಗ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ಇಲಾಖೆ ಮತ್ತು ನಗರಸಭೆ ರಾಯಚೂರು ವತಿಯಿಂದ ವಿಶೇಷ ಕಾರ್ಯಾಚರಣೆ ಮಾಡುವ ಮೂಲಕ ನಗರದ ವಿವಿಧ ರಸ್ತೆಗಳಲ್ಲಿ ತಿರುಗಾಡುತ್ತಿದ್ದ, ಮಲಗಿದ 34  ಬಿಡಾಡಿ ದನಗಳನ್ನು ಹಿಡಿದು ಗೋ ಶಾಲೆಗೆ ಸಾಗಿಸಲಾಗಿದೆ. ಈಗಾಗಲೇ ಅನೇಕ ಬಾರಿ ಎಚ್ಚರಿಕೆ ನೀಡಿದರು ಮತ್ತೆ ಮತ್ತೆ ಬೀದಿಗೆ ಬಿಡುವದರಿಂದ ವಾರಸುದಾರರಿಗೆ ದನಗಳನ್ನು ಮರಳಿ ಕೊಡುವುದಿಲ್ಲ.ದನಕರುಗಳನ್ನು ಬೀದಿಗೆ ಬಿಡುವುದರಿಂದ ಅಪಘಾತಗಳು,ಕಳ್ಳತನ ನಡೆದು  ಗಲಾಟೆ-ಗಲಭೆಗಳು ಸಂಭವಿಸಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಬರುವದರಿಂದ ಪ್ರಕರಣಗಳಾಗುವ ಸಂದರ್ಭ ಇರುತ್ತದೆ. ಯಾವುದೇ ಕಾರಣಕ್ಕೂ ದನಗಳನ್ನು ಮರಳಿ ಹಿಂತಿರುಗಿಸಲಾಗುವುದಿಲ್ಲ  ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ದೇವರು ವರ ಕೊಟ್ರು ಪೂಜಾರಿ ಕೊಡಲಿಲ್ಲ

Mon Jul 20 , 2020
ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ನಿಧಿಯಿಂದ, ಕೊಲ್ಲೂರು ಗ್ರಾಮದಿಂದ ಜೋನೇಕೇರಿ ಗ್ರಾಮದವರಿಗೆ ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೆ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡಿದ ಕಾರಣ ಅಧಿಕಾರಿಗಳು ಮಾಡಿರುವ ಎಡವಟ್ಟಿನಿಂದ ಮಳೆಯಾದರೆ ಮನೆಗಳಿಗೆ ನೀರು ನುಗ್ಗುತ್ತಿವೆ.ಯಾವುದೇ ಒಂದು ರಸ್ತೆ ನಿರ್ಮಾಣ ಮಾಡಬೇಕಾದರೆ ಅದರ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಮಾಡಲೇಬೇಕಾಗುತ್ತದೆ.ಸರ್ಕಾರ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿ ಮುಖಾಂತರ  ಈ ಭಾಗದ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದ್ದರು ಅಧಿಕಾರಿಗಳು ಸರಿಯಾಗಿ ಅದನ್ನು […]

Advertisement

Wordpress Social Share Plugin powered by Ultimatelysocial