ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಲೀಕ ಮುಕೇಶ್ ಅಂಬಾನಿ ಮತ್ತೊಮ್ಮೆ ಅಗ್ರಸ್ಥಾನ!

. 2021ರಲ್ಲಿ ಇದೇ ಮೂವರು ಬಿಲಿಯನೇರ್‌ಗಳು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದರು. ವರದಿ ಪ್ರಕಾರ, ಮುಕೇಶ್ ಅಂಬಾನಿ ಒಟ್ಟು ಸಂಪತ್ತು 90. Additionally, we have online casinos where you can bet on the top overseas soccer leagues including: clickmiamibeach.com Italy, Spain, France and England. 7 ಶತಕೋಟಿ ಡಾಲರ್ ನಷ್ಟಿದೆ. ಕಳೆದ ಆರ್ಥಿಕ ವರ್ಷಕ್ಕಿಂತ ಶೇ.7ರಷ್ಟು ಹೆಚ್ಚಳವಾಗಿದೆ.

ವಿಶ್ವದ 10ನೇ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ:

ಫೋರ್ಬ್ಸ್‌ನ ಪಟ್ಟಿಯಲ್ಲಿ ದೇಶದ ಅಗ್ರಮಾನ್ಯ ಶ್ರೀಮಂತ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಾಗತಿಕ ಮಟ್ಟದಲ್ಲಿಯೂ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜಗತ್ತಿನ ಅಗ್ರಮಾನ್ಯ ಶ್ರೀಮಂತರ ಪಟ್ಟಿಯಲ್ಲಿ ಇದೇ ಮುಕೇಶ್ ಅಂಬಾನಿ 10ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

ದೇಶದ ಎರಡನೇ ಅತಿದೊಡ್ಡ ಶ್ರೀಮಂತ ಅದಾನಿ:

2022ನೇ ಸಾಲಿನ ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿಯ ನಂತರದ ಸ್ಥಾನದಲ್ಲಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ಗುರುತಿಸಿಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅದಾನಿಯವರ ಒಟ್ಟು ನಿವ್ವಳ ಆಸ್ತಿ 90 ಬಿಲಿಯನ್ ಡಾಲರ್ ಆಗಿದೆ.

 

ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡ ಸೈರಸ್ ಪೂನಾವಾಲಾ:

ಭಾರತದಲ್ಲಿ ಲಸಿಕೆ ಉತ್ಪಾದಿಸುವ ಸೈರಸ್ ಪೂನಾವಾಲಾ, ಅವರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) COVID-19 ವಿರುದ್ಧದ ಲಸಿಕೆಯನ್ನು ಉತ್ಪಾದಿಸುವಲ್ಲಿ ಮುಂಚೂಣಿಯಲ್ಲಿದೆ. ಅದು ಅಂದಾಜು 24.3 ಶತಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಐದನೇ ಸ್ಥಾನದಲ್ಲಿ ಡಿ-ಮಾರ್ಟ್ ಸಂಸ್ಥಾಪಕ:

ಕಳೆದ ವರ್ಷ ವಿಶ್ವದ 100 ಶ್ರೀಮಂತ ವ್ಯಕ್ತಿಗಳ ಪಟ್ಟಿಗೆ ಡಿ-ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ ಎಂಟ್ರಿ ಪಡೆದುಕೊಂಡಿದ್ದರು. 2022ರ ಪೋರ್ಬ್ಸ್ ಪಟ್ಟಿಯಲ್ಲಿ ಅದೇ ಡಿ-ಮಾರ್ಟ್ ಸಂಸ್ಥಾಪಕ ರಾಧಾಕಿಶನ್ ದಮಾನಿ, 20 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಟಾಪ್-5 ನಂತರದ ಸ್ಥಾನಗಳಲ್ಲಿ ಗುರುತಿಸಿಕೊಂಡವರು:

ಆರ್ಸೆಲರ್ ಮಿತ್ತಲ್ ಕಾರ್ಯಕಾರಿ ಅಧ್ಯಕ್ಷ ಲಕ್ಷ್ಮಿ ಮಿತ್ತಲ್ ಅವರು 17.9 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದು, ಆರನೇ ಸ್ಥಾನದಲ್ಲಿದ್ದಾರೆ. ಓಪಿ ಜಿಂದಾಲ್ ಗ್ರೂಪಿನ ಸಾವಿತ್ರಿ ಜಿಂದಾಲ್ 17.7 ಶತಕೋಟಿ ಡಾಲರ್ ಮೂಲಕ ಏಳನೇ ಸ್ಥಾನದಲ್ಲಿದ್ದಾರೆ. ಅದೇ ರೀತಿ 16.5 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ ಆದಿತ್ಯ ಬಿರ್ಲಾ ಗ್ರೂಪ್ ಮುಖ್ಯಸ್ಥ ಕುಮಾರ್ ಬಿರ್ಲಾ ಎಂಟನೇ ಸ್ಥಾನದಲ್ಲಿದ್ದಾರೆ. ಸನ್ ಫಾರ್ಮಾಸ್ಯುಟಿಕಲ್ಸ್ ಮುಖ್ಯಸ್ಥ ದಿಲೀಪ್ ಶಾಂಘ್ವಿ 15.6 ಶತಕೋಟಿ ಡೌಲರ್ ಮೌಲ್ಯದೊಂದಿಗೆ ಒಂಬತ್ತನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನು 14 ಶತಕೋಟಿ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ ಎಂಡಿ ಉದಯ್ ಕೋಟಾಕ್ ಹತ್ತನೇ ಸ್ಥಾನದಲ್ಲಿ ಭದ್ರವಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಏಪ್ರಿಲ್ ಎರಡನೇ ವಾರ ಭಾರತೀಯ ಚಿತ್ರರಂಗದ ಬಾಕ್ಸಾಫೀಸ್‌ನಲ್ಲಿ ಮಹಾ ಕಾಳಗ ನಡೆಯಲಿದೆ.

Wed Apr 6 , 2022
  ಏಪ್ರಿಲ್ ಎರಡನೇ ವಾರ ಭಾರತೀಯ ಚಿತ್ರರಂಗದ ಬಾಕ್ಸಾಫೀಸ್‌ನಲ್ಲಿ ಮಹಾ ಕಾಳಗ ನಡೆಯಲಿದೆ. ಗಲ್ಲಾ ಪೆಟ್ಟಿಗೆಯಲ್ಲಿ ದಕ್ಷಿಣ ಭಾರತದ ಎರಡು ಬಿಗ್ ಬಜೆಟ್ ಸಿನಿಮಾಗಳು ಕಾದಾಟಕ್ಕೆ ಇಳಿದಿದ್ದರೆ, ಇನ್ನೊಂದು ಕಡೆ ಬಾಲಿವುಡ್‌ನಿಂದ ‘ಜೆರ್ಸಿ’ ತೊಟ್ಟು ಬರುತ್ತಿದ್ದಾರೆ ಶಾಹಿದ್ ಕಪೂರ್. ಈ ಮೂವರಲ್ಲಿ ಬಾಕ್ಸಾಫೀಸ್‌ ಕೊಳ್ಳೆ ಹೊಡೆಯುವುದು ಯಾರು? ಅನ್ನೋದು ಸದ್ಯಕ್ಕೀರುವ ಅತೀ ದೊಡ್ಡ ಕುತೂಹಲ. ಶಾಹಿದ್ ಕಪೂರ್‌ ಬಾಲಿವುಡ್‌ನ ಮೋಸ್ಟ್ ಹ್ಯಾಪನಿಂಗ್ ಸ್ಟಾರ್. ಬ್ಯಾಕ್ ಟು ಬ್ಯಾಕ್ ಸೂಪರ್‌ ಹಿಟ್ […]

Advertisement

Wordpress Social Share Plugin powered by Ultimatelysocial