ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ-ಸಲಿಂ ಅಹಮ್ಮದ್

ಕಾಂಗ್ರೆಸ್ ಪದಾಧಿಕಾರಿ ನೇಮಕದ ಬಗ್ಗೆ ಇನ್ನು ಯಾವುದೇ ಚರ್ಚೆ ನಡೆದಿಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸಲಿಂ ಅಹಮ್ಮದ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹಿಂದೆ ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದಾಗ ಇದ್ದ ಪದಾಧಿಕಾರಿಗಳೇ ಇದ್ದಾರೆ. ನೋಡಬೇಕು ಏನ ಚರ್ಚೆ ಆಗುತ್ತೆ ಅಂತಾ. ಇನ್ನೂ ಯುತ್ ಕಾಂಗ್ರೆಸ್ ಅಧ್ಯಕ್ಷ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಕೂಡ ಯಾವುದೇ ನಿರ್ಧಾರ ಮಾಡಿಲ್ಲ. ಹಲವು ಆಕಾಂಕ್ಷಿಗಳು ಇದ್ದಾರೆ ಆದ್ರೆ ಎಲ್ಲರ ಅಭಿಪ್ರಾಯ ಪಡೆಯಬೇಕು. ನೋಡೊಣ ಕೆಲವು ದಿನಗಳ ಬಳಿಕ ಇದರ ಬಗ್ಗೆ ಸಭೆ ಮಾಡಿ ಚರ್ಚೆ ಮಾಡುತ್ತೆವೆ. ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಚಿವರ ನಡುವೇ ಗೊಂದಲಗಳಿವೆ. ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ. ಸರಿಯಾದ ಚಿಕಿತ್ಸೆ ಕೂಡ ದೊರೆಯುತ್ತಿಲ್ಲ ಪಿಪಿಇ ಕಿಟ್‌ನಲ್ಲಿ ಹಗರಣ ನಡೆದಿದೆ ಇದರ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಇಂದು ಹಾಸನದಲ್ಲಿ ೪೯ ಕೊರೊನಾ ಕೇಸ್

Mon Jul 6 , 2020
ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತಿದ್ದು, ಹಾಸನದಲ್ಲಿ ಇಂದು ಬರೋಬ್ಬರಿ ೪೯ ಜನರಿಗೆ ಕೊರೋನ ಪಾಸಿಟಿವ್ ಆಗಿದೆ. ಇನ್ನೂ ಹೊಸದಾಗಿ ಕೊರೊನಾ ಪತ್ತೆಯಾಗಿರುವ ಪೈಕಿ ಬೇಲೂರು ತಾಲ್ಲೂಕಿನ ೨, ಚನ್ನರಾಯಪಟ್ಟಣ ತಾಲ್ಲೂಕಿನ ೬, ಹಾಸನ ತಾಲ್ಲೂಕಿನ ೩೬, ಹೊಳೆನರಸೀಪುರ ತಾಲ್ಲೂಕಿನ ೧, ಸಕಲೇಶಪುರ ೪ ಜನರಿಗೆ ಸೇರಿ ಒಟ್ಟು ೪೯ ಜನರಿಗೆ ಕೊರೊನಾ ಪತ್ತೆಯಾಗಿದೆ. Please follow and like us:

Advertisement

Wordpress Social Share Plugin powered by Ultimatelysocial