ಲಾಕ್‌ಡೌನ್ ವೇಳೆ ಸಿಗರೇಟ್ ಕಳ್ಳಸಾಗಣೆ ಹೆಚ್ಚಳ

ಭಾರತದ ಲಾಕ್‌ಡೌನ್ ಸಮಯದಲ್ಲಿ ಸಿಗರೇಟ್ ಕಳ್ಳಸಾಗಣೆ ವ್ಯಾಪಕವಾಗಿ ಹೆಚ್ಚಿದೆ ಎಂದು ಎಫ್ಐಸಿಸಿಐ ಆತಂಕದ ಮಾಹಿತಿ ಹೊರಹಾಕಿದೆ. ಜೂ.೧೨ ರಂದು ನವೀ ಮುಂಬಯಿನ ಬಂದರಿನಲ್ಲಿ ೧೧.೮೮ ಕೋಟಿ ರೂ. ಮೌಲ್ಯದ ಅಕ್ರಮ ವಿದೇಶಿ ಬ್ರ‍್ಯಾಂಡ್ ಸಿಗರೇಟುಗಳನ್ನು ಕಂದಾಯ ಗುಪ್ತಚರ ದಳ ವಶಪಡಿಸಿಕೊಂಡಿತ್ತು. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಎಫ್ಐಸಿಸಿಐ ಕ್ಯಾಸ್ಕೇಡ್ ಅಧ್ಯಕ್ಷ ಅನಿಲ್ ರಜಪೂತ್ ‘ಸಿಗರೇಟ್ ಕಳ್ಳಸಾಗಣೆ ಜಗತ್ತಿನಾದ್ಯಂತ ದೊಡ್ಡ ದಂಧೆಯಾಗಿದೆ. ಕೋವಿಡ್ ಬಿಕ್ಕಟ್ಟಿನ ನಡುವೆ ಈ ದಂಧೆ ನಿಯಂತ್ರಿಸುವ ಸವಾಲೂ ದೇಶಕ್ಕೆ ಎದುರಾಗಿದೆ’ ಎಂದು ಹೇಳಿದ್ದಾರೆ. ಸಿಗರೇಟ್ ಕಳ್ಳಸಾಗಣೆಯಿಂದ ಭಾರತದಲ್ಲಿ ೩.೩೪ ಲಕ್ಷ ಉದ್ಯೋಗ ನಷ್ಟವಾಗಲಿದೆ ಎಂಬ ಇತ್ತೀಚೆಗೆ ಎಫ್ಐಸಿಸಿಐ ಅಧ್ಯಯನ ವರದಿ ಹೇಳಿತ್ತು.

Please follow and like us:

Leave a Reply

Your email address will not be published. Required fields are marked *

Next Post

 ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಪ್ರೆಸ್ ಮೀಟ್ 

Tue Jun 16 , 2020
ಲಾಕ್ ಡೌನ್ ಸಡಿಲಿಕೆ ಬಳಿಕ ಜನದಟ್ಟಣೆ ದಿನೆ ದಿನೆ ಜಾಸ್ತಿಯಾಗಿದೆ. ಜನರ ಓಡಾಟವೂ, ಅಂತರರಾಜ್ಯ ಸಂಚಾರವೂ ಜಾಸ್ತಿಯಾಗಿದೆ. ಎರಡೂವರೆ ತಿಂಗಳ ಕಾಲ ಯಾವುದೇ ಸೋಂಕು ನಮ್ಮಲ್ಲಿ ಇರಲಿಲ್ಲ.ಲಾಕ್ ಡೌನ್ ಸಡಿಲಿಕೆ ಬಳಿಕ ಆರೋಪಿಗಳ ಬಂಧನ, ಕಂಟೈನ್ಮೆಂಟ್ ಜೋನ್ ನಲ್ಲಿ ಕೆಲಸ ಮಾಡುವಾಗ, ಬೀಟ್ ನಲ್ಲಿ ಇದ್ದ ಪೊಲೀಸ್ರಿಗೆ ಸೋಂಕು ತಗುಲಿದೆ. ಸದ್ಯ13 ಜನಕ್ಕೆ ಸೋಂಕು ತಗುಲಿದೆ, ಅದ್ರಲ್ಲಿ ಮೂವರು ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಒಬ್ಬರು ಮೃತಪಟ್ಟಿದ್ದಾರೆ, ಅವರು ಹೊರಗಡೆ ಹೋದಾಗ […]

Advertisement

Wordpress Social Share Plugin powered by Ultimatelysocial